ಗಂಗಾವತಿ.

ಈದ್ ಮಿಲಾದ್ ಹಬ್ಬದ ಶುಭಾಷಯ ಕೊರುವ ಬ್ಯಾನರ್‌ನಲ್ಲಿ ಕೆಲವು ಮುಸ್ಲಿಂ ಯುವಕರು ಫ್ರೀ ಪ್ಯಾಲೆಸ್ತೇನ್ ಎಂಬ ಬಹರ ಬರೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಧವಾರ ನಗರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಸೆ.15 ರಂದು ನಗರದ ಕಿಲ್ಲಾ ಏರಿಯಾದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಶುಭಾಷಯ ಕೊರುವ ಬ್ಯಾನರ್‌ನಲ್ಲಿ ಫ್ರೀ ಪ್ಯಾಲೆಸ್ತೀನ್ ಎಂಬ ಬರಹ ಬರೆಯಲಾಗಿತ್ತು.  ಇದನ್ನು ಗಮನಿಸಿದ್ದ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಮಾಹಿತಿ ನೀಡಿದ್ದರು.  ಈ ವಿಷಯ ಮಾಧ್ಯಮಗಳಲ್ಲು ಪ್ರಕಟವಾಗಿತ್ತು.  ಸೆ.೧೬ ರಂದು ನಗರದಲ್ಲಿ ಮುಸ್ಲಿಂರು ಹಮ್ಮಿಕೊಂಡಿದ್ದ ಈದ್ ಮೀಲಾದ್ ಹಬ್ವದ ಸಂದರ್ಭದಲ್ಲಿ ಫ್ರೀ ಪ್ಯಾಲೇಸ್ತಿನ್ ಬರಹ ಬರೆದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿತ್ತು.  ಆದರೆ ಅಂದು ವಿಷಯ ತಿಳಿದಿದ್ದ ಪೊಲೀಸರು ಬರಹದ ಬ್ಯಾನರ್ ತೆರವು ಮಾಡಿಸಿದ್ದರು.  ಈದ್ ಮಿಲಾದ್ ಮತ್ತು ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ಮೌನವಹಿಸಿದ್ದ ಪೊಲೀಸ್ ಅಧಿಕಾರಿಗಳು ಸೆ.೧೮ ರಂದು ಕಿಲ್ಲಾ ಏರಿಯಾದ  22 ವರ್ಷದ ಅಲ್ತಫ್ ಹುಸೇನ್ ತಂದೆ ಸುಬಾನ್‌ಸಾಬ್ ಮತ್ತು 23 ವರ್ಷದ  ಖಾಜಾಪಾಷಾ  ತಂದೆ ದಾದೇಸಾಬ್ ಎಂಬುವವ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!