ಗಂಗಾವತಿ.
ಹುಬ್ಬಳ್ಳಿ ಪ್ರತಿಷ್ಟಿತ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ಅವರು ಆರೋಪಿಗೆ ನೇರವಾಗಿ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಶುಕ್ರವಾರ ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ. ಹಿಂದು ವಿದ್ಯಾರ್ಥಿನಿಯನ್ನು ಬರ್ಬವಾಗಿ ಹತ್ಯೆ ಮಾಡಿರುವ ಫೈಯಾಜ್ ಎಂಬ ವಿದ್ಯಾರ್ಥಿ ಲವ್ ಜಿಹಾದ್ ನಡೆಸುವ ಸಂಚಾಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಕಳೆದ ೪೮ ಗಂಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಬೆಂಬಲದ ಧೈರ್ಯದಿಂದಾಗಿ ಮತಾಂಧ ಜಿಹಾದಿ ಮನಸ್ಥಿತಿಯ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ಗೆ ಒಪ್ಪದ ಹಿಂದೂ ಯುವತಿಯ ಹತ್ಯೆ, ಒಡೆಯರ್ ಪರವಾಗಿ ಪ್ರಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹರಿಸಿ ಕೊಲೆ ಮಾಡಿರುವುದು. ಹಿಂದೂಗಳ ಕಾರು ತಡೆದು ಹಲ್ಲೆಯಂತಹ ಐದಾರು ಘಟನೆಗಳು ನಡೆದಿವೆ. ಮಜಾವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅತಿಯಾದ ಓಲೈಕೆಯ ಕಾರಣದಿಂದಲೇ ಮತಾಂಧ ವ್ಯಕ್ತಿಗಳು ಕಾನೂನು ಕೈಗೆತ್ತಿಕೊಂಡು ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಇಂತಹ ಸರಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು. ವಿದ್ಯಾರ್ಥಿನಿ ಹತ್ಯೆಯನ್ನು ಗೃಹಮಂತ್ರಿಗಳು ಆಕಸ್ಮಿಕ ಎಂದು ಬಿಂಬಿಸಲು ಹೊರಟಿರುವುದು ಕಾಂಗ್ರೆಸ್ ಮುಖಂಡರಲ್ಲಿ ಹಿಂದುಗಳ ಬಗ್ಗೆ ಇರುವ ನಿರ್ಲಕ್ಷ ಕಂಡು ಬರುತ್ತಿದೆ. ಘಟನೆಯನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ್ದರೆ ಹೋರಾಟ ನಡೆಸುವುದಾಗಿ ಸಂಗಮೇಶ ಸುಗ್ರೀವಾ ಎಚ್ಚರಿಸಿದ್ದಾರೆ.