ಗಂಗಾವತಿ.
ಪ್ರತಿಷ್ಟಿತ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ನರ್ಸರಿಯಿಂದ ನೌಕರಿವರೆಗೆ, ಸ್ವಾವಲಂಬಿ ವಿದ್ಯಾರ್ಥಿ ಜವಬ್ದಾರಿಯುತ ಶಿಕ್ಷಣ ಎಂಬ ಕಲ್ಪನೆಯೊಂದಿಗೆ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕಿದೆ. ನಮ್ಮ ಸಂಸ್ಥೆಯಿಂದ ಗಂಗಾವತಿ ನಗರದ ಕೊಪ್ಪಳ ರಸ್ತೆಯ ವಡ್ಡರಹಟ್ಟಿ ಗ್ರಾಮದಲ್ಲಿ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ ಪದವಿ ತರಗತಿಗಳ ವಿಶೆಷ ಶಿಕ್ಷಣ ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ಈಗಾಗಲೇ ಸುಮಾರು ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಮಾಡಿದ್ದು, ವಿದ್ಯಾರ್ಥಿಗಳಿಗೆ ಈ ಪದವಿ ಶಿಕ್ಷಣದ ಹಂತದಲ್ಲೇ ಜಿಎಸ್‌ಟ, ಐಟಿ ರಿಟನ್ಸ್, ಹಣಕಾಸು ನಿರ್ವಹಣೆ, ಲೆಕ್ಕ ಪರಿಶೋಧನೆಯಂತಹ ಕೌಶಲ್ಯಾಧಾರಿತ ಶಿಕ್ಷಣ ನೀಡಲು ದೇಶದ ಪ್ರತಿಷ್ಟಿತ ಎನರ್ಜಿ ವಿದ್ಯಾ ಸಂಸ್ಥೆ ನಮ್ಮ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದು ವಿದ್ಯಾರ್ಥಿಗಳ ಮುಂದಿನ ಭವಷ್ಯಕ್ಕೆ ದಾರಿದೀಪವಾಗಲಿದೆ ಎಂದು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ಸೋಮವಾರ ಎನರ್ಜಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಂತರ ಅವರು ಸಂಸ್ಥೆಯ ಪ್ರತಿನಿಧಿಯೊಂದಿಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಅನುಗುಣವಾಗಿರುವ ಹಲವು ಕೋರ್ಸ್‌ಗಳನ್ನು ಪದವಿ ಅಧ್ಯಯನದಲ್ಲೆ ನೀಡಲು ನಾವು ಸಜ್ಜಾಗಿದ್ದೇವೆ. ವಿದ್ಯೆ ಕೇವಲ ಉದ್ಯೋಗಕ್ಕೆ ಸಿಮೀತವಾಗದೇ ಉದ್ಯಮಿಯಾಗಲು ಸಹಕಾರಿಯಾಗಿದೆ. ಹೀಗಾಗಿ ಪದವಿ ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಉದ್ಯಮಿಯಾಗುವಂತಹ ಮಾನಸಿಕತೆ ನಿರ್ಮಿಸುವುದರ ಜೊತೆಗೆ ಅವರು ಅವಶ್ಯವಿರುವ ಕೋರ್ಸ್‌ಗಳನ್ನು ನೀಡಲು ನಮ್ಮ ಸಂಸ್ಥೆ ಸಿದ್ಧವಾಗಿದೆ. ದೇಶದ ಪ್ರತಿಷ್ಟಿತ ಎನರ್ಜಿ ವಿದ್ಯಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಸಂಸ್ಥೆಯ ನುರಿತ ತಜ್ಞರಿಂದ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಕೌಶಲ್ಯ ಶಿಕ್ಷಣ ನೀಡಲಾಗುತ್ತದೆ. ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಜಿಎಸ್‌ಟಿ, ಐಟಿ ರಿಟನ್ಸ್, ಹಣಕಾಸು ನಿರ್ವಹಣೆ, ಬ್ಯಾಂಕಿಂಗ್ ಮಾಹಿತಿ ಈ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಈ ಪ್ರಾತ್ಯಕ್ಷತೆಯ ಶಿಕ್ಷಣದಿಂದ ವಿದ್ಯಾರ್ಥಿಗಳು ಪದವಿ ಪೂರೈಸುತ್ತಿದ್ದಂತೆ ನೇರವಾಗಿ ಕಂಪನಿಗಳಿಗೆ ನೇಮಕವಾಗಲಿದ್ದು, ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದ ಅವರು ಜೊತೆಗೆ ಪ್ರತಿಷ್ಟಿತ ಸಾಪ್ಟ್‌ವೇರ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳತ್ತಿದ್ದು, ಬಿಸಿಎ ಮತ್ತಿತರ ಶಿಕ್ಷಣ ಪೂರೈಸುತ್ತಿದ್ದಂತೆ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ದೊರಕಿಸಿಕೊಡಲಾಗುತ್ತದೆ. ನಮ್ಮ ಸಂಸ್ಥೆಯ ನರ್ಸರಿಯಿಂದ ನೌಕರಿವರೆಗೆ ಪರಿಕಲ್ಪನೆ ಸಾಕಾರಾಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಗಂಗಾವತಿ ಸೇರಿದಂತೆ ವಿವಿಧ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಎನರ್ಜಿ ವಿದ್ಯಾ ಸಂಸ್ಥೆಯ ಸುಮನ್ ಶೆಟ್ಟಿ ಮಾತನಾಡಿ, ನಮ್ಮ ಎನರ್ಜಿ ವಿದ್ಯಾ ಸಂಸ್ಥೆ ದೇಶದ ಪ್ರತಿಷ್ಟಿತ ಕಾಲೇಜ್‌ಗಳಲ್ಲಿ ಕೌಶಲ್ಯಾಧಾರಿತ ಕೋರ್ಸ್‌ನ್ನು ನೀಡುತ್ತಿದೆ. ಕರ್ನಾಟಕದಲ್ಲಿ ಗಂಗಾವತಿಯ ವಿದ್ಯಾನಿಕೇತನ ಕಾಲೇಜ್ ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮೊದಲ ಕಾಲೇಜ್ ಆಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿರುವ ವಿದ್ಯಾನಿಕೇತನ ಸಂಸ್ಥೆಯ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲೇ ಜಿಎಸ್‌ಟಿ, ಬ್ಯಾಂಕಿಂಗ್, ಐಟಿ ರಿಟನ್ಸ್ ಮುಂತಾದ ಕೋರ್ಸ್‌ಗಳನ್ನು ಪ್ರಾತ್ಯಕ್ಷಿಕವಾಗಿ ಕಲಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಟೆಕ್‌ಸಾತ್ ಸಂಸ್ಥೆಯ ಪ್ರತಿನಿಧಿ ಸಾತ್ವಿಕ್, ವಿದ್ಯಾನಿಕೇತನ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಕೃಷ್ಣ ಪ್ರಸಾದ, ನಳಿನ್, ವಡ್ಡರಹಟ್ಟಿಯ ಶಿವಪ್ಪ ನಾಯಕ ಇದ್ದರು. ಕಾಲೇಜಿನ ಪ್ರಾಚಾರ್ಯ ಅಭಿಷೇಕ ನಿರ್ವಹಿಸಿದರು.
ಬಾಕ್ಸ್:
ಅಂತರಾಷ್ಟ್ರೀಯ ಶಾಲೆ ಶೀಘ್ರ ಪ್ರಾರಂಭ
ಗಂಗಾವತಿ ಸೇರಿದಂತೆ ಜಿಲ್ಲೆಯ ಸಮಸ್ಥ ಜನರ ಸಹಕಾರದಿಂದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಇಂದು ನರ್ಸರಿಯಿಂದ ಪದವಿ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡು ಶಿಕ್ಷಣ ಪೂರೈಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿರುವ ನಮ್ಮ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಈಗ ರಾಜ್ಯದಲ್ಲಷ್ಟೆ ಅಲ್ಲ ದೇಶದಲ್ಲಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸುಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ನಮ್ಮ ಸಂಸ್ಥೆಯಿಂದ ಮುಂದಿನ ಕೆಲವೇ ವರ್ಷಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಅಂತರಾಷ್ಟ್ರೀಯ ಶಾಲೆಯನ್ನು ಗಂಗಾವತಿಯಲ್ಲಿ ಪ್ರಾರಂಭಿಸಲು ಸಜ್ಜಾಗಿದ್ದೇವೆ. ಅಂತರಾಷ್ಟ್ರೀಯ ಶಾಲೆ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.