ಗಂಗಾವತಿ.
ನಗರದ ಜುಲೈ ನಗರರದಿಂದ ರಾಣಾ ಪ್ರತಾಪ್ ಸಿಂಹ್ ವೃತ್ತದವರೆಗೆ ಅಭಿವೃದ್ಧಿಪಡಿಸಿರುವ ರಸ್ತೆ ಮಧ್ಯದ ವಿದ್ಯುತ್ ಕಂಬಗಳಿಗೆ ಪುರಾಣ ಇತಿಹಾಸ ಬಿಂಬಿಸುವ ಗೊವಿಂದ ನಾಮ, ಬಿಲ್ಲು, ಗಧೆ ಚಿತ್ರಗಳನ್ನು ಹಾಕಿರುವ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರ ನಿರ್ಧಾರವನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ಈ ಚಿತ್ರಗಳು ನಮ್ಮ ಐತಿಹಾಸಿಕ ಅಂಜನಾದ್ರಿ ಪರ್ವತದ ಪ್ರಶಿದ್ಧಿಗೆ ಪೂರಕವಾಗುತ್ತವೆ. ಈ ಚಿತ್ರಗಳನ್ನು ತೆರವು ಮಾಡಲು ಮುಂದಾದರೆ ಹೊರಾಟ ನಡೆಸಬೇಕಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವಾಲ್ಮೀಕಿ ನಾಯಕ ಸಮಾಜದ ಮುಖಂಡ ಹನುಮಂತಪ್ಪ ನಾಯಕ ಹೇಳಿದ್ದಾರೆ.
ವಿದ್ಯುತ್ ಕಂಬಗಳಿಗೆ ಹಾಕಿರುವ ಚಿತ್ರಗಳ ತೆರವಿಗೆ ಎಸ್ ಡಿಪಿಐ ಸಂಘಟನೆ ವಿರೋಧ ಮಾಡಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಅವರು ತಮ್ಮ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ. ಗಂಗಾವತಿ ತಾಲೂಕು ಪ್ರಾಚೀನ ಮತ್ತು ಪುರಾಣ ಇತಿಹಾಸ ಹೊಂದಿದ ಪ್ರದೇಶವಾಗಿದೆ. ಇಲ್ಲಿ ಹನುಮಂತ ಹುಟ್ಟಿದ ಐತಿಹಾಸಿಕ ಅಂಜನಾದ್ರಿ ಪರ್ವತವಿದೆ. ಈ ಅಂಜನಾದ್ರಿಗೆ ನಿತ್ಯ ಸಾವಿರಾರು ಭಕ್ತರು ಜಾತಿ, ಧರ್ಮಗಳ ಬೇಧವಿಲ್ಲದೆ ದೇಶ, ವಿದೇಶಗಳಿಂದ ದರ್ಶನಕ್ಕೆ ಬರುತ್ತಾರೆ. ಜೊತೆಗೆ ಗಂಡುಗಲಿ ಕುಮಾರರಾಮ, ವಿಜಯನಗರ ಸಾಮ್ರಾಜ್ಯ ಆಡಳಿತ ನಡೆಸಿರುವ ಇತಿಹಾಸ ಹೊಂದಿದೆ. ಮತ್ತು ತಾಲೂಕಿನಾದ್ಯಂತ ಹತ್ತು ಹಲವು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇವೆ. ಪುರಾಣ, ಇತಿಹಾಸವನ್ನು ಬಿಂಬಿಸುವಂತಹ ಚಿತ್ರಗಳು ಜನರ ಮನಸ್ಸಿನಲ್ಲಿ ಶ್ರದ್ಧಾ ಭಕ್ತಿ, ಸಾಹಸ, ದೈರ್ಯಗಳ ಭಾವನೆ ಹೆಚ್ಚಿಸುತ್ತವೆ. ಮತ್ತು ನಗರದ ಸೌಂದರ್ಯೀಕರಣಕ್ಕು ಮೆರಗು ತರುತ್ತವೆ. ಬಿಲ್ಲು, ಬಾಣಗಳು ಅಥವಾ ಗೋವಿಂದನ ನಾಮದ ಚಿತ್ರಗಳು ಯಾವುದೇ ಒಂದು ಧರ್ಮ, ಜಾತಿಗೆ ಸಿಮೀತವಲ್ಲ. ಈ ಸಂಗತಿಗಳನ್ನು ಮನಗಂಡು ಶಾಸಕರು ವಿದ್ಯತ್ ಕಂಬಗಳಿಗೆ ಇಂತಹ ಚಿತ್ರಗಳನ್ನು ಹಾಕುವ ನಿರ್ಧಾರ ತೆಗೆದುಕೊಂಡಿರುವುದು ಈ ಭಾಗದ ಜನರ ಭಾವನೆಗಳ ನಂಬಿಕೆಗೆ ಮನ್ನಣೆ ನೀಡಿದಂತಾಗಿದೆ. ಆದರೆ ಹಿಂದು ವಿರೋಧಿ ಮಾನಸಿಕತೆ ಹೊಂದಿರುವ ಎಸ್ ಡಿಪಿಐನಂತಹ ಸಂಘಟನೆ ಕಾರ್ಯಕರ್ತರು ಅನವಶ್ಯಕ ಗೊಂದಲ ಸೃಷ್ಟಿಸಿ ತೆರವಿಗೆ ಮನವಿ ಸಲ್ಲಿಸಿರುವುದು ಸರಿಯಲ್ಲ. ಅವರು ಮನವಿ ಮಾಡುತ್ತಿದ್ದಂತೆ ಪೂರ್ವಪರ ಯೋಚನೆ ಮಾಡದೇ ಚಿತ್ರಗಳ ಬಗ್ಗೆ ಪೌರಾಯುಕ್ತರು ತಪ್ಪು ಗ್ರಹಿಸುವುದು ಅಥವಾ ತೆರವು ಮಾಡುವ ಕ್ರಮ ಕೈಗೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳಬಾರದು. ಕಂಬಗಳಿಗೆ ಹಾಕಿರುವ ಚಿತ್ರಗಳು ಯಾವುದೇ ಧರ್ಮಗಳ ಭಾವನೆಗೆ ಧಕ್ಕೆ ಬರುವುದಿಲ್ಲ. ದೇಶ, ಧರ್ಮ ವಿರೋಧಿ ಮಾನಸಿಕತೆ ಹೊಂದಿರುವ ಸಂಘಟನೆಗಳಿಗೆ ಮಾತ್ರ ಈ ರೀತಿ ಅನಿಸುತ್ತದೆ. ಗಂಗಾವತಿ ನಗರದಲ್ಲಿ ಸರ್ವ ಧರ್ಮಗಳ, ಸರ್ವ ಜಾತಿ ಜನಾಂಗದವರು ಎಲ್ಲರೊಂದಿಗೆ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಂಬಗಳ ಚಿತ್ರಗಳನ್ನು ಗಂಬೀರವಾಗಿ ಪರಿಗಣಿಸಿ ಕೊಮು ಬಣ್ಣ ಹಚ್ಚುವ ವ್ಯಕ್ತಿಗಳ ಮನವಿಗೆ ಅಧಿಕಾರಿಗಳು ಮನ್ನಣೆ ನೀಡಬಾರದು. ಪೌರಾಯುಕ್ತರು ಯಾವುದೇ ಕಾರಣಕ್ಕೂ ಚಿತ್ರಗಳ ಬಗ್ಗೆ ಅನವಶ್ಯಕ ಗೊಂದಲ ಸೃಷ್ಟಿಸದೆ ಈ ವಿಷಯ ಗಂಭಿರ ಸ್ವರೂಪ ಪಡೆದುಕೊಳ್ಳದಂತೆ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಹನುಮಂತಪ್ಪ ನಾಯಕ ಅಗ್ರಹಿಸಿದ್ದಾರೆ.