ಕೊಪ್ಪಳ.
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಗೆ ಜಿಲ್ಲಾ ಸಮಿತಿ ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಕನಕಗಿರಿ ಕ್ಷೇತ್ರದ ಮಾಜಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರೆಡ್ಡಿ ಶ್ರೀನಿವಾಸ ಅವರನ್ನು ಸರಕಾರ ನೇಮಕ ಮಾಡಿದೆ. ಜೊತೆಗೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎಸ್.ಬಿ.ಖಾದ್ರಿ ಸೇರಿ ಐದು ಜನರು ಮತ್ತು 15 ಜನ ಸದಸ್ಯರು ಮತ್ತು ಅಪರ ಜಿಲ್ಲಾಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಬುಧವಾರ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ರೆಡ್ಡಿ, ಶ್ರೀನಿವಾಸ ಜಿಲ್ಲಾ ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷರಾಗಿ ఎనా.టి. బాద్రి, ಟಿ.ಜನಾರ್ಧನ, ಹುಲಗಿ, ಚಂದ್ರಶೇಖರ ನಾಲತವಾಡ, ಖಾಸಿಂ ಸಾಬ್ ಮರ್ಧಾನ್ ಸಾಬ್, ಮಲ್ಲಪ್ಪ ಯಮನಪ್ಪ ಜಕಲಿ ಮತ್ತು ಸದಸ್ಯರಾಗಿ
ಬಾಲಚಂದ್ರ ಸ್ಯಾಮುವೆಲ್, ಸೋಮನಾಥ ದೊಡ್ಡಮನಿ, ಫಾರುಖ್ ದಲಾಯತ್, ಶಕುಂತಲಾ ಕಾರಟಗಿ, ಶಾರದಾ ಕಟ್ಟಿಮನಿ, ಮೈನುದ್ದೀನ್ ಖಾಜಿ, ಹಜರತ್ ಹುಸೇನ್, ಮಲ್ಲಪ್ಪ ಭಂಡಾರಿ,ಸುಧೀರ್ ಶಾಮಾಚಾರ, ಕೊರ್ಲಹಳ್ಳಿ, ಆನಂದ ಹಾಸಲಕರ, ದೇವಪ್ಪ ಭಾವಿಕಟ್ಟಿ, ವೆಂಕಟೇಶ ಬಾಬು, ಬಸವನದುರ್ಗ, ಸಂಗಪ್ಪ ಗುತ್ತಿ ಅಮ್ಮದ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವಲ್ಲಿ ಈ ಸಮಿತಿ ಕೆಲಸ ಮಾಡಲಿದೆ.