ಗಂಗಾವತಿ.
ನಗರದ 17 ನೆ ದಿನದ ಗಣಪತಿ ವಿಸರ್ಜನೆ ಡ್ಯಾನ್ಸ್ ನಡೆಯುತ್ತಿರುವಾಗ ಹಿಂದೂ ಯುವಕರ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು ಘರ್ಷಣೆಯಲ್ಲಿ ಯುವಕನಿಗೆ ಚಾಕು ಇರಿತವಾಗಿ ಗಂಭಿರ ಗಾಯಗೊಂಡು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇನ್ನುಳಿದ ಮೂವ್ವರು ಯುವಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾತ್ರಿ ಗಂಗಾವತಿ ನಗರದ ಯಶೋದಾ ಆಸ್ಪತ್ರೆ ಎದುರು ತಡ ರಾತ್ರಿ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿ ಚಾಕು ಇರಿತದ ಘಟನೆ ನಡೆದಿದೆ. ಸೋಮವಾರ ನಗರದಲ್ಲಿ ವಿವಿಧ ಭಾಗದಲ್ಲಿ ಒಂದೆ ದಿನ 17 ಗಣಪತಿಗಳ ವಿಸರ್ಜನೆ ಮೆರವಣಿಗೆಯಗೆ ನಡೆದಿತ್ತು. ಗುಂಡಮ್ಮ ಕ್ಯಾಂಪ್ ನ ಗಜಾನನ ಯುವಕರ ಸಂಘದ ಡಿಜೆ ಎದುರು ಡಾನ್ಸ್ ಮಾಡುತ್ತಿದ್ದ 38 ವರ್ಷ ಯುವಕ ಶಿವು ತಂದೆ ದುರುಗಪ್ಪ ಅಂಬೇಡ್ಕರ್ ನಗರ ಎಂಬ ವ್ಯಕ್ತಿಯ ಹೊಟ್ಟೆಯ ಬಲಭಾಗಕ್ಕೆ ಚಾಕು ಇರಿತಕ್ಕೊಗಾಗಿದ್ದಾನೆ. ಇನ್ನುಳಿದ 20 ವರ್ಷದ ಗುಂಡಮ್ಮ ಕ್ಯಾಂಪಿನ ಗಣೇಶ ತಂದೆ ಶ್ರೀನಿವಾಸ, ಮಂಜು ತಂದೆ ಶಂಕ್ರಪ್ಪ ಮತ್ತು ಸಾಗರ್ ತಂದೆ ಮನೋಹರ 25 ವರ್ಷ ಇವರಿಗೆ ತಲೆಗೆ, ಹೊಟ್ಟೆಗೆ, ಕುತ್ತಿಗೆಗೆ ಗಾಯವಾಗಿದೆ.
ಮುತ್ತಣ್ಣ, ಧರ್ಮಣ್ಣ, ಬಾಬು, ವೆಂಕಟೇಶ, ಜಂಭ, ಹಾಗೂ ಇತರೆ 15-20 ಜನರು ಹಲ್ಲೆ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಲಾಗಿದೆ. ಘಟನೆಗೆ ಕಾರಣ ತಿಳಿದಿಲ್ಲ.
ಕಳೆದ ದಿನ ರಾತ್ರಿ ನಗರದ ವಿವಿಧ ಭಾಗದಲ್ಲಿ 11 ಡಿಜೆ ಮೆರವಣಿಗೆ ನಡೆದಿದ್ದು, ಎಸ್ ಪಿ, ಡಿವೈಎಸ್ ಪಿ ಸೇರಿ ಸೂಕ್ತ ಕಟ್ಟೆಚ್ಚರ ವಿಧಿಸಿದ್ದರೂ ಘಟಣೆ ನಡೆದಿರುವುದು ನಗರದ ನಾಗರಿಕರಲ್ಲಿ ಆತಂಕ ಮೂಡಿದೆ.