ಗಂಗಾವತಿ.
ನಗರದ ಕಿಲ್ಲಾ ಏರಿಯಾದಲ್ಲಿ ಈದ್ ಮಿಲಾದ್ ಹಬ್ಬದ ಸ್ವಾಗತ ಕೊರುವ ಬ್ಯಾನರ್ ನಲ್ಲಿ ಫ್ರೀ ಪ್ಯಾಲೆಸ್ತೀನ್ ಎಂಬ ಬರಹ ಕಂಡು ಗಮನಿಸಿದ ಹಿಂದೂಪರ ಸಂಘಟನೆಯ ಕೆಲ ಯುವಕರು ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾತ್ರೋ ರಾತ್ರಿ ಬ್ಯಾನರ್ ತೆರವುಗೊಳಿಸಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೊಗಿ ಫ್ರೀ ಪ್ಯಾಲೆಸ್ತೇನ್ ಎಂಬ ಬರಹವಿದ್ದ ಬ್ಯಾನರ್ ನ್ನು ತೆರವುಗೊಳಿಸಿದ ನಂತರ ಬೇರೆ ಬ್ಯಾನರ್ ಹಾಕಿದ್ದಾರೆ.
ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಕೆಲವು ಮುಸ್ಲಿಂ ಯುವಕರು ಈ ಬ್ಯಾನರ್ ಹಾಕಿದ್ದರು ಎನ್ನಲಾಗಿದೆ. ಗಣೇಶ ಮತ್ತು ಈದ್ ಮಿಲಾದ್ ಹಬ್ಬ ನಡೆಯುತ್ತಿರುವುದರಿಂದ ಗಂಗಾವತಿ ನಗರದಲ್ಲಿ ಪೊಲೀಸರು ಹೈ ಸೆಕ್ಯೂರಿಟಿ ನೀಡಿದ್ದು, ಹಗಲು ರಾತ್ರಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.