ಗಂಗಾವತಿ.
ಹತ್ತು ವರ್ಷದಲ್ಲಿ ಈ ದೇಶದಲ್ಲಿ ಸುಭದ್ರ ಸರಕಾರ ನೀಡಿ ಭಾರತವನ್ನು ಬಲಾಢ್ಯ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕೆಂಬ ಪ್ರಾರ್ಥನೆ ಸಲ್ಲಿಸಿರುವ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಮೆಟ್ಟಿಲು ದೀಪೋತ್ಸವ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶನಿವಾರ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರಾದ ಗಾದೇಪ್ಪ, ಮಂಜು, ವೀರಭದ್ರ, ಗಣೇಶ ಮತ್ತಿತರ ೫೭೪ ಮೆಟ್ಟಿಲುಗಳಲ್ಲಿ ದೀಪ ಹಚ್ಚಿ ನಂತರ ಪರ್ವತದ ಮೇಲೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ|| ಬಸವರಾಜ ಕ್ಯಾವಟರ್ ಅಧಿಕ ಮತಗಳ ಅಂತರದಿಂದ ಗೆಲ್ಲುವ ಮೂಲಕ ದೇಶದಲ್ಲಿ ಬಿಜೆಪಿ ೪೦೦ಸ್ಥಾನಗಳನ್ನು ಗಳಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸಂಕಲ್ಪ ಮಾಡಿ ಆಂಜನೇಯನಲ್ಲಿ ಪ್ರಾಥಿಸಿದ್ದಾರೆ.