ಗಂಗಾವತಿ.
ಹೆಸರಾಂತ ಆಹಾರ ಪದಾರ್ಥ ಕಂಪನಿಯಾಗಿರುವ ಜಿಆರ್‌ಬಿ ಕಂಪನಿಯಿಂದ ಮೇ.22 ರಂದು ಬುಧವಾರ ಅಡುಗೆ ಮನೆ ಕಾರ್ಯಕ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ರೀತಿಯ ಖಾದ್ಯ ತಯಾರಿಸುವ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಜಿಆರ್‌ಬಿ ಕಂಪನಿಯ ಉತ್ತರ ಕರ್ನಾಟಕ ಭಾಗದ ಮಾರಾಟ ವ್ಯವಸ್ಥಾಪಕ ಕೆ.ಎಂ.ಜಡೇಶ ತಿಳಿಸಿದ್ದಾರೆ. ನಮ್ಮ ಜಿಆರ್‌ಬಿ ಕಂಪನಿ ಹಲವು ವರ್ಷಗಳಿಂದ ಸಿಹಿ ತಿಂಡಿ, ತುಪ್ಪ, ಮಸಾಲಾ ಪದಾರ್ಥ ಸೇರಿದಂತೆ ಉತ್ಕೃಷ್ಟವಾದ ನೂರಾರು ರೀತಿಯ ವಿವಿಧ ಖಾದ್ಯಗಳು ಮತ್ತು ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿದೆ. ಮತ್ತು ಗ್ರಾಹಕರಿಗೆ ಗುಣಮಟ್ಟದ ಪದಾರ್ಥಗಳನ್ನು ಒದಗಿಸುವಲ್ಲಿ ಖ್ಯಾತಿ ಹೊಂದಿದೆ. ಕರ್ನಾಟಕವಷ್ಟೇ ಅಲ್ಲ ದೇಶ, ವಿದೇಶಗಳಲ್ಲೂ ಜಿಆರ್‌ಬಿ ಮಾರುಕಟ್ಟೆ ಹೊಂದಿದೆ. ಕಂಪನಿ ಕೇವಲ ಲಾಭವನಷ್ಟೇ ನೋಡದೇ ಸಾಮಾಜಿಕ ಚಟುವಟಿಕೆಗೂ ಪ್ರೋತ್ಸಾಹಿಸುತ್ತಿದೆ. ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಅಡುಗೆ ಪದಾರ್ಥ, ಖಾದ್ಯವನ್ನು ಮಾಡುವ ಕುರಿತು ಕಂಪನಿ ಮಾಹಿತಿ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಗಂಗಾವತಿಯಲ್ಲಿ ಮೇ.22 ರಂದು ಬುಧವಾರ ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಸುಶಮೀಂದ್ರತೀರ್ಥ ಗುರುಕುಲ ಭವನದಲ್ಲಿ ಬೆಳೆಗ್ಗೆ 11 ಗಂಟೆಗೆ ಮಹಿಳೆಯರಿಗಾಗಿ ‘ಅಡುಗೆ ಮನೆ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಅಡುಗಡೆ ಪದಾರ್ಥಗಳು ಮತ್ತು ಖಾದ್ಯಗಳನ್ನು ತಯಾರಿಸುವ ಕುರಿತು ಪ್ರಾತ್ಯಕ್ಷತೆ ನೀಡಲಾಗುತ್ತಿದೆ. ಹೀಗಾಗಿ ಗಂಗಾವತಿ ನಗರದ ಗೃಹಿಣಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಡೇಶ ಕೊರಿದ್ದಾರೆ.
