ಗಂಗಾವತಿ.
ನಗರದಲ್ಲಿ ಹಾದು ಹೋಗಿರುವ ರೈಲ್ವೆ ಟ್ರಾಕ್ ಮೇಲೆ ಮದ್ಯ ಸೇವನೆ ಮಾಡಿ ಮಲಗಿದ್ದ ಮೂವ್ವರು ಯುವಕರು ರೈಲ್ವೆಗೆ ಬಲಿಯಾಗಿರುವ ಹೃಯದ ವಿದ್ರಾಹಕ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ಬರುವ ಅಗ್ನಿ ಶಾಮಕದಳ ಕಚೇರಿ ಸಮೀಪದಲ್ಲಿ ಹಾದು ಹೋಗಿರುವ ರೈಲ್ವೆ ಟ್ರಾಕ್ ಮೇಲೆ ರಾತ್ರಿ ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೊರಟಿದ್ದ ರೈಲ್ವೆ ಹರಿದು ದುರ್ಮರಣಕ್ಕಿಡಾಗಿದ್ದಾರೆ. ಬಲಿಯಾದ ಯುವಕರು ಗಂಗಾವತಿ ನಗರದ ಕಿಲ್ಲಾ ಏರಿಯಾದ ೨೦ ವರ್ಷದ ಮೌನೇಶ, ಗೌರಮ್ಮಕ್ಯಾಂಪಿನ ೨೩ ವರ್ಷದ ಸುನಿಲ್ ಮತ್ತು ಹಿರೇಜಂತಕಲ್ ನಿವಾಸಿ ೨೦ ವರ್ಷದ ಭೀಮಾ ನಾಯ್ಕ್ ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಮಾಡಿ ಕುಡಿತದ ಮತ್ತಿನಲ್ಲಿ ಟ್ರಾಕ್ ಮೇಲೆ ಸ್ವಾದೀನವಿಲ್ಲದೇ ಮಲಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಪ್ರಕರಣದಲ್ಲಿ ದಾಖಲಾಗಿದೆ.
ಗಂಗಾವತಿಯಲ್ಲಿ ಹದೆ ಹರಿಯದ ಯುವಕರು ಹಲವು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ನಗರದ ಹೊರ ಹೊಲಯದಲ್ಲಿ ಮದ್ಯ ಸೇವನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳುತ್ತಿರುವುದೇ ಈ ಘಟನೆ ಕಾರಣ ಎಂದು ಸಾರ್ವಜನಿಕನ ವಲಯಚಲ್ಲಿ ಚರ್ಚೆಯಾಗುತ್ತಿದೆ. ದುರ್ಮರಣಕ್ಕಿಡಾಗಿರುವ ಯುವಕರು ಮದ್ಯ ಸೇವನೆ ಜೊತೆಗೆ ಗಾಂಜಾ ಸೇವನೆಯನ್ನು ಮಾಡಿರಬಹುದು ಎಂದು ಅಂದಾಜಿಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರವೇ ಅಂತಿಮ ನಿರ್ಧಾರ ತಿಳಿಯಲಿದೆ.