ಕೊಪ್ಪಳ.
ತುಂಗಭದ್ರಾ ಜಲಾಶಯದ 19ನೇ ಗೇಟ್ ಗೆ ಹಾನಿಯಾಗುತ್ತಿದ್ದಂತೆ ಸರಕಾರ ಎಚ್ಚೆತ್ತುಕೊಂಡಿದ್ದು, ಕೊನಿಗೂ ಮುನಿರಾಬಾದ್ ನೀರಾವರಿ ನಿಗಮದಲ್ಲಿ ಇದುವರೆಗೂ ಖಾಲಿ ಇದ್ದ ಮುಖ್ಯ ಇಂಜಿನಿಯರ್ ಹುದ್ದೆಯನ್ನು ನೇಮಕ ಮಾಡಿ ಸರಕಾರ ಅದೇಶಿಸಿದೆ.
ಆ.16 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಹೇಮಲತಾ ಜಿ ಅವರು ಅಧಿಕ್ಷಕ ಇಂಜಿನಿಯರಿಂಗ್ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 6 ಇಂಜಿನಿಯರ್ ಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ತಾತ್ಕಾಲಿಕವಾಗಿ ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ ಮುನಿರಾಬಾದ್ ಜಲಾಶಯ ಸೇರಿದಂತೆ 6 ಕಡೆಗಳಲ್ಲಿ ಮುಖ್ಯ ಇಂಜಿನಿಯರ್ ವೃಂದದ ಹುದ್ದೆ ಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ನೀರಾವರಿ ನಿಗಮ ಮುನಿರಾಬಾದ್ ಗೆ ಹನುಮಂತ ಜಿ.ದಾಸರ್ ಅವರನ್ನು ಸಿಇ ಹುದ್ದೆಗೆ ಮತ್ತು ಭಿಮರಾಯನಗುಡಿ ಕೃಷ್ಣಾ ಕಾಡಾಕ್ಕೆ ಸಿಇ ಪವಾರ್ ಜಿ.ಜಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿ ನಿರ್ದೇಶಕ ಸ್ಥಾನಕ್ಕೆ ಮುಕ್ಕಣ್ಣ ನಾಯ್ಕ್ ಜಿ.ಆರ್, ವಿಜಯಪುರ ಸಣ್ಣ ನೀರಾವರಿಖೆ ಮುಖ್ಯ ಇಂಜಿನಿಯರಿಂಗ್ ಜಗದೀಶ ಜಿ.ರಾಠೋಡ್. ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು ನಿರ್ದೇಶಕ ಸ್ಥಾನಕ್ಕೆ ವೆಂಕಟೇಶಲು ಜಿ.ವಿ ಮತ್ತು ಅಟಲ್ ಭೂ ಜಲ ಯೋಜನೆ ಸಣ್ಣ ನೀರಾವರಿ ಇಲಾಖೆ ಬೆಂಗಳೂರು ಮುಖ್ಯ ಇಂಜಿನೀಯರ್ ಹುದ್ದೆಗೆ ಕಿರಣ ಹೆಚ್ ಮಸೂತಿ ಅವರನ್ನು ನೇಮಕ ಮಾಡಲಾಗಿದೆ.
ಮೂರು ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಗೇಟ್ ಹಾನಿಯಾಗಿ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ. ಇಂತಃ ಬೃಹತ್ ನೀರಾವರಿ ಯೋಜನೆ ಕಾಡಾ ಕ್ಕೆ ಮುಖ್ಯ ಇಂಜಿನಿಯರ್ ಇಲ್ಲದಿರುವುದನ್ನು ಅರಿತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರಕಾರಕ್ಕೆ ಕುಟುಕಿದ್ದರು. ಡ್ಯಾಂ ಅವಘಡಕ್ಕೆ ಸಿಇ ಇಲ್ಲದಿರುವುದು ಇಂದು ಕಾರಣ ಎಂದು ಆರೋಪಿದ್ದರು. ಹೀಗಾಗಿ ಸರಕಾರ ಎಚ್ಚೆತ್ತು ಕಾಡಾ ಸೇರಿದಂತೆ ಇನ್ನಿತರ ನಿಗಮಕ್ಕು ಮುಖ್ಯ ಇಂಜಿನಿಯರ್ ಹುದ್ದೆ ಸೃಜಿಸಿದ್ದಾರೆ.