ಗಂಗಾವತಿ.
ನಗರದ ೯೩ ಮತಗಟ್ಟೆಗಳಿಗೆ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಾಲೂಕು ಸ್ವೀಪ್ ಸಮೀತಿಯಿಂದ ಮತಗಟ್ಟೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಶೇಷವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರುಚಿ ರುಚಿಯಾದ ಭೋಜನದ ವ್ಯವಸ್ಥೆಯನ್ನು ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ಕೊಪ್ಪಳ ಲೋಕಸಭೆ ಚುನಾವಣೆ ಮತದಾನ ನಿಮಿತ್ಯ ನಗರದ ೩೫ ವಾರ್ಡ್‌ಗಳಲ್ಲಿ ಒಟ್ಟು ೯೩ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆಯೊತ್ತಿಗೆ ಮತಗಟ್ಟೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಜೆ ಚಹಾ ಮತ್ತು ಬಿಸ್ಕಿಟ್ ಮತ್ತು ರಾತ್ರಿ ಕ್ಯಾರೇಟ್ ಹಲ್ವಾ, ಚಪಾತಿ, ಪಲ್ಲೆ ಮತ್ತು ಅನ್ನ, ಸಾಂಬಾರ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಮತ್ತು ಮಂಗಳವಾರ ಬೆಳೆಗ್ಗೆ ಮತದಾನ ಪ್ರಾರಂಭವಾಗುತ್ತಿದ್ದಂತೆ ೮ಗಂಟೆಯೊಳಗೆ ಮಂಡಾಳ ವಗ್ಗರಣಿ, ಮಿರ್ಚಿ ಉಪಹಾರ ನೀಡಲಾಯಿತು. ೧೨ ಗಂಟೆಗೆ ಚಹಾ ಬಿಸ್ಕಿಟ್ ವಿತರಿಸಿದ್ದು, ಮದ್ಯಾಹ್ನ ಚಪಾತಿ, ಪಪ್ಪು, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ಜೊತೆಗೆ ತಂಪಾದ ಕುಡಿಯುವ ನೀರು ಕಲ್ಪಿಸಲಾಯಿತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಮೋಸಾ ಮತ್ತು ಬಿಸ್ಕಿಟ್ ನೀಡಿರುವುದು ಮತಗಟ್ಟೆ ಸಿಬ್ಬಂದಿ ಫುಲ್ ಖುಷಿಯಾಗಿದ್ದರು. ೯೩ ಮತಗಟ್ಟೆ ಸೇರಿ ಸುಮಾರು ೨೦೦೦ಕ್ಕೂ ಅಧಿಕ ಸಿಬ್ಬಂದಿಗಳು ಇದ್ದು, ಇವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲು ಸ್ವೀಪ್ ಸಮಿತಿ ನಗರಸಭೆ ಪೌರಾಯುಕ್ತರಿಗೆ ಉಸ್ತುವಾರಿ ನೀಡಿದ್ದರು. ಹೀಗಾಗಿ ಪೌರಾಯುಕ್ತ ವಿರುಪಾಕ್ಷಮೂರ್ತಿ ಅವರು ತಮಗೆ ನೀಡಿರುವ ಜವಬ್ದಾರಿಯನ್ನು ಅತ್ಯಂತ ಉತ್ಸಾಹದಿಂದ ನಿಭಾಯಿಸಿದ್ದು, ಬಿಸಿನಲ್ಲಿ ಬೇರೆ ತಾಲೂಕಿನಿಂದ ನಮ್ಮ ನಗರಕ್ಕೆ ಚುನಾವಣೆ ಕರ್ತವ್ಯಕ್ಕೆ ಬಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಊಟ ಮತ್ತಿತರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ. ಹೀಗಾಗಿ ನಮ್ಮ ನಗರಸಭೆ ಸಿಬ್ಬಂದಿಗಳ ಸಹಕಾರದೊಂದಿಗೆ ಎರಡು ದಿನ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಿದ್ದೇವೆ. ಎರಡು ದಿನ ವ್ಯವಸ್ಥೆಗೆ ನಮ್ಮ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳು, ಎಇಇ ಮತ್ತು ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಅಚ್ಚುಕಟ್ಟು ವ್ಯವಸ್ಥೆ ಮಾಡಿ ಶ್ರಮವಹಿಸಿದ್ದಾರೆ. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ ಎಂದು ಬಿಂಬಿತವಾಗಿದೆ. ಹೀಗಾಗಿ ಮತದಾನದಂದು ಕರ್ತವ್ಯನಿರ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದೇವೆ. ನಿಗದಿತ ಸಮಯಕ್ಕೆ ನಮ್ಮ ಸಿಬ್ಬಂದಿ ಎಲ್ಲಾ ಮತಗಟ್ಟೆಗಳಿಗೆ ಊಟ, ಉಪಹಾರವನ್ನು ತಲುಪಿಸಿದ್ದಾರೆ ಎಂದರು.
ಎಇಇ ಶಂಕರಗೌಡ, ವ್ಯವಸ್ಥಾಪಕ ಷಣ್ಮುಖ, ನೈರ್ಮಲ್ಯ ಅಭಿಯಂತರ ಚೇತನ, ಆರೋಗ್ಯ ನಿರೀಕ್ಷಕ ನಾಗರಾಜ, ಲೆಕ್ಕಾಧಿಕಾರಿ ಮಂಜುನಾಥ, ಸಹಾಯಕ ಲೆಕ್ಕಾಧಿಕಾರಿ ಶರಣಪ್ಪ ಮತ್ತಿತರು ಇದ್ದರು.