ಗಂಗಾವತಿ.
ಅಖಿಲ ಭಾರತ ವೀರಶೈವ ಮಹಾಸಭಾ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಪ್ರಕ್ರೀಯೆ ನಡೆಯುತ್ತಿದ್ದು, ಬಿಜೆಪಿ ಮುಖಂಡ ಮನೋಹರಗೌಡ ಹೇರೂರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಬುಧವಾರ ಮಹಾಸಭಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿರುವ ಮನೋಹರಗೌಡ ಹೇರೂರು ಅವರು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಸಮಾಜದ ಎಲ್ಲಾ ಹಿರಿಯರು ನನ್ನನ್ನು ಪರಿಗಣಿಸಲಿ ಎಂದು ನಾನು ಮನವಿ ಮಾಡುತ್ತೇನೆ ಎಂದರು. ಶಾಸಕ ಜನಾರ್ಧನರೆಡ್ಡಿ ಅವರ ಆಪ್ತರಾಗಿರುವ ಮನೋಹರಗೌಡ ಹೇರೂರು ಅವರು ಬಿಜೆಪಿ ಮುಖಂಡರಾಗಿದ್ದು, ವೀರಶೈವ ಲಿಂಗಾಯತರೆಡ್ಡಿ ಸಮುದಾಯಕ್ಕೆ ಸೇರಿದ್ದು, ಗಂಗಾವತಿಯಲ್ಲಿ ರಾಜಕೀಯವಾಗಿ ಮತ್ತು ಸಮಾಜಮುಖಿಯಾಗಿ ಮಹೋಹರಗೌಡ ಹೇರೂರು ಸದಾ ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಈಗ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿರುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಮುಖಂಡರ ಚನ್ನವೀರನಗೌಡ ಆರ್‍ಹಾಳ, ವಿರೇಶ ಬಲಕುಂದಿ, ವಿರೇಶ ಸುಳೇಕಲ್ ಇದ್ದರು.