ಗಂಗಾವತಿ.
ಮಾಜಿ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಅವರ ನಿಧನದಿಂದಾಗಿ ರಾಜ್ಯಾದ್ಯ ಸರಕಾರ ರಜೆ ಘೋಷಿಸಿ ಸರಕಾರಿ ಕಚೇರಿ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ಅರ್ದಕ್ಕೆ ಹಾರಿಸಿ ಗೌರವ ಸಲ್ಲಿಸುವಂತೆ ಸರಕಾರ ಮಾಡಿರುವ ಆದೇಶವನ್ನು ನಗರದ ಬಿಇಓ ಕಚೇರಿಯಲ್ಲಿ ಉಲ್ಲಂಘನೆ ಮಾಡಲಾಗಿದೆ. ರಾಷ್ಟ್ರಧ್ವಜವನ್ನು ಅರ್ದಕ್ಕೆ ಹಾರಿಸದಿರುವುದನ್ನು ಖಂಡಿಸಿರುವ ಎಸ್ ಎಫ್ ಐ ಬಿಇಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬಿಇಓ ಕಚೇರಿಗೆ ಆಗಮಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಸ್ ಎಫ್ ಐ ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ಕಳೆದ ದಿನ ನಿಧನರಾಗಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಅವರಿಗೆ ಗೌರವ ಸಲ್ಲಿಸಲು ಸರಕಾರ ರಜೆ ಘೋಷಿಸಿ ರಾಷ್ಟ್ರಧ್ಜಜವನ್ನು ಅರ್ದಕ್ಕೆ ಹಾರಿಸಿ ಮೂರು ದಿನ ಶೋಕಾಚರಣೆ ಮಾಡುವಂತೆ ಆದೇಶ ಮಾಡಿದೆ. ಆದರೆ ಬಿಇಓ ಅವರು ಕಚೇರಿಗೆ ರಜೆ ನೀಡಿದ್ದು, ಧ್ವಜವನ್ನು ಅರ್ದಕ್ಕೆ ಹಾರಿಸದೇ ಸರಕಾರದ ಆದೇಶವನ್ನು ಧಿಕ್ಕರಿಸಿದ್ದಾರೆ. ಇದಕ್ಕೆ ಕೇಳಿದರೆ ಬಿಇಒಇ ಅವರು ಉಡಾಫೆ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.
ಈ ಕುರಿತು ಬಿಇಓ ಮಂಜುನಾಥ ಮಾತನಾಡಿ, ರಾಷ್ಟ್ರಧ್ವವನ್ನು ಅರ್ದಕ್ಕೆ ಹಾರಿಸಬೇಕೆಂಬ ನಿಯಮವಿಲ್ಲ. ನಿತ್ಯ ಧ್ವಜ ಹಾರಿಸುತ್ತಿರುವ ಇಲಾಖೆಗಳಿಗೆ ಮಾತ್ರ ಸರಕಾರದ ಆದೇಶ ಅನ್ವಯವಾಗುತ್ತದೆ. ಕಚೇರಿ ಮತ್ತು ಶಾಲೆ, ಕಾಲೇಜ್ ಗೆ ರಜೆ ಘೋಷಣೆ ಮಾಡಿದೆ. ಆದರೆ ದ್ವಜವನ್ನು ನಾವು ಅರ್ದಕ್ಕೆ ಹಾರಿಸಿಲ್ಲ. ಜಿಲ್ಲೆಯ ಯಾವುದೇ ತಾಲೂಕಿನ ಬಿಇಓ ಕಚೇರಿಯಲ್ಲಿಯೂ ಧ್ವಜವನ್ನು ಅರ್ದಕ್ಕೆ ಹಾರಿಸಿಲ್ಲ. ನಗರದ ತಹಶೀಲ್ದಾರ ಕಚೆರಿಯಲ್ಲೂ ಧ್ವಜ ಹಾರಿಸಿಲ್ಲ ಎಂದು ಎಸ್ ಎಫ್ ಐ ಆರೋಪಕ್ಕೆ ಬಿಇಓ ಸ್ಪಷ್ಟನೆ ನೀಡಿದ್ದಾರೆ.