ಗಂಗಾವತಿ.
ರಾಜ್ಯ ಸರಕಾರಕ್ಕೆ ಇತ್ತೀಚಿಗೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಸಮಸ್ಥ ವೀರಶೈವ ಲಿಂಗಾಯತ ಸಮಾಜ ವಿರೋಧಿಸುತ್ತಿದೆ. ಈ ವರದಿಯಲ್ಲಿ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸಿರುವುದು ಕಾನೂನು ಬಾಹಿರವಾಗಿದೆ. ಕಾಂತರಾಜು ವರದಿ ಸುಳ್ಳಿನ ಕಂತೆಯಾಗಿದ್ದು, ಸರಕಾರ ಇದನ್ನು ಅನುಷ್ಟಾನಗೊಳಿಸಬಾರದು ಎಂದು ವೀರಶೈವ ಲಿಂಗಾಯತ ಯುವ ಮುಖಂಡ ಅಕ್ಕಿ ಆನಂದ ಅಗ್ರಹಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿ, ಜಾತಿ ಜನಗಣತಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಾಂತರಾಜು ವರದಿ ಸರಿಯಾಗಿ ಗಣತಿ ಮಾಡಿಲ್ಲ. ಮನೆಯಲ್ಲೇ ಕುಳಿತು ವರದಿ ಮಾಡಲಾಗಿದೆ. ನಮ್ಮ ಗಂಗಾವತಿ ನಗರ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲೂ ಎಲ್ಲಾ ಮನೆಗಳಿಗೆ ಬಂದು ಯಾರು ಸಂಪುರ್ಣ ವರದಿ ಪಡೆದುಕೊಂಡಿಲ್ಲ. ತಮಗೆ ಬೇಕಾದ ಮನೆಗಳಿಗೆ ಹೋಗಿ ವರದಿ ಸಿದ್ಧಪಡಿಸಿರುವ ಅನುಮಾನವಿದೆ. ರಾಜ್ಯದಲ್ಲಿ ವೀರಶೈವ ಲಿಂಗಾಯತರು ಅತಿ ಹೆಚ್ಚಿನ ಜನಸಂಖ್ಯೆ ಇದ್ದರೂ ಈ ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಸರಕಾರ ವರದಿಯನ್ನು ಪಡೆದುಕೊಂಡಿದ್ದು, ಜಾತಿ ಗಣತಿ ಅಲ್ಲ. ಆರ್ಥಿಕ, ಶೈಕ್ಷಣಿ ವರದಿ ಎಂದು ಬಿಂಬಿಸಲು ಹೊರಟಿದೆ. ಆದರೆ ಇದರಲ್ಲಿ ಆರ್ಥಿಕ. ಶೈಕ್ಷಣಿಕ ಜೊತೆಗೆ ಜಾತಿ ಗಣತಿಯನ್ನು ಮಾಡಲಾಗಿದೆ. ಸಂಪೂರ್ಣ ಮನೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿಲ್ಲ. ಹೀಗಾಗಿ ಇದು ಸುಳ್ಳಿನಿಂದ ಕೂಡಿದ ವರದಿಯಾಗಿದೆ. ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸರಕಾರ ಅನುಷ್ಟಾನಗೊಳಿಸಬಾರದು ಒತ್ತಯಿಸಿರುವ ಆನಂದ ಅಕ್ಕಿ ಅಖಿಲ ಭಾರತ ವೀರಶೈವ ಮಹಸಭಾದ ವರದಿ ಮಂಡನೆ ಮಾಡಲು ಮುಂದಾದರೆ ವೀರಶೈವ ಸಮಾಜ ಹೋರಾಟಕ್ಕಿಳಿಯದೇ ಎಂದು ಎಚ್ಚರಿಸಿದ್ದಾರೆ.