ಗಂಗಾವತಿ.
ತಾಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವದ ಮಾಹಿತಿ ನೀಡುವ ಫ್ಲೇಕ್ಸ್‌ಗಳಲ್ಲಿ ಉತ್ಸವ ನೇತೃತ್ವವಹಿಸಿರುವ ಮತ್ತು ಅಧ್ಯಕ್ಷತೆವಹಿಸಿರುವ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಫೋಟೋಗೆ ಜಿಲ್ಲಾಡಳಿತ ಕೋಕ್ ನೀಡಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಹಾಕಿ ಶಾಸಕರ ಫೊಟೋ ಹಾಕದಿರುವ ಜಿಲ್ಲಾಡಳಿತದ ನಡೆ ಸರಿಯಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ತೀವ್ರವಾಗಿ ಖಂಡಿಸಿದ್ದಾರೆ.


ಈ ಕುರಿತು ಅವರು ಸಮರ್ಥವಾಣಿಯೊಂದಿಗೆ ಮಾತನಾಡಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾ.೧೧ ಮತ್ತು ೧೨ರಂದು ಆನೆಗೊಂದಿ ಉತ್ಸವ ತಾಲೂಕಿನ ಆನೆಗೊಂದಿ ಪ್ರವಾಸೋಧ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಆಯೋಜಿಸಿದೆ. ಈ ಉತ್ಸವ ಆಚರಿಸಲು ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ನೇತೃತ್ವ ಮತ್ತು ಅವರ ಸೂಚನೆ ಮೆರೆಗೆ ನಡೆಯುತ್ತಿದೆ. ಉತ್ಸವ ಆಯೋಜಿಸಿರುವ ಕುರಿತು ಜಿಲ್ಲಾಡಳಿತ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ತಾಲೂಕು ಮತ್ತು ಜಿಲ್ಲೆಯಾದ್ಯಂತ ಫ್ಲೇಕ್ಸ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದೆ. ಫ್ಲೇಕ್ಸ್‌ಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಭಾವಚಿತ್ರ ಮುದ್ರಿಸಲಾಗಿದೆ. ಆದರೆ ಉತ್ಸವದ ರೂವಾರಿ ಮತ್ತು ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಫೋಟೋ ಹಾಕದಿರುವುದು ತಾಲೂಕಿನ ಸಮಸ್ಥ ಕನ್ನಡಿಗರಿಗೆ ನೋವ್ವಾಗಿದೆ. ಕಳೆದ ಮಾರ್ಚ್ ೨ ಮತ್ತು ೩ರಂದು ಕನಕಗಿರಿ ಉತ್ಸವ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎದ್ದು ಕಾಣುವಂತೆ ಫ್ಲೇಕ್ಸ್‌ಗಳನ್ನು ಅಳವಡಿಸಿತ್ತು. ಆದರೆ ಅದೇ ಜಿಲ್ಲಾಡಳಿತ ಆನೆಗೊಂದಿ ಉತ್ಸವದಲ್ಲಿ ಕ್ಷೇತ್ರದ ಶಾಸಕರ ಫೊಟೋ ಹಾಕದೇ ನಿರ್ಲಕ್ಷ ಮಾಡಿದೆ. ಈ ರೀತಿ ತಾರತಮ್ಯ ಮಾಡಿರುವ ಜಿಲ್ಲಾಡಳಿತದ ನಡೆಯನ್ನು ನಾನು ಖಂಡಿಸುತ್ತಿದ್ದೇನೆ. ಇದು ಕ್ಷೇತ್ರದ ಜನತೆಗೆ ಮಾಡಿದ ಅವಮಾನವಾಗಿದೆ. ಈ ರೀತಿ ಮಾಡಿರುವ ಜಿಲ್ಲಾಡಳಿತ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುವಂತೆ ಮಾಡಿದೆ. ಮತ್ತು ಕ್ಷೇತ್ರದ ಜನರಲ್ಲಿ ಜಿಲ್ಲಾಡಳಿತದ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ತಕ್ಷಣ ಜಿಲ್ಲಾಡಳಿತ ಉತ್ಸವದ ಎಲ್ಲಾ ಫ್ಲೇಕ್ಸ್‌ಗಳಲ್ಲಿ ಗಂಗಾವತಿ ಕ್ಷೇತ್ರದ ಶಾಸಕರ ಫೊಟೋ ಮುದ್ರಿಸಿ ಹಾಕಬೇಕು ಎಂದು ಪಂಪಣ್ಣ ನಾಯಕ ಒತ್ತಾಯಿಸಿದ್ದಾರೆ.
ಬಾಕ್ಸ್:
ಅಧಿಕಾರಿಗಳ ಎಡವಟ್ಟು: ಸರಿಪಡಿಸಲಾಗುವುದು
ಆನೆಗೊಂದಿ ಉತ್ಸವದ ಸ್ವಾಗತ ಫ್ಲೇಕ್ಸ್‌ಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಸಚಿವರ ಫೋಟೋ ಹಾಕಿ ಉತ್ಸವದ ನೇತೃತ್ವವಹಿಸಿರುವ ಕ್ಷೇತ್ರದ ಶಾಸಕರ ಫೊಟೋ ಹಾಕದೇ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸರಿಪಡಿಸುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬಾರದು ಎಂದು ತಿಳಿಸಲಾಗಿದೆ.
ಮನೋಹರಗೌಡ ಹೇರೂರು, ರಾಜ್ಯ ಉಪಾಧ್ಯಕ್ಷರು, ಕೆಆರ್‌ಪಿಪಿ ಮತ್ತು ಶಾಸಕರ ಆಪ್ತ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!