ಗಂಗಾವತಿ.
ಕೊಪ್ಪಳ ತಾಲೂಕಿನ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿರೇಸೂಳಿಕೇರಿ, ಹಾಸಗಲ್, ಚಿಲಕಮುಖಿ, ಅರಸಿನಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು ೨೯೧೮ ಎಕರೆ ಪ್ರದೇಶವನ್ನು ವನ್ಯಜೀವಿ ಸಂವರಕ್ಷಣಾ ಪ್ರದೇಶವೆಂದು ಸರಕಾರ ಘೋಷಣೆ ಮಾಡಿರುವುದು ಶ್ಲಾಘನೀಯವಾಗಿದೆ. ನಾನು ಕಳೆದ ಎರಡು ವರ್ಷಗಳಿಂದ ಮತ್ತು ನಾಲ್ಕು ತಿಂಗಳ ಹಿಂದೆ ಇಲ್ಲಿ ಕರಡಿ ದಾಳಿಗಳಿಂದ ಸಂರಕ್ಷಣೆ ಒದಗಿಸಬೇಕೆಂದು ಜನರು ಮತ್ತು ರೈತರೊಂದಿಗೆ ಪಾದಯಾತ್ರೆ ನಡೆಸಿ ಹೋರಾಟದ ಸರಕಾರ ಮತ್ತು ಶಾಸಕರ ಗಮನ ಸೇಳೆದಿದ್ದೆ. ಈಗ ಸರಕಾರ ಇಲ್ಲಿ ಶಾಸ್ವತವಾಗಿ ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿರುವುದು ನನ್ನ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ತಿಳಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸರಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಗಂಗಾವತಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ಹಿರೇಸೂಳಿಕೇರಿ, ಹಾಸಗಲ್, ಚಿಲಕಮುಖಿ, ಅರಸಿನಕೇರೆ ಮತ್ತಿತರ ಗ್ರಾಮಗಳ ಜನರು ಮತ್ತು ರೈತರಿಗೆ ಕರಡಿ ಮತ್ತು ವನ್ಯಜೀವಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಕರಡಿ ಸೇರಿದಂತೆ ಹಲವು ವನ್ಯಜೀವಿಗಳು ಇರುವ ಪ್ರದೇಶವಾಗಿದೆ. ಆದರೆ ಇಲ್ಲಿ ಬರುವ ಗ್ರಾಮಗಳ ಜನರು ನಿತ್ಯ ತಮ್ಮ ದೈನಂದಿನ ಬದುಕಿಗೆ ಮತ್ತು ಹೊಲ ಗದ್ದೆಗಳಿಗೆ ಹೋಗುವ ರೈತರಿಗೆ ವನ್ಯಜೀವಿಗಳಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿತ್ತಿದೆ. ಜನರು ಸುರಕ್ಷಿತವಾಗಿ ತಮ್ಮ ಬದುಕು ನಡೆಸಬೇಕು. ಜೊತೆಗೆ ವನ್ಯಜೀವಿಗಳನ್ನು ರಕ್ಷಿಸಬೇಕು. ಈ ಎರಡು ಸಂಗತಿಗಳನ್ನು ಸರಕಾರವೇ ಮಾಡುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಪಾದಯಾತ್ರೆ ಮಾಡಿ ಜನರ ಸಮಸ್ಯೆಗಳನ್ನು ಖುದ್ದು ಆಲಿಸಿದ್ದೇನು. ಇದರಲ್ಲಿ ವಿಶೇಷವಾಗಿ ಕರಡಿ ದಾಳಿಯಿಂದ ರಕ್ಷಣೆ ಪಡೆಯುವುದೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ವನ್ಯಜೀವಿಗಳಿಂದ ರಕ್ಷಿಸಲು ಜನರು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ನಾನು ಜನರಪರವಾಗಿ ಧ್ವನಿಯಾಗಿ ಕಳೆದ ನಾಲ್ಕೂ ತಿಂಗಳ ಹಿಂದೆ ಈ ಭಾಗದಲ್ಲ ಕರಡಿ ಧಾಮ ಮಾಡಬೇಕು ಮತ್ತು ವನ್ಯಜೀವಿಗಳಿಂದ ರಕ್ಷಣೆ ಮಾಡಲು ಶಾಸ್ವತ ಪರಿಹಾರ ಒದಗಿಸಬೇಕು ಎಂದು ಸರಕಾರ ಮತ್ತು ಶಾಸಕರನ್ನು ಎಚ್ಚರಿಸಲು ಹೋರಾಟ ನಡೆಸಲು ಪ್ರಾರಂಭಿಸಿದೆ. ನನ್ನ ಧ್ವನಿಯನ್ನು ಆಲಿಸಿದ್ದ ಗಂಗಾವತಿ ಶಾಸಕರು ಕಳೆದ ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನ ಸೇಳೆಯುವ ಪ್ರಯತ್ನ ಮಾಡಿದ್ದರು. ಈ ಎಲ್ಲಾ ಸಂಗತಿಯನ್ನು ಅರಿತ ಸರಕಾರ ಈಗ ಈ ಭಾಗದ ಸುಮಾರು ೨೯೧೮ ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿದೆ. ಇದು ನನಗೆ ಅತ್ಯಂತ ಸಂತಸ ತಂದುಕೊಟ್ಟ ಸಂಗತಿಯಾಗಿದೆ. ಜನರ ಬೇಡಿಕೆಗಳನ್ನು ನಾನು ಶಾಸಕರು ಮತ್ತು ಸರಕಾರದವರೆಗೆ ತೆಗೆದುಕೊಂಡು ಹೋಗಲು ರೂಪಿಸಿದ್ದ ಹೋರಾಟಕ್ಕೆ ಪರಿಹಾರ ದೊರೆತಿದೆ ಎಂದು ಸಂಗಮೇಶ ಸುಗ್ರೀವಾ ಹರ್ಷ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿರುವ ಅವರು ಹಿರೇಸೂಳಿಕೇರಿ, ಹಾಸಗಲ್, ಚಿಲಕಮುಖಿ, ಅರಸಿನಕೇರಿ ವ್ಯಾಪ್ತಿಯ ೨೯೧೮ ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿ ಕೈ ತೊಳೆದುಕೊಳ್ಳದೇ ಈ ಭಾಗದಲ್ಲಿ ವನ್ಯಜೀವಿಗಳ ರಕ್ಷಣೆ ಮತ್ತು ಜನರ ಜೀವ ರಕ್ಷಣೆಗೆ ಪೂರಕವಾಗುವಂತಹ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ೨೯೧೮ ಎಕರೆ ಪ್ರದೇಶದ ಸುತ್ತಲು ಸುರಕ್ಷಿತ ತಡೆ ಗೋಡೆ ಅಥವಾ ತಂತಿ ಬೆಲಿ ಹಾಕಿ ಈ ಪ್ರದೇಶದಿಂದ ವನ್ಯಜೀವಿಗಳು ಹೊರಗೆ ಬರದಂತೆ ಮತ್ತು ಅವುಗಳಿಗೆ ಆಹಾರ, ನೀರು ಸುಲಭವಾಗಿ ದೊರೆಯುವಂತೆ ಮಾಡಬೇಕು. ವಿವಿಧ ಹಣ್ಣು, ಮತ್ತಿತರ ಮರಗಿಡಗಳನ್ನು ಬೆಳೆಸಿ ವನ್ಯಜೀವಿಗಳ ರಕ್ಷಣೆ ಮಾಡಬೇಕು. ಮತ್ತು ಸುಮಾರು ೨೯೧೮ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಹಲವು ರೈತರು ಬಹಳ ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಾ ಬರುತ್ತಿದ್ದಾರೆ. ಅವರಿಗೆ ಪರ್ಯಾಯವಾಗಿ ಭೂಮಿ ಒದಗಿಸಬೇಕು. ಮತ್ತು ರೈತರು, ಜನರ ಜೀವನ ಭದ್ರತೆಗೆ ಸಹಕಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಗಂಗಾವತಿ ಶಾಸಕರು ಈ ಪ್ರದೇಶದಲ್ಲಿ ವನ್ಯಜೀವಿಗಳ ತಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಗಮೇಶ ಸುಗ್ರೀವಾ ಒತ್ತಾಯಿಸಿದ್ದಾರೆ.