ಗಂಗಾವತಿ.
ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಾಹ ವಿಚ್ಚೇಧನಕ್ಕೆ ಮುಂದಾಗಿದ್ದ ಎರಡು ಜೋಡಿ ದಂಪತಿಗಳನ್ನು ಒಂದು ಮಾಡಲಾಯಿತಲ್ಲದೇ ಒಟ್ಟು ೧೯೪೯ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸರಕಾರಕ್ಕೆ ರೂ. 5,58,86,147.00 ಮೊತ್ತವನ್ನು ಜಮಾ ಮಾಡಲಾಯಿತು.
ಶನಿವಾರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಭಾರಿ ಪ್ರಧಾನ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 10472 ಬಾಕಿ ಪ್ರಕರಣಗಳಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್‌ಗಳನ್ನು ಸೇರಿ 2829 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಿದ್ದು, ಅದರಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 125 ಪ್ರಕರಣಗಳು, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 25 ಮೋಟಾರು ವಾಹನ, 2 ವೈವಾಹಿಕ. 23 ಬ್ಯಾಂಕ್ ಪ್ರಕರಣ, 25 ಇನ್ನಿತರ ಪ್ರಕರಣಗಳು ಮತ್ತು ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 12 ಚೆಕ್ ಬೌನ್ಸ್, 2 ಕೌಟಂಬಿಕ ದೌರ್ಜನ್ಯ, 108 ಜನನ ಮರಣ, 843 ಕ್ರೀಮಿನಲ್, ಇನ್ನಿತರ 108 ಪ್ರಕರಣಗಳು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 15 ಚೆಕ್ ಬೌನ್ಸ್, 2 ಕೌಟಂಬಿಕ ದೌರ್ಜನ್ಯ, 75 ಜನನ ಮರಣ, 488 ಕ್ರಿಮಿನಲ್ ಮತ್ತು ಇನ್ನಿತರ 96 ಪ್ರಕರಣ ಸೇರಿ ಒಟ್ಟು 1949 ಪ್ರಕರಣಗಳು ಇತ್ಯರ್ಥಪಡಿಸಲಾಯಿತು. ನಾಲ್ಕು ನ್ಯಾಯಾಲಯದಲ್ಲಿ ಸೇರಿ ರೂ. 5,58,86,147.00 ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಿರುವುದಾಗಿ ನ್ಯಾಯಾಲಯದಿಂದ ಮಾಹಿತಿ ನೀಡಲಾಯಿತು.
ಲೋಕ ಅದಾಲತ್‌ನಲ್ಲಿ ಸಂಘದ ಶರಣಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸುಬಿ, ಕಾರ್ಯದರ್ಶಿ ಮಂಜುನಾಥ ಹೆಚ್.ಎಂ ಸೇರಿದಂತೆ ಇನ್ನಿತರ ವಕೀಲರು ಉಪಸ್ಥಿತರಿದ್ದರು.