ಗಂಗಾವತಿ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಸಿಬ್ಬಂದಿಗಳ ವಸತಿ ಗೃಹಗಳ ಆವರಣದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.
ಶನಿವಾರ ಸಂಜೆ ದಿಡೀರ್ ಮೊಸಳೆ ಕಂಡ ಕೆಲವರು ಆಶ್ಚರ್ಯ ಮತ್ತು ಗಾಬರಿಗೊಂಡಿದ್ದಾರೆ. ಎಪಿಎಂಸಿ ಯಾರ್ಡ್ ನಲ್ಲಿರುವ ಬಿ.ಎಸ್.ಎನ್.ಎಲ್ ಕಚೇರಿ ಪಕ್ಕದಲ್ಲಿ ಸಿಬ್ಬಂದಿಗಳ ಹಳೆಯ ವಸತಿ ಮನೆಗಳಿವೆ. ಈ ಮನೆಗೆ ಸಮೀಪ ಇರುವ ಮಲೀನ ನೀರಿನ ಹೊಂಡದಲ್ಲಿ ಮೊಸಳೆ ಕಂಡು ಬಂದಿದೆ. ಮದ್ಯಾಹ್ನದ ಸಮಯದಲ್ಲಿ ಮೊಸಳೆ ಬಯಲಿಗೆ ಬಂದಿದ್ದರಿಂದ ಜನರು ನೊಡಿ ಆತಂಕಗೊಂಡಿದ್ದಾರೆ. ಜನರ ಗದ್ದಲಕ್ಕೆ ಮೊಸಳೆ ಹೊಂಡದಲ್ಲಿ ಹೊಗಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಬಂದು ಪರಿಶೀಲಿಸಿದ್ದು, ನಾಳೆ ಮೊಸಳೆಯನ್ನು ಹಿಡಿಯುವುದಾಗಿ ತಿಳಿಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಎಪಿಎಂಸಿ ಹಮಾಲರ ಕಾಲೋನಿ ಹಿಂದುಗಡೆ ಉಪ ಕಾಲುವೆ ಇದ್ದು, ಈ ಕಾಲುವೆ ಮೂಲಕ ಹೊರಗೆ ಬಂದಿರುವ ಮೊಸಳೆ ಹೊಂಡದಲ್ಲಿಅವಿತುಕೊಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.