ಗಂಗಾವತಿ.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಗೆ ಆ.27ರಂದು ಚುನಾವಣೆ
ಅಧಿಸೂಚನೆ ಹೊರಡಿಸಲಾಗಿದೆ.  ಶತಾಯ ಗತಾಯ ಅಧಿಕಾರ ಹಿಡಿಯಲು ಬಿಜೆಪಿ ಮುಖಂಡರು,, ನಾಯಕರು
ಕಾರ್ಯಕರ್ಯ ತಂತ್ರ ರೂಪಿಸುತ್ತಿದ್ದಾರೆ. ಶಾಸಕ ಗಾಲಿ ಜನಾರ್ಧನರೆಡ್ಡಿ ಕಾಂಗ್ರೆಸ್,
ಬಜೆಪಿ, ಜೆಡಿಎಸ್, ಪಕ್ಷೇತರ ಸೇರಿ 27 ಜನ ಸದಸ್ಯರೊಂದಿಗೆ ರಹಸ್ಯ ಸಭೆ ನಡೆಸಿರುವುದು
ಅನ್ಸಾರಿ ಪಾಳಯದ ಕಾಂಗ್ರೆಸ್ ಸದಸ್ಯರಲ್ಲಿ ತಳಮಳ ಶುರುವಾಗಿದೆ.
ಕಳೆದ ಎರಡು ದಿನಗಳಿಂದ ನಗರದಲ್ಲಿ ಬಿಡು ಬಿಟ್ಟಿರುವ ಶಾಸಕ ಜನಾರ್ಧನರೆಡ್ಡಿ,
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಖಂಡ ವಿರುಪಾಕ್ಷಪ್ಪ ಸಿಂಗನಾಳ ಸೇರಿದಂತೆ ಮತ್ತಿತರ
ಬಿಜೆಪಿ ಮುಖಂಡರೊಂದಿ ತಮ್ಮ ಜೊತೆ ಕೈ ಜೊಡಿಸಿರುವ 27 ಸದಸ್ಯರ ಜೊತೆ ಕೊಪ್ಪಳ ರಸ್ತೆಯ ಖಾಸಗಿ ವ್ಯಕ್ತಿಯ ತೊಟದಲ್ಲಿ
ರಹಸ್ಯ ಸಭೆ ನಡೆಸಿದ್ದಾರೆ ಬಹಿರಂಗವಾಗಿದೆ.   ನಗರಸಭೆ ಯ 35
ಸದಸ್ಯರಲ್ಲಿ 14 ಬಿಜೆಪಿ, 2 ಜೆಡಿಎಸ್, 2 ಪಕ್ಷೇತರರ ಜೊತೆ 9 ಜನ ಕಾಂಗ್ರೆಸ್ ಚುನಾಯಿತ
ಸದಸ್ಯರು ಬಿಜೆಪಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.  ಕಳೆದ ವಿಧಾನಸಭೆ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 9 ಮತ್ತು ಜೆಡಿಎಸ್ ನ ಇಬ್ಬರು ಸೇರಿ ಕೆಲವು
ಬಿಜೆಪಿ ಸದಸ್ಯರು ಜನಾರ್ಧನರೆಡ್ಡಿಗೆ ಕೈ ಜೋಡಿಸಿದ್ದರು.  ನಂತರ ಶಾಸಕ ರೆಡ್ಡಿ
ಕೆಆರ್‌ಪಿಪಿ ವಿಸರ್ಜನೆ ಮಾಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಎಲ್ಲಾ ಸದಸ್ಯರು ಬಿಜೆಪಿ ಜೊತೆ ಹೆಜ್ಜೆ ಹಾಕಿದ್ದಾರೆ.  ಹೀಗಾಗಿ ನಗರಸಭೆಯಲ್ಲಿ ಈ ಭಾರಿ ಬಿಜೆಪಿಗೆ ಅಧ್ಯಕ್ಷ ಉಪಾಧ್ಯಕ್ಷ ಗಾದಿ ಹಿಡಿಯಲು ಸುಲಭವಾಗುತ್ತಿದೆ.
ಮಾಜಿ ಸಚಿವ ಇಕ್ಬಾಲ್
ಅನ್ಸಾರಿ ರಾಜ್ಯ ಸರಕಾರದಲ್ಲಿ ಹಿಡಿತ ಹೊಂದಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಧನರೆಡ್ಡಿ ಜೊತೆ ಕೈ ಜೋಡಿಸಿರುವ ಕಾಂಗ್ರೆಸ್ ಸದಸ್ಯರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಉತ್ಸಾಹ ತೊರುತ್ತಿಲ್ಲ.  ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಅವರೊಂದಿಗೆ ವೈಮನಸ್ಸು ಹೊಂದಿದ್ದರಿಂದ ಅನ್ಸಾರಿ ನಗರಸಭೆಯಲ್ಲಿ
ಅಧಿಕಾರ ಹಿಡಿಯಲು ಸುಲಭವಲ್ಲವೆಂಬುದನ್ನು ಈಗಾಗಲೇ ಅರಿತುಕೊಂಡಿದ್ದಾರೆ.  ಜಿಲ್ಲಾ
ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಂಗಾವತಿ ಕ್ಷೇತ್ರದಲ್ಲಿ ಕೈ ಹಾಕಲು ಹಿಂದೆಟು ಹಾಕುತ್ತಿರುವುದರಿಂದ ಶಾಸಕ ಜನಾರ್ಧನರೆಡ್ಡಿಗೆ ನಗರಸಭೆ ವಶಪಡಿಸಿಕೊಳ್ಳಲು ದಾರಿ
ಸುಲಭವಾಗುತ್ತಿದೆ.  ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಒಬ್ಬ ಸದಸ್ಯರನ್ನು ತಮ್ಮತ್ತ
ಸೆಳೆದುಕೊಂಡು ನಗರಸಭೆಯಲ್ಲಿ ಅಧಿಕಾರ ಹಿಡಿದಿದ್ದ ಇಕ್ಬಾಲ್ ಅನ್ಸಾರಿ ಈಗ ಪುನಃ ಅಧಿಕಾರ ಉಳಿಸಿಕೊಳ್ಳಲು ಸಜ್ಜಾಗುತ್ತಿಲ್ಲ.  ವಿವಿಧ ಪಕ್ಷದವರನ್ನು ಸೇಳೆದುಕೊಳ್ಳುವ ಕಲೆಯನ್ನು
ಕರಗತ ಮಾಡಿಕೊಂಡಿರುವ ಶಾಸಕ ಗಾಲಿ ಜನಾರ್ಧನರೆಡ್ಡಿ ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಪಕ್ಷದ ಪರವಾಗಿ ಮಾಡಿಕೊಳ್ಳುವಲ್ಲಿ ಹೆಚ್ಚು ಶ್ರಮಿಸುವ ಅಗತ್ಯವಿಲ್ಲ ಎನ್ನುವುದನ್ನು ಅರಿತುಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್, ಪಕ್ಷೇತರ ಮತ್ತು ಕಾಂಗ್ರೆಸ್ ಸದಸ್ಯರು ಸೇರಿ 26 ಜನ ಸದಸ್ಯರು ಜನಾರ್ಧನರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರಿಂದ ನಗರಸಭೆಯಲ್ಲಿ ಈ ಭಾರಿ
ಬಿಜೆಪಿ ಗದ್ದುಗೆ ಹಿಡಿಯುವುದು ಪಕ್ಕಾ ಎಂಬ ಮಾತು ಸಾರ್ವಜನಿಕ ವಲಯದಲ್ಲಿ
ಚರ್ಚೆಯಾಗುತ್ತಿದೆ.  ಮತ್ತು ಬಿಜೆಪಿ ಸದಸ್ಯರು ಕೂಡಾ ತಮ್ಮ ಪಕ್ಷಕ್ಕೆ ಅವಕಾಶ
ಧಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆ ಅಧ್ಯಕ್ಷ ಹಿಂದುಳಿದ “ಅ’ ಮತ್ತು ಉಪಾಧ್ಯಕ್ಷ ಎಸ್‌ಸಿ ಮಹಿಳೆಗೆ
ಮಿಸಲಾಗಿರುವುದರಿಂದ ಬಿಜೆಪಿ ಚಿಹ್ನೆಯಿಂದ ಗೆದ್ದಿರುವ ಸದಸ್ಯರೇ ಅಧ್ಯಕ್ಷರಾಗಲಿ ಎಂದು
ಪಕ್ಷದಲ್ಲಿ ಚರ್ಚೆಯಾಗುತ್ತಿದೆ.  ಹೀಗಾಗಿ ಪರುಶುರಾಮ ಮಡ್ಡೆರ್, ಅಜಯ ಬಿಚ್ಚಾಲಿ ಅಧ್ಯಕ್ಷತೆ ಪೈಪೋಟಿ ನಡೆಸಿದ್ದು, ಅಂತಿಮವಾಗಿ ಪಕ್ಷ ತಿರ್ಮಾನಿಸಲು ಬಿಟ್ಟಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನದಲ್ಲಿ ಈಗಾಗಲೇ ಬಿಜೆಪಿಯ ಸುಧಾ ಸೊಮನಾಥ ಅಧಿಕಾರ
ಅನುಭವಿಸಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ಬಂದಿರುವ ಪಾರ್ವತಮ್ಮಗೆ ಅವಕಾಶ
ಕಲ್ಪಿಸಿಕೊಡಲು ಚರ್ಚೆಯಾಗಿದೆ.  ಸ್ಥಾಯಿ ಸಮಿತಿ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ
ಬಿಟ್ಟುಕೊಡಲು ಚಿಂತನೆ ನಡೆಸಲಾಗುತ್ತಿದೆ.  ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಯಾರಿಗೆ ನೀಡಬೇಕೆಂಬ ಅಂತಿಮ ನಿರ್ಧಾರ ಬಿಜೆಪಿ ಹೈಕಮಾಂಡ್ ಮತ್ತು ನಗರಸಭೆ
ಚುನಾವಣೆ ಉಸ್ತುವಾರಿವಹಿಸಿಕೊಂಡಿರುವ ಎನ್.ರವಿಕುಮಾರ ಅವರೊಂದಿಗೆ ಚರ್ಚಿಸಿ ಅಂತಿಮ
ನಿರ್ಧಾರ ಕೈಗೊಳ್ಳುವಂತೆ ಶಾಸಕ ಜನಾರ್ಧನರೆಡ್ಡಿ, ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ ಅವರು ಸದಸ್ಯರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ
ಹಿಡಿಯಲು  ಹಿನ್ನೆಡೆಯಾಗಲು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ಭಿನ್ನಾಭಿಪ್ರಾಯ ಪ್ರಮುಖ ಕಾರಣವಾಗುತ್ತಿದೆ.  ಈ ಭಾರಿ ಗಂಗಾವತಿಯಿಂದಲೇ ಹೆಚ್ಚು ಮತ
ಪಡೆಯುವಲ್ಲಿ ಯಶಸ್ವಿಯಾಗಿರುವ ಲೋಕಸಭೆ ಸದಸ್ಯ ರಾಜಶೇಖರ ಹಿಟ್ನಾಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ಸಿಗೆ ಅವಕಾಶ ಮಾಡಿಕೊಳ್ಳಲು ಪ್ರಯತ್ನ ಮಾಡಬಹುದೇ ಎಂಬ
ನಿರೀಕ್ಷೆಯು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದೆ.  ಆದರೆ ಇಕ್ಬಾಲ್ ಅನ್ಸಾರಿ
ತನ್ನೊಂದಿಗೆ ಮುನಿಸಿಕೊಂಡಿರುವ ಕಾಂಗ್ರೆಸ್ ಸದಸ್ಯರನ್ನು ಪುನಃ ಪಕ್ಷಕ್ಕೆ
ಬರಮಾಡಿಕೊಳ್ಳಲು ಒಪ್ಪದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರು ನಗರಸಭೆ ಅಧಿಕಾರ
ಹಿಡಿಯಲು ಮುಂದಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.  ಆಯ್ಕೆ ಪ್ರಕ್ರಿಯೆ
ಹತ್ತಿರವಾಗುತ್ತಿದ್ದಂತೆ ಇನ್ನಿತರ ಬೆಳವಣಿಗೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!