ಗಂಗಾವತಿ.
ಸೋಮವಾರ ಆ.26 ರಂದು ಗಂಗಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ. ಶಾಸಕ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಂತಿಮ ಸುತ್ತಿನ ಸಭೆ ನಡೆಸಿರುವ ಬಿಜೆಪಿ ಎಲ್ಲಾ ಬೆಂಬಲಿಗ ಸದಸ್ಯರು ಸಂಖ್ಯಾಬಲ ಪ್ರದರ್ಶನ ಮಾಡಿದ್ದಾರೆ. ಗಂಗಾವತಿಯಲ್ಲಿ ಮಾಜಿ ಸಚಿವ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಹೆಚ್.ಆರ್.ಶ್ರೀನಾಥ, ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ನಡುವ ಉಂಟಾಗಿರುವ ಭಿನ್ನಭಿಪ್ರಾಯದಿಂದಾಗಿ ಕಾಂಗ್ರೆಸ್ ಅಧಿಕಾರ ಹಿಡಿಯದೇ ಕೈ ಚೆಲ್ಲಿ ಕುಳಿತಿದೆ. ಹೀಗಾಗಿ ಬಿಜೆಪಿ ಗದ್ದುಗೆ ಹಿಡಿಯುವುದು ಪಕ್ಕಾ ಎಂಬ ಮಾಹಿತಿ ಹೊರ ಬಿದ್ದಿದೆ.
35 ಸದಸ್ಯ ಬಲದ ನಗರಸಭೆಯಲ್ಲಿ 17 ಜನ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಕಳೆದ 2023 ವಿಧಾನಸಭೆ ಚುನಾವಣೆಯಲ್ಲಿ ಅನ್ಸಾರಿ ಮನಿಯಾರ್ ನಡುವೆ ವೈಮನಸ್ಸಿನಿಂದಾಗಿ ೯ಕ್ಕು ಹೆಚ್ಚು ಕಾಂಗ್ರೆಸ್ ಸದಸ್ಯರು ಜನಾರ್ಧನರೆಡ್ಡಿ ಪಕ್ಷಕ್ಕೆ ಜಂಪ್ ಆಗಿದ್ದರು. ಈ ಸದಸ್ಯರು ಜನಾರ್ಧನರೆಡ್ಡಿಯೊಂದಿಗೆ ಈಗಲೂ ಗುರುತಿಸಿಕೊಂಡಿದ್ದು, ಅಧಿಕೃತವಾಗಿ ಶಾಸಕ ಜನಾರ್ಧನರೆಡ್ಡಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಬೆಂಗಳೂರಿನಲ್ಲಿ ಬಿಡು ಬಿಟ್ಟಿದ್ದಾರೆ. ಅಧಿಕೃತವಾಗಿ ಪಕ್ಷದಿಂದ ಚಿಹ್ನೆಯಿಂದ ಆಯ್ಕೆಯಾಗಿರುವ 14ಜನ ಬಿಜೆಪಿ ಸದಸ್ಯರು ಸೇರಿ ಇಬ್ಬರು ಜೆಡಿಎಸ್ ಮತ್ತು ಒಂಬತ್ತುಕ್ಕು ಹೆಚ್ಚು ಕಾಂಗ್ರೆಸ್ ಸದಸ್ಯರು ಬಿಜೆಪಿಕಡೆ ವಾಲಿದ್ದಾರೆ. ಈ ಎಲ್ಲಾ ಸದಸ್ಯರೊಂದಿಗೆ ಭಾನುವಾರ ಸಭೆ ನಡೆಸಿರುವ ಶಾಸಕ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಸಮ್ಮುಖದಲ್ಲಿ ಸಂಖ್ಯಾಬಲ ಪ್ರದರ್ಶನ ಮಾಡಿ ನಾಳೆ ನಡೆಯುವ ಆಯ್ಕೆ ಪ್ರಕ್ರೀಯೆ ಚುನಾವಣೆಗೆ ಹಾಜರಾಗಲು ಗಂಗಾವತಿ ಕಡೆ ಮುಖ ಮಾಡಿದ್ದಾರೆ.
ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದರೂ ಅಧ್ಯಕ್ಷರು ಯಾರು ಆಗುತ್ತಾರೆ ಎಂಬ ಮಾಹಿತಿ ಮಾತ್ರ ಬಹಿರಂಗಪಡಿಸಿಲ್ಲ. ಕಾಂಗ್ರೆಸ್ ಪಕ್ಷದಿಂದ ಬಂದಿರುವ ಸದಸ್ಯರ ಗುಂಪಿನಲ್ಲಿ ಅಧ್ಯಕ್ಷರಾಗಬೇಕೆಂಬ ಚರ್ಚೆ ಒಂದು ಕಡೆ ನಡೆಯುತ್ತಿದೆ. ಅದರ ಜೊತೆ ಜೊತೆಯಲ್ಲಿ ಮೊದಲ ಬಾರಿಗೆ ಗಂಗಾವತಿ ನಗರಸಭೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯಾಬಲ ಹೊಂದಿದ್ದು, ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿರುವ ಸದಸ್ಯರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂಬುದು ಹಲವರ ಬೇಡಿಕೆಯಾಗಿದೆ. ಬಿಜೆಪಿಗೆ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಜೆಡಿಎಸ್‌ನ ಸದಸ್ಯರಲ್ಲಿ ಸ್ಥಾಯಿ ಸಮಿತಿ ನೀಡಿ ಉಳಿದ 15 ತಿಂಗಳ ಅವಧಿಯಲ್ಲಿ ಜನಪರ ಆಡಳಿತ ನೀಡಿ ಮುಂದಿನ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕೆಂಬ ಚರ್ಚೆ ಜೊರಾಗಿದೆ. ನಾಳೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಸಲ್ಲಿಸಿದ ನಂತರ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಗೊತ್ತಾಗಲಿದೆ.
ಮಿಸಲಾತಿ ಪ್ರಕಾರ ಬಿಜೆಪಿಯಲ್ಲಿ ಪರಶುರಾಮ ಮಡ್ಡೇರ್, ಅಜಯ ಬಿಚ್ಚಾಲಿ, ನೀಲಕಂಠ ಕಟ್ಟಮನಿ ಅಧ್ಯಕ್ಷರಾಗಲು ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಂದಿರುವರ ಪೈಕಿ ಮೌಲಾಸಾಬ್, ಮುಸ್ತಾಕ್ ಅಧ್ಯಕ್ಷರಾಗಬೇಕೆಂಬ ಆಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಶಾಸಕರು, ಬಿಜೆಪಿ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಿಜೆಪಿ ವಲಯದಿಂದ ಹೊರ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಹಿರಂಗವಾಗಿ ಜಗಳವಾಡಿಕೊಂಡಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಂಗಾವತಿಯಲ್ಲಿ ೧೪ ಸಾವಿರ ಮತಗಳು ಹೆಚ್ಚಾಗಿವೆ. ಎಲ್ಲಾ ಮುಖಂಡರೊಂದಿಗೆ ಸಂಪರ್ಕ ಸಾಧಿಸಿ ಲೋಕಸಭೆಯಲ್ಲಿ ಆಯ್ಕೆಯಾಗಿರುವ ರಾಜಶೇಖರ ಹಿಟ್ನಾಳ್ ಈ ನಗರಸಭೆ ಚುನಾವಣೆಯಲ್ಲಿ ಕೈ ಚೆಲ್ಲಿ ಕುಳಿತಿರುವುದು ಆಶ್ಚರ್ಯ ಮೂಡಿಸಿದೆ. ತಮ್ಮ ಚುನಾವಣೆಯಲ್ಲಿ ಪಕ್ಷದಿಂದ ಹೊರ ಹೋಗಿ ಜನಾರ್ಧನರೆಡ್ಡಿಗೆ ಬೆಂಬಲಿಸಿರುವ ಕಾಂಗ್ರೆಸ್ ಪಕ್ಷದ ಯಾವುದೇ ಸದಸ್ಯರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಅನ್ಸಾರಿ ತಾಳಿರುವುದರಿಂದ ಕಾಂಗ್ರೆಸ್ ಈ ಬಾರಿ ನಗರಸಭೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಸ್ವತಃ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನಿಯಾರ್ ಆಪ್ತರಾಗಿರುವ ಕಾಂಗ್ರೆಸ್ ಸದಸ್ಯ ಸೋಮನಾಥ ಭಂಡಾರಿ ಕೂಡಾ ಇಂದು ಜನಾರ್ಧನರೆಡ್ಡಿ ಪಾಳಯದಲ್ಲಿ ಸೇರಿ ಬಿಜಯದ ನಗೆ ಬೀರಿರುವುದು ನಗರಸಭೆಯಲ್ಲಿ ಕಾಂಗ್ರೆಸ್ ಖಾಲಿಯಾಗುತ್ತಿದೆ ಎನ್ನಲಾಗಿದೆ.
ಬಾಕ್ಸ್:
ಬಿಜೆಪಿ ಪಾಳಯಕ್ಕೆ ಸೋಮನಾಥ ಭಂಡಾರಿ
ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್‌ರೊಂದಿಗೆ ಜೊತೆಯಾಗಿರುವ ಕಾಂಗ್ರೆಸ್ ಪಕ್ಷದ ೨೧ನೇ ವಾರ್ಡ್ ಸದಸ್ಯ ಸೋಮನಾಥ ಭಂಡಾರಿ ಕೂಡಾ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸದಸ್ಯರ ಸಂಖ್ಯಾಬಲ ಪ್ರದರ್ಶನದಲ್ಲಿ ಕೈ ಎತ್ತಿರುವುದು ಕಾಂಗ್ರೆಸ್ ಅಧಿಕಾರ ಹಿಡಿಯುವ ಪ್ರಯತ್ನ ಮಾಡದೇ ಕೈ ಚೆಲ್ಲಿ ಕುಳಿತಿದೆ ಎಂಬುದು ನಿಶ್ಚಿತವಾಗಿದೆ. ಹತ್ತಕ್ಕೂ ಕಡಿಮೆ ಸಂಖ್ಯೆಗೆ ಇಳಿದಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಸೋಮವಾರ ನಡೆಯುವ ಆಯ್ಕೆ ಪ್ರಕ್ರೀಯೆಯಲ್ಲಿ ಕೆಲವರು ಗೈರಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಲೋಕಸಭೆ ಚುನಾವಣೆ ನಂತರ ಗಂಗಾವತಿ ವಿಧಾನಸಭೆಯ ಬಹುತೇಕ ನಾಮ