ಗಂಗಾವತಿ.
ತಾಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವ ಮಾ.೧೧ ಮತ್ತು ೧೨ರಂದು ನಡೆಯಲಿದ್ದು, ಉತ್ಸವದ ಯಶಸ್ವಿಗೆ ಪೂರಕವಾಗಿ ಎರಡು ದಿನ ಮುಂಚೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಅದ್ದೂರಿ ಉತ್ಸವ ಆಚರಿಸಲು ಸರ್ವರು ಸನ್ನದ್ಧರಾಗಬೇಕು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಕರೆ ನೀಡಿದರು.
ಶುಕ್ರವಾರ ಆನೆಗೊಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಬೆಳೆಗಿಸುವ ಮೂಲಕ ಅವರು ಮಾತನಾಡಿದರು. ಮಹಿಳಾ ದಿನಾಚರಣೆ ದಿನವಾಗಿರುವ ಇಂದು ಉತ್ಸವದ ನಿಮಿತ್ಯ ಆಯೋಜಿಸಿರುವ ಕ್ರೀಡಾಕೂಟವನ್ನು ಮಹಿಳಾ ಅಂತರಾಷ್ಟ್ರೀಯ ಕ್ರೀಡಾಪಟು ಪ್ರಗತಿ ಹುಡೇದ್ ಅವರ ಕೈಯಿಂದ ಉದ್ಘಟನೆ ಮಾಡಿಸುತ್ತಿರುವುದು ಮಹಿಳೆರಿಗೆ ನೀಡಿದ ಗೌರವವಾಗಿದೆ. ನಾನು ಈ ಹಿಂದೆ ರಾಜ್ಯ ಸರಕಾರದ ಪ್ರವಾಸೋಧ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣದೇವರಾಯ ಅವರ ೫೦೦ನೇ ಪಟ್ಟಾಭಿಷೇಕ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ದೇಶ, ವಿದೇಶಗಳ ಸುಮಾರು ೨೫ ಲಕ್ಷಕ್ಕೂ ಅಧಿಕ ಜನ ಭಾಗವಹಿಸಿ ವಿಜಯನಗರ ಮತ್ತು ಹಂಪಿಯ ಇತಿಹಾಸ ತಿಳಿದುಕೊಂಡು ಮೂರು ದಿನ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದರು. ಈಗ ನಾನು ಗಂಗಾವತಿ ಕ್ಷೇತ್ರದ ಶಾಸಕನಾಗಿ ಐತಿಹಾಸಿಕ ಆನೆಗೊಂದಿ ಉತ್ಸವ ಆಚರಿಸುವ ಭಾಗ್ಯ ದೊರೆತಿದೆ. ಆನೆಗೊಂದಿ ಉತ್ಸವ ಈ ಭಾಗದ ಇತಿಹಾಸ, ಸಂಸ್ಕೃತಿಕ, ಕಲೆಯ ಪರಿಚಯ ಮಾಡಿಕೊಡುವ ಉತ್ಸವವಾಗಲಿದೆ. ಜೊತೆಗೆ ಕಿಷ್ಕಿಂದಾ ಪ್ರದೇಶವಾಗಿರುವುದರಿಂದ ರಾಮಾಯಣ ಕಾಲದ ಮತ್ತು ಕಿಷ್ಕಿಂದಾ ಪ್ರದೇಶದ ಇತಿಹಾಸವನ್ನು ಸಾರುವ ಸಾಂಸ್ಕೃತಿಕ ಸಂಗೀತ ರೂಪವವನ್ನು ಉತ್ಸವದಲ್ಲಿ ಆಯೋಜಿಸಿದೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಅವರು ಮಾ.೧೧ ರಂದು ಸುಮಾರು ೨ ಗಂಟೆ ಸಂಗೀತ ಮತ್ತು ನೃತ್ಯ ರೂಪಕ ಮಾಡಲಿದ್ದಾರೆ. ಜೊತೆಗೆ ದೃವ ಸರ್ಜಾ, ಅರ್ಜುನ್ಯ ಜನ್ಯಾ ಮತ್ತಿತರು ಆಗಮಿಸಲಿದ್ದಾರೆ. ಆನೆಗೊಂದಿ ಸೇರಿದಂತೆ ಜಿಲ್ಲೆಯ ಸಮಸ್ಥ ಜನತೆ ಈ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಕಡಿಮೆ ಸಮಯದಲ್ಲಿ ಉತ್ಸವ ಆಚರಿಸಲು ಸರಕಾರ ಸಂಪೂರ್ಣ ಸಹಕಾರಿ ನೀಡಿದೆ. ಮತ್ತು ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಉತ್ಸವ ಯಶಸ್ವಿಗೆ ಗಟ್ಟಿಯಾಗಿ ನಿಂತಿದ್ದಾರೆ. ಆನೆಗೊಂದಿ ಗ್ರಾಪಂ ಸರ್ವ ಸದಸ್ಯರು ಮತ್ತು ಜನತೆ ಈ ಉತ್ಸವಕ್ಕೆ ಮೆರಗು ತರಬೇಕು ಎಂದು ಕರೆ ನೀಡಿದರು.
ಅಂತರಾಷ್ಟ್ರೀಯ ಐಸ್ಟಾಕ್ ಕ್ರೀಡಾಪಟು ಗಂಗಾವತಿಯ ಪ್ರಗತಿ ಹುಡೇದ್ ದೀಪ ಬೆಳೆಗಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ವಿಶೇಷ ಕ್ರೀಡೆಯಾಗಿರುವ ಐಸ್ಟಾಕ್ ಕ್ರೀಡೆಯಲ್ಲಿ ನಾನು ಭಾಗವಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನ ಮಾಡಿದ್ದಾನೆ. ನನ್ನ ಸಾಧನೆಯನ್ನು ಗುರುತಿಸಿರುವ ಶಾಸಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಆನೆಗೊಂದಿ ಉತ್ಸವದ ಕ್ರೀಡಾಕೂಟವನ್ನು ಉದ್ಘಾಟಿಸುವ ಅವಕಾಶ ಮಾಡಿಕೊಟ್ಟಿರುವುದು ನನಗೆ ಸಂತೋಷವಾಗಿದೆ. ಮಹಿಳೆಯರು ಪ್ರತಿಯೊಂದು ಕ್ರೀಡೆಯಲ್ಲಿ ನಿರ್ಭಿತಿಯಿಂದ ಭಾಗವಹಿಸಬೇಕು ಎಂದು ಕರೆ ನೀಡಿದ ಅವರು ಐಸ್ಟಾಕ್ ಕ್ರೀಡೆ ಕುರಿತು ಮಾಹಿತಿ ನೀಡಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಯಂಕಪ್ಪ ತಳವಾರ ಸ್ವಾಗತಿಸಿದರು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಜನಾರ್ಧನರೆಡ್ಡಿ ಅವರು ನೇತೃತ್ವದಲ್ಲಿ ಆನೆಗೊಂದಿ ಉತ್ಸವ ಆಯೋಜಿಸಲಾಗಿದೆ. ಉತ್ಸವದ ಯಶಸ್ವಿಗೆ ಪೂರಕವಾಗಿ ಎರಡು ದಿನ ಕ್ರೀಡಾಕೂಟಗಳನ್ನು ಆಯೋಜಿಸಿದೆ. ಮೊದಲ ರಾಜ್ಯಮಟ್ಟದ ದಿನ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ನಡೆಯುತ್ತದೆ. ಎರಡನೇ ದಿನ ಬಾಲ್ ಬ್ಯಾಟಮಿಂಟನ್, ಕಬಡ್ಡಿ ಮತ್ತಿತರ ಕ್ರೀಡೆಗಳನ್ನು ನಡೆಸಲಾಗುತ್ತದೆ ಎಂದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ಅರುಣಾ ಲಕ್ಷ್ಮೀ. ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ತಿಪ್ಪಣ್ಣ ಬಾಳೇಕಾಯಿ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಮಲ್ಲಿಕಾರ್ಜುನಸ್ವಾಮಿ, ಡಾ|| ವೆಂಕಟೇಶಬಾಬು, ಸಂಗಾಪುರ ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಯಕ, ಡಿವೈಎಸ್ ಪಿ ಸಿದ್ದಲಿಂಗಪ್ಪಗೌಡ, ತಹಶೀಲ್ದಾರ ಯು.ನಾಗರಾಜ, ತಾಪಂ ಇಒ ಲಕ್ಚ್ಮೀದೇವಿ, ಜಿಲ್ಲಾ ಯುವಜನ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶ ವಿಠ್ಟಲ್ ಬೋಜೇಗೌಡ, ಪೌರಾಯುಕ್ತ ವಿರುಪಾಕ್ಷಮೂರ್ತಿ, ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಮತ್ತಿತರು ಇದ್ದರು. ನಂತರ ಶಾಸಕ ಜನಾರ್ಧನರೆಡ್ಡಿ ಬಾಲ್ ಸರ್ವಿಸ್ ಮಾಡುವ ಮೂಲಕ ವಾಲಿಬಾಲ್ ಪಂದ್ಯಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!