ಕೊಪ್ಪಳ ರಾಯರ ಮಠದಲ್ಲಿ ಅದ್ದೂರಿ ಕಾರ್ತಿಕೋತ್ಸವ

ಸಮರ್ಥವಾಣಿ ವಾರ್ತೆ
ಕೊಪ್ಪಳ,ಡಿ.೨೨: ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ದೀಪಗಳಲ್ಲಿಯೇ ವಿವಿಧ ಬಗೆಯ ಅಲಂಕಾರಗಳನ್ನು ಮಾಡುವುದರ ಮೂಲಕ ಅದ್ದೂರಿಯಾಗಿ ಕಾರ್ತಿಕೋತ್ಸವವನ್ನು ಆಚರಿಸಲಾಯಿತು.
ಕಾರ್ತಿಕೋತ್ಸವ ನಿಮಿತ್ಯ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಭಕ್ತರು ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಮಠದ ವ್ಯವಸ್ಥಾಪಕರಾದ ಜಗನ್ನಾಥ ದೇಸಾಯಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ಇದರಲ್ಲಿ ಮಠದ ಪ್ರಧಾನ ಅರ್ಚಕರಾದ ಪಂಡಿತ್ ರಘುಪ್ರೇಮಾಚಾರ್ ಮುಳುಗುಂದ, ರಂಗಣ್ಣ ಸೊರಟೂರು, ಕೃಷ್ಣ ಸೊರಟೂರು, ಆಡಳಿತ ಮಂಡಳಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕಾರ್ತಿಕ ದೀಪದಲ್ಲಿ ಶ್ರೀ ರಾಘವೇಂದ್ರದಲ್ಲಿ ಸ್ವರ್ಗವೇ ದರಗೆಳಿದಂತೆ ಭಾಸವಾಗುತ್ತಿತ್ತು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!