ಗಂಗಾವತಿ.
ನಗರದ ನ್ಯಾಯಾಲಯದ ಹಳೆಯ ಕಟ್ಟಡವನ್ನು ಯಾವುದೇ ಕಾರಣಕ್ಕೂ ತೆರವು ಮಾಡದೇ  ಸ್ಮಾರಕವಾಗಿ ಉಳಿಸಿಕೊಳ್ಳುವಂತೆ ಹೈಕೋರ್ಟ್ ರಜಿಸ್ಟರ್ ಜನರಲ್  ಕೆ.ಎಸ್. ಭರತ್ ಕುಮಾರ್ ಅವರು ಆದೇಶ ಮಾಡಿದ್ದಾರೆ.
ಗಂಗಾವತಿ ನಗರದಲ್ಲಿ 1838 ರಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶತಮಾನ ಕಂಡ ಕಟ್ಟಡ ಹಳೆಯದಾಗಿದ್ದರಿಂದ ಎಂಟು ವರ್ಷಗಳ ಹಿಂದೆ ರಾಜ್ಯ ಸರಕಾರ ನೂತನ ಕಟ್ಟಡ ನಿರ್ಮಿಸಿದ ನಂತರ ಈಗ ಹೊಸ ಕಟ್ಟಡದಲ್ಲಿ ನ್ಯಾಯಲಯ ಕಲಾಪಗಳು ನಡೆಯುತ್ತಿವೆ. ಹೀಗಾಗಿ ಹಳೆಯ ಕಟ್ಟಡವನ್ನು ಖಾಲಿ ಬಿಡಲಾಗಿದ್ದು, ಅದನ್ನು ತೆರವು ಮಾಡಬೇಕೆ ಅಥವಾ ಸ್ಮಾರಕವಾಗಿ ಉಳಿಸಿಕೊಳ್ಳಬೇಕೆ ಎಂಬ ಚರ್ಚೆ ನಡೆಯುತ್ತಿತ್ತು.  ಚರ್ಚೆಯ ನಡುವೆ ಜಿಲ್ಲಾ ಸತ್ರ ನ್ಯಾಯಾಧೀಶರು   ಹಳೆಯ‌ ಕಟ್ಟಡವನ್ನು ಸ್ಮಾರಕವಾಗಿ ಉಳಿಸಿಕಳ್ಳಲು ಅನುಮತಿ‌ ಕೋರಿ ಹೈಕೋರ್ಟ್ ಗೆ ಪತ್ರ ಬರೆದು ಮನವಿ ಮಾಡಿದ್ದರು.  ಹೀಗಾಗಿ ಪತ್ರಕ್ಕೆ ಸ್ಪಂದಿಸಿರುವ ಹೈಕೋರ್ಟ್ ರಜಿಸ್ಟರ್ ಜನರಲ್ ಅವರು ಅವರು 1838 ರಲ್ಲಿ ನಿರ್ಮಾಣವಾಗಿರುವ ಗಂಗಾವತ ನ್ಯಾಯಾಲಯದ ಹಳೆಯ ಕಟ್ಟಡವನ್ನು ಸ್ಮಾರಕವಾಗಿ ರಕ್ಷಣೆ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದಾರೆ. ಹೀಗಾಗಿ ಈಗ ಗಂಗಾವತಿ ಹಳೆಯ ನ್ಯಾಯಾಲಯ ಕಟ್ಟಡ ಶತಮಾನದ ಸ್ಮಾರಕವಾಗಲಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕಟ್ಟಡವನ್ನು ಸ್ಮಾರಕವನ್ನಾಗಿಸಿ  ಸಾರ್ವಜನಿಕರು ವೀಕ್ಷಣೆ ಮಾಡಿ ಇತಿಹಾಸವನ್ನು ಕಣ್ಣ ತುಂಬಿಸಿಕೊಳ್ಳುವಂತೆ ಮಾಡಲು ಮುಂದಾಗಬೇಕಿದೆ ಎಂದು ನಾಗರೀಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!