ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ದರ್ಶನ ಪಡೆದು ಹೊರಬರುತ್ತಿದ್ದಂತೆ ಬೆಟ್ಟದ ಮೇಲೆಯೇ ಹೃದಯಾಘಾತವಾಗಿ ವ್ಯಕ್ತಯೋರ್ವ ಮೃತ ಪಟ್ಟಿರುವ ಘಟನೆ ನಡೆದಿದೆ.
ಶುಕ್ರವಾರ ಬೆಳೆಗ್ಗೆ ಮೃತಪಟ್ಟಿರುವ ಕುರಿತು ಪೊಲೀಸ್ ಮೂಲಗಳು ದೃಢಪಡಿಸಿವೆ. ರಾಜಸ್ಥಾನ ರಾಜ್ಯದ ಠಾಕ್ ಜಿಲ್ಲೆಯ 63 ವರ್ಷದ ಬಾಗ್ ಚಂದ್ ಠಾಕ್ ಎಂಬ ವ್ಯಕ್ತಿ ಯಾತ್ರಾತ್ರಿಗಳ ಬಸ್ ನೊಂದಿಗೆ ಆಗಮಿಸಿದ್ದು ಶುಕ್ರವಾರ ಬೆಳೆಗ್ಗೆ ಅಂಜನಾದ್ರಿ ಪರ್ವತವೇರಿ ಶ್ರೀ ಆಂಜನೇಯನ ದರ್ಶನ ಪಡೆದು ದೇವಸ್ಥಾನದಿಂದ ಹೊರಬರುತ್ತಿಂದಂತೆ ದಿಡೀರ್ ಹೃದಯಾಘಾತವಾಗಿ ಸ್ಥಳದಲ್ಲೆ ಮೃತಪಟ್ಟಿರುವುದ್ದಾನೆ. ಜೊತೆಗಿದ್ದ ಭಕ್ತರು ಆತಂಕಕ್ಕಿಡಾಗಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಮೃತನ ದೇಹವನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಮುಂದುನ ಕ್ರಮ ಕೈಗೊಂಡಿದ್ದಾರೆ.