ಸಮರ್ಥವಾಣಿ ವಾರ್ತೆ.
ಕುಕನೂರು,ಅ.30: ಕೊಪ್ಪಳ ಜಿಲ್ಲೆಯಲ್ಲೂ ವಕ್ಫ್ ಭೂ ಆತಂಕ ರಿಂಗುಣಿಸುತ್ತಿದ್ದು, ಜಿಲ್ಲೆಯ ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ 700 ಎಕರೆ ಮತ್ತು ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ 200 ಎಕರೆ ಸುಮಾರು 910 ಎಕರೆ ರೈತರ ಜಮೀನುಗಳು, ಸರ್ಕಾರಿ ನಿರ್ವಶನಗಳ ಪಹಣಿ ಪತ್ರಿಕೆ ಕಾಲಂ 11ರಲ್ಲಿ ಅಕ್ರಮವಾಗಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ತಕ್ಷಣ ವಕ್ಫ್ ಹೆಸರನ್ನು ಅಳಿಸದಿದ್ದರೆ ರೈತ ಸಂಘಟನೆಗಳ ನೇತೃತ್ವದಲ್ಲಿ ಜಂಟಿಯಾಗಿ ಉಗ್ರ ಹೋರಾಟ ನಡೆಸಲು ಸಜ್ಜಾಗಬೇಕಾಗುತ್ತದೆ ಎಂದು ಕ್ರಾಂತಿಕಾರಿ ರೈತ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಎನ್.ಕುಕನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ್ಯಂತ ಪ್ರತಿ ಜಿಲ್ಲೆಯಲ್ಲಿ ಅಂದಾಜು ಪ್ರಕಾರ 40 ಸಾವಿರ ಎಕರೆ ಜಮೀನನ್ನು ವಕ್ಫ್ ಬೋರ್ಡ್ ಹೊಂದಿದ್ದು. ಇಸ್ಲಾಂ ಧರ್ಮೀಯರು ಇಲ್ಲದಿರುವ ಪ್ರದೇಶ ಗಳಲ್ಲಿಯೂ ಆಸ್ತಿಯನ್ನು ಹೊಂದಿ ರುವುದು ಆಶ್ಚರ್ಯಕರವಾಗಿದೆ.
ಕೊಪ್ಪಳ ಜಿಲ್ಲೆಯ ಅವಳಿ ತಾಲೂಕು ಗಳಾದ ಕುಕನೂರು ತಾಲೂಕಿನಲ್ಲಿ 700 ಎಕರೆ ಹಾಗೂ ಯಲಬುರ್ಗಾ ತಾಲೂಕುಗಳಲ್ಲಿ ಎರಡು ನೂರು ಹತ್ತು ಎಕರೆ ಸೇರಿ ಒಟ್ಟು 910 ಎಕರೆ ರೈತರ ಜಮೀನುಗಳ ಪಹಣಿ ಪತ್ರಿಕೆಯ ಕಲಂ 11 ರಲ್ಲಿ ವಕ್ಫ್ ಬೋರ್ಡ್ ಎಂದು ಸೇರ್ಪಡೆ ಮಾಡಲಾಗಿದ್ದು, ರೈತರಲ್ಲಿ ಆತಂಕ ಉಂಟಾಗಿರುತ್ತದೆ.ಈ ರೀತಿಯಾಗಿ ಸೇರ್ಪಡೆ ಮಾಡುತ್ತಿರು ವುದು ದ್ರೋಹದ ಸಂಗತಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ತಮ್ಮ ವಂಶದ ಹಿರಿಯರಿಂದ ತಲಾತರವಾಗಿ ಬಂದ ಆಸ್ತಿಗಳನ್ನು ಸಹ ಯಾವುದೇ ಆಧಾರವಿಲ್ಲದೆ ವಕ್ಫ್ ಬೋರ್ಡ್ ಅಧಿಕಾರಿ ಪಹಣಿ ಪತ್ರಿಕೆಯಲ್ಲಿ ವಕ್ಫ್ ಬೋರ್ಡ್ ಎಂದು ನಮೋದು ಮಾಡುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸ ಬೇಕಾಗಿದೆ.
ಈ ವಕ್ಫ್ ಬೋರ್ಡ್ ಮಂಡಳಿಯ ಅಧಿಕಾರಿಗಳು ಜಿಲ್ಲಾಧಿಕಾರಿಯನ್ನು ಸಹ ಮೀರಿ ಕಾರ್ಯನಿರ್ವಹಿಸುತ್ತಿದ್ದು ಭಾರತೀಯ ಸಂವಿಧಾನಕ್ಕೆ ಹಾಗೂ ಕಾನೂನಿನ ರೀತಿ ನೀತಿಗಳಿಗೆ ಬೆಲೆ ಇಲ್ಲವೇನೋ ಎಂಬ ಅನುಮಾನ ರೈತರಲ್ಲಿ ಮೂಡತೊಡಗಿದೆ.
ವಕ್ಫ್ ಬೋರ್ಡ್ 1974ರಲ್ಲಿ ಸ್ಥಾಪಿತ ಗೊಂಡಿದ್ದು ಅದಕ್ಕಿಂತ ನೂರಾರು ವರ್ಷಗಳ ಹಿಂದಿನಿಂದ ಒಡೆತನ ಹೊಂದಿರುವ ಭೂಮಿಯನ್ನು ಸಹ ಕಸಿದುಕೊಳ್ಳುತ್ತಿರುವು ಭೂ ಮಾಫಿಯಾದ ಭಾಗವಾಗಿದ್ದು, ರಾಜಕೀಯ ಲಾಭಕ್ಕಾಗಿ ಕೆಲವರು ವಕ್ಫ್ ಬೋರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿ ದ್ದಾರೆ. ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ರೈತ ಪರ ಸಂಘಟನೆ ಗಳು ಉಗ್ರ ಹೋರಾಟಕ್ಕೆ ಸಜ್ಜಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ,ವಕ್ಫ್ ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ನೂರ ಅಹಮದ್ ಅಣಜಿಗೇರಿ, ಮಜಿದ್ ಖಾನ್ ಮುಲ್ಲಾ, ಬಶೀರ್ ಖಾನ್ ಮುಲ್ಲಾ, ರಾಜೇಶ್ ತಳವಾರ ಪಾಲ್ಗೊಂಡಿದ್ದರು.
ಬಾಕ್ಸ್
ಪಟ್ಟಣ ಪಂಚಾಯತ ಕಚೇರಿ ವಕ್ಫ್ ಗೆ
ಕುಕನೂರು ಪಟ್ಟಣ ಪಂಚಾಯತಿ
ಕಾರ್ಯಾಲಯವೂ ವಕ್ಫ್ ಋಣಕ್ಕೊಳಾಗಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ಕಾರ್ಯಾಲಯದ 13 ಗುಂಟೆ ಪ್ರದೇಶವೂ ಕೂಡಾ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕ ರಾಜ್ಯ ಪಾಲರ ಪರವಾಗಿ ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹೆಸರಿನಲ್ಲಿ ಇರುವ ಈ ಮೊದಲು ಗ್ರಾಮ ಪಂಚಾಯತ್ ಮತ್ತು ಈಗ ಪಟ್ಟಣ ಪಂಚಾಯತ್ ಕಾರ್ಯಾಲಯ ಇರುವ ಸರ್ವೆ ನಂ.54ಕ್ಕೆ ಸಂಬಂಧಿಸಿದ 13 ಗುಂಟೆ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿಗಳ ಆದೇಶದ ಅನ್ವಯ ಕುಕೂನುರ ಉಪ ತಹಶೀಲ್ದಾರ್ 25/09/2019ರಂದು ಪಹಣಿ ಪತ್ರಿಕೆಯ ಕಾಲಂ ನಂ.11ರಲ್ಲಿ ನಮೂದಿಸಿರುತ್ತಾರೆ. ಸರ್ಕಾರದ ನಿವೇಶನಗಳನ್ನೇ ಈ ರೀತಿ ಅಕ್ರಮವಾಗಿ ಕಬಳಿಸುತ್ತಿರುವಾಗ ಜನಸಾಮಾನ್ಯರ ಜಮೀನುಗಳು, ನಿವೇಶನಗಳ ಗತಿ ಏನೂ ಎಂಬುದು ರೈತ ಮುಖಂಡರು ಮತ್ತು ಸಾರ್ವಜನಿಕರ ಆಕ್ರೋಶದ ಪ್ರಶ್ನೆಯಾಗಿದೆ.