ಗಂಗಾವತಿ.
ಯಾದಗಿರಿ ಪೊಲೀಸ್ ಠಾಣೆಯ ಧಕ್ಷ ಪಿಎಸ್‌ಐ ಆಗಿದ್ದ ಪರುಶುರಾಮ ಅವರಿಗೆ ಲಂಚ ನೀಡುವಂತೆ ಕಿರುಕುಳ ನೀಡಿ ಅವರ ಸಾವಿಗೆ ಕಾರಣವಾಗಿರುವುದು ಖಂಡನೀಯವಾಗಿದೆ. ತಕ್ಷಣ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪನಗೌಡ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಅಗ್ರಹಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ, ಪಿಎಸ್‌ಐ ಸಾವಿಗೆ ಸಾಂತ್ವನ ಹೇಳಿದ್ದು, ಪಿಎಸ್‌ಐ ಸಾವಿರಗೆ ಕಾರಣರಾಗಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದ ಒಂದುವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ಮುಖಂಡರುಗಳು ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವಿಷಯದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ಮಾಡಿಕೊಂಡಿದ್ದು, ಇದರಿಂದ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಎಸ್‌ಟಿ ನಿಗಮದಲ್ಲಿ ಹಣ ಲೂಟಿ ಮಾಡಿ ಪ್ರಮಾಣಿಕ ನೌಕರರನ್ನು ಬಲಿ ತೆಗೆದುಕೊಳ್ಳಲಾಗಿತ್ತು. ಈಗ ಪಿಎಸ್‌ಐ ಅವರನ್ನು ಬಲಿಪಡಿದಿದ್ದಾರೆ. ಗೃಹ ಸಚಿವರಾಗಿರುವ ಪರಮೇಶ್ವರ ಅವರು ಪಿಎಸ್‌ಐ ಪರಶುರಾಮನ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಾವಿರಗೆ ಕಾರಣರಾಗಿದ್ದಾರೆ ಎಂದು ಅನುಮಾನ ವ್ಯಕ್ತವಾಗಿರುವ ಶಾಸಕರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಮತ್ತು ಪಿಎಸ್‌ಐ ಕುಟುಂಬಕ್ಕೆ ಭದ್ರತೆ ನೀಡಿ ನ್ಯಾಯ ಒದಗಿಸಬೇಕು ಎಂದು ರಾಜು ನಾಯಕ ಅಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!