ಗಂಗಾವತಿ.
ಅಂಗನವಾಡಿ ಕೇಂದ್ರ ಕಟ್ಟಡದ ಆರ್ ಸಿಸಿ ಸೀಲಿಂಗ್ ಬಿದ್ದು ನಾಲ್ಕು ಮಕ್ಕಳಿಗೆ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸೋಮವಾರ ಬೆಳೆಗ್ಗೆ ನಗರದ 7ನೇ ವಾರ್ಡಿನ ಮೆಹಬೂಬನಗರದ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದೆ. ಬೆಳೆಗ್ಗೆ ಕೇಂದ್ರ ಪ್ರಾರಂಭವಾಗುತ್ತಿದ್ದಂತೆ ಸುಮಾರು 20 ಮಕ್ಕಳು ಕೇಂದ್ರಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ದಿಡೀರ್ ಸಿಲೀಂಗ್ ಉದುರಿ ಬಿದ್ದಿದೆ. 5 ವರ್ಷದ ಮನ್ವಿತ್, ಸುರಕ್ಷಾ, ಮರ್ಧಾನ್ ಮತ್ತು 4 ವರ್ಷದ ಅಮನ್ ಎಂಬ ನಾಲ್ಕು ಮಕ್ಕಳಿಗೆ ಗಾಯವಾಗಿದೆ. ಗಾಯಗೊಂಡ ಮಕ್ಕಳನ್ನು ತಕ್ಷಣ ನಗರದ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ನಂತರ ಡಾ. ಈಶ್ವರ ಸವಡಿ ಮಾತನಾಡಿ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಯಾವುದೇ ಅಪಯಾವಾಗಿಲ್ಲ ಎಂದರು. ವಾರ್ಡಿನ ನಗರಸಭೆ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ನವೀನ್ ಪಾಟೀಲ್, ಉಸ್ನಾನ್, ಸುಚೇತಾ ಶಿರಿಗೇರಿ, ಉಮೇಶ ಸಿಂಗನಾಳ, ಪರಶುರಾಮ ಮಡ್ಡೇರ, ನೀಲಕಂಠ ಕಟ್ಟಿಮನಿ, ಮುಖಂಡ ದುರಗೇಶ ದೊಡ್ಡಮನಿ, ರಾಚಪ್ಪ ಸಿದ್ದಾಪುರ, ಕಂಮ್ಲಿಬಾಬಾ ಮತ್ತಿತರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು ಪಾಲಕರು ಇದ್ದರು.
ಕಳದ 7 ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಿದ್ದು, ಆರ್ ಸಿಸಿ ಕಾಮಗಾರಿ ಕಳಪೆಯಾಗಿದ್ದು, ನಿರಂತರವಾಗಿ ಮಳೆ ಸುರಿದ ಪರಿಣಾಮ ನೀರು ನಿಂತು ಸಿಲೀಂಗ್ ಶಿಥಿಲ್ ಗೊಂಡ ಪರಿಣಾಮ ಘಟನೆ ನಡೆದಿದೆ. ನಿರಂತರ ಮಳೆಯಾಗುತ್ತಿರುವದರಿಂದ ನಗರದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ತಕ್ಷಣ ದುರಸ್ಥಿಗೊಳಿಸಲು ಮುಂದಾಗುವಂತೆ ನಗರಸಭೆ ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ ಅಗ್ರಹಿಸಿದ್ದಾರೆ.