ಕುಷ್ಟಗಿ.
ದ್ವೀಚಕ್ರ ವಾಹನ ಸವಾರರು ಕಡ್ಡಾಯವಾಗಿ ಹಲ್ಮೇಟ್ ಧರಿಸಿ ವಾಹನ ಚಲಾಯಿಸಿ ನಿಮ್ಮ ಅಮೂಲ್ಯ ಜೀವನ ಕಾಪಾಡಿಕೊಳ್ಳಿ ಎಂದು ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಇಂದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ವಾಹನ ಚಲಾಯಿಸುವ ಸಂದರ್ಭದಲ್ಲಿ ಅಚಾನಕಾಗಿ ನಡೆಯುವ ಅಪಘಾತದಲ್ಲಿ ಹೆಲ್ಮೇಟ್ ಜೀವ ಉಳಿಸುವ ಸಾಧನವಾಗಿದೆ. ಹೆಲ್ಮೇಟ್ ಧರಿಸಿ ವಾಹನ ಚಲಾಯಿಸುವಂಯೆ ಸುಪ್ರೀಂಕೋರ್ಟ್ ಆದೇಶವಿದೆ. ಈ ಆದೇಶ ಎಲ್ಲರು ಪಾಲಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನಿರ್ದೇಶನದಂತೆ ನಾವು ವಾಹನ ಸವಾರರಿಗೆ ಹೆಲ್ಮೇಟ್ ಧರಿಸುವಂತೆ ಅರಿವು ಮೂಡಿಸುತ್ತಿದ್ದೇವೆ. ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಲಾಯಿಸಿ. ಇಲ್ಲದಿದ್ದರೆ ದಂಡ ಹಾಕಲಾಗುವುದು ಎಂದು ಸಿಪಿಐ ಬಿಸನಳ್ಳಿ ಸೂಚನೆ ನೀಡಿದರು.