ಗಂಗಾವತಿ.
ದಾಖಲೆ ಇಲ್ಲದೇ ರೂ.32,92,500/00ಹಣವನ್ನು ಹೊಸಪೇಟೆ ಮಾರ್ಗದ ಕಡೆಬಾಗಿಲು ಚೆಕ್ ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ಮದ್ಯಾಹ್ನ 12 ಗಂಟೆ ಸುಮಾರಿಗೆ ಚೆಕ್ ಪೋಸ್ಟ್ ಅಧಿಕಾರಿಗಳು ವಾಹನ ತಪಾಷಣೆ ಮಾಡುತ್ತಿರುವ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನಾಗರಾಜ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದ್ದು, ರೂ. ೩೨,೯೨,೫೦೦.೦೦ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ತಹಶೀಲ್ದಾರ ನಾಗರಾಜ ಮಾಹಿತಿ ನೀಡಿದ್ದು, ತಾಲೂಕಿನ ಕಡೆಬಾಗಿಲು ವ್ಯಾಪ್ತಿಯಲ್ಲಿ ಇರುವ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಷಣೆ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ತಕ್ಷಣ ನಾವು ಮಾಹಿತಿ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಪಿಐ ಅವರೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇವೆ. ಹಣದ ಸಂಪೂರ್ಣ ಮಾಹಿತಿ ಪರಿಶೀಲಿಸಲು ಆದಾಯ ತೆರೆಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಾಗಿದೆ. ತಾಲೂಕಿಗೆ ಪ್ರವೇಶ ಮಾಡು ಕಡೆಬಾಗಿಲು, ಚಿಕ್ಕಜಂತಕಲ್ ಮತ್ತು ವಿದ್ಯಾನಗರದಲ್ಲಿ ಚೆಕ್ ಪೋಸ್ಟ್ ಮಾಡಿದ್ದೇವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ತಪಾಷಣೆ ಮಾಡಲಾಗುತ್ತಿದೆ ಎಂದರು.
ನೀತಿ ಸಂಹತೆಯನ್ನು ತಾಲೂಕಿನಾದ್ಯಂತ ಕಟ್ಟುನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದು, ಸಹಾಯಕ ಚುನಾವಣಾಧಿಕಾರಿ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಕಳೆದ ಅಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸನ್ನದ್ಧರಾಗಿದ್ದಾರೆ. ನೀತಿ ಸಂಹಿತೆ ಜಾರಿಯಾಗಿರುವ ಬೆನ್ನಲ್ಲೆ ದಾಖಲೆ ಇಲ್ಲದ ಹಣ ಜಪ್ತಿ ಮಾಡಿರುವುದು ಮೊದಲ ಪ್ರಕರವಾಗಿದೆ.