ಗಂಗಾವತಿ.
ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಅಂದರೆ ಸೆ.22 ರಂದು ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನಲ್ಲಿ ಕಾಡಾ ಅಧ್ಯಕ್ಷರ ಹಸನ್ ಸಾಬ್ ದೊಟಿಹಾಳ್ ರ ಹೆಸರು ಹಾಕದೆ ಕೊಕ್ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ. ಅದೇ ರೀತಿ ಗಂಗಾವತಿ, ಸಿಂಧನೂರು ಶಾಸಕರನ್ನು ಕೈಬಿಡಲಾಗಿದೆ. ಪತ್ರಿಕೆಗಳಿಗೆ ಬಾಗಿನ ಸಮರ್ಪಣೆ ಮತ್ತು ಕ್ರಸ್ಟ್ ಗೇಟ್ ಪುನರ್ ನಿರ್ಮಾಣ ಸಂಸ್ಥೆ, ನಿಗಮದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವ ಕುರಿತು ನೀರಾವರಿ ನಿಗಮದಿಂದ ಜಾಹಿರಾತು ನೀಡಲಾಗಿದೆ. ಈ ಜಾಹಿರಾತಿನಲ್ಲಿ ವಿಜಯನಗರ,ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ವಿಜಯನಗರ, ಕೊಪ್ಪಳ ಎರಡು ಕ್ಷೇತ್ರದ ಶಾಸಕರಾದ ಗವಿಯಪ್ಪ, ರಾಘವೇಂದ್ರ ಹಿಟ್ಬಾಳ್ ಮತ್ತು ಬಳ್ಳಾರಿ, ಕೊಪ್ಪಳ ಸಂದರ ಹೆಸರನ್ನು ಮಾತ್ರ ಹಾಕಿದ್ದಾರೆ. ಆದರೆ ಕಾಡಾ ಅಧ್ಯಕ್ಷರನ್ನು ಕೈಬಿಡಲಾಗಿದೆ. ಕಾಡಾ ಅದ್ಯಕ್ಷರಾಗಿರುವ ಹಸನ್ ಸಾಬ್ ದೊಟಿಹಾಳ್ ಅವರ ಹೆಸರನ್ನೂ ನಮೂದಿಸದಿರುವುದು ಆಶ್ಚರ್ಯ ಮೂಡಿಸಿದೆ. ಬಾಗಿನ ಸಮರ್ಪಣೆ ಸಮಾರಂಭದಲ್ಲೂ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಎಲ್ಲಾ ಕ್ಷೇತ್ರದ ಶಾಸಕರು ಹೆಸರು ಹಾಕಿದ್ದರೆ ಆಯಾ ಕ್ಷೇತ್ರದ ಜನರಲ್ಲಿ ಕೂಡಾ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಈ ಶಾಸಕರುಗಳು ಕಾಡಾ ಅಧ್ಯಕ್ಷರ ಹೆಸರು ಬಿಟ್ಟಿರುವುದು ಯಾಕೆ ಎಂಬ ಉತ್ತರ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನೀಡಬೇಕಾಗಿದೆ. ವಿಶೇಷವಾಗಿ ಜಲ್ಲೆಯಲ್ಲಿ ನಡೆಯುವ ಯಾವುದೇ ಸರಕಾರಿ ಕಾರ್ಯಕ್ರಮ ಜಾಹಿರಾತಿನಲ್ಲಿ ಸಂಬಂಧದಿಸಿದ ಇಲಾಖೆ ಜಿಲ್ಲೆಯಲ್ಲಿ ಬರುವ ಎಲ್ಲಾ ಶಾಸರು, ಸಂಸದರು, ಎಂಎಲ್ ಸಿ ಗಳ ಹೆಸರನ್ನು ಅಹ್ವಾನ ಪತ್ರಿಕೆಯಲ್ಲಿ ಹಾಕುವುದು ಕಡ್ಡಾಯವಿದೆ. ಆದರೆ ಬಾಗಿನ ಅರ್ಪಣೆ ಜಾಹಿರಾತಿನಲ್ಲಿ ಯಾಕೆ ಶಾಸಕರ ಹೆಸರು ಹಾಕಿಲ್ಲ ಎಂಬ ಚರ್ಚೆ ನಡೆಯುತ್ತಿದೆ.