ಗಂಗಾವತಿ.
ನಗರದ ಜುಲೈನಗರ ವೃತ್ತದಿಂದ ಮಹಾರಾಣಾ ಪ್ರತಾಪ್‌ಸಿಂಗ್ ವೃತ್ತದವರೆಗೆ ಗಂಗಾವತಿ ಶಾಸಕರು ರಸ್ತೆ ಅಭಿವೃದ್ಧಿಪಡಿಸಿ, ರಸ್ತೆಯ ಮಧ್ಯೆ ವಿದ್ಯುತ್ ಕಂಬಗಳನ್ನು ಹಾಕಿ ಕಂಬಗಳ ಮೇಲ್ತುದಿಯಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕತೆಯನ್ನು ಬಿಂಬಿಸುವ ಕೆಲವು ಚಿತ್ರಗಳನ್ನು ಹಾಕಿ ಅಂಜನಾದ್ರಿ ಭಕ್ತರ ಧಾರ್ಮಿಕ ಭಾವನೆಗೆ ಬೆಂಬಲ ನೀಡಿದ್ದಾರೆ. ಇಂತಹ ನಿರ್ಧಾರವನ್ನು ಸರ್ವರು ಸ್ವಾಗಬೇಕಾಗಿದೆ. ಆದರೆ ಕೆಲವು ವ್ಯಕ್ತಿಗಳು ವಿನಾಕಾರಣ ಗೊಂಡಲ ಸೃಷ್ಟಿಸಲು ತೆರವು ಮಾಡಬೇಕೆಂದು ನೀಡಿದ್ದ ಮನವಿಯನ್ನು ಪುರಸ್ಕರಿಸಿ ತಹಶೀಲ್ದಾರ ಅವರು ಏಕಾ ಏಕಿ ವಿದ್ಯುತ್ ಕಂಬಗಳ ತೆರವು ಮಾಡಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕೃತ ಆದೇಶ ಮಾಡಿರುವುದು ನಾವು ತೀವ್ರವಾಗಿ ಖಂಡಿಸುತ್ತೇವೆ. ತಹಶೀಲ್ದಾರ ಆದೇಶ ಹಿಂಬಪಡೆಯದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ಗಂಗಾವತಿ ಬಂದ್ ಕರೆ ನೀಡಿ ಉಗ್ರ ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ಕೆ.ವೆಂಕಟೇಶ ಹೇಳಿದ್ದಾರೆ.
ವಿದ್ಯುತ್ ಕಂಬಗಳ ತೆರವು ಕುರಿತು ತಹಶೀಲ್ದಾರ ಮಾಡಿದ್ದ ಆದೇಶದ ಸಮರ್ಥವಾಣಿ ವರದಿಯನ್ನು ಗಮನಿಸಿರುವ ಅವರು ಯುವ ಮೋರ್ಚಾ ಪದಾಧಿಕಾರಿಗಳೊಂದಿಗೆ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ತೆರವು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು. ಗಂಗಾವತಿ ತಹಶೀಲ್ದಾರರು ಏಕಾ ಏಕಿ ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ಎಂದು ಉಲ್ಲೇಖೀಸಿ ತೆರವು ಮಾಡಿ ಸಂಬಂಧಿಸಿದ ಕೆಆರ್‌ಡಿಐಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿರುವ ಸಂಗತಿ ಗಂಗಾವತಿ ಜನತೆ ಮತ್ತು ಅಂಜನಾದ್ರಿ ಭಕ್ತರ ಭಾವನೆಗೆ ಭಾವನೆಗೆ ಧಕ್ಕೆ ತಂದಿದ್ದಾರೆ. ಅಂಜನಾದ್ರಿಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣತೊಟ್ಟಿರುವ ಶಾಸಕರು, ಗಂಗಾವತಿಯ ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ನಾಮಗಳ ಚಿತ್ರಗಳ ವಿನ್ಯಾಸದೊಂದಿಗೆ ಅಳವಡಿಸಲಾಗಿರುವುದು ಗಂಗಾವತಿಯ ಸಮಸ್ತ ಜನತೆಗೆ ಸಂತಸದಾಯಕವಾಗಿದೆ/ ಮತ್ತು ಅಂಜನಾದ್ರಿಯ ಸರ್ವ ಭಕ್ತರಿಗೆ ಹ?ದಾಯಕ ಸಂಗತಿಯಾಗಿದೆ. ಈ ಚಿತ್ರಗಳು ಅಂಜನಾದ್ರಿ ಭಕ್ತರ ಮಾರ್ಗಸೂಚಿ ಮತ್ತು ಭಕ್ತರ ಧಾರ್ಮಿಕ ಶ್ರದ್ದೆಗೆ ಅನುಕೂಲವಾಗಲು ಹಾಕಲಾಗಿದೆ ಎಂದು ಶಾಸಕರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಗಂಗಾವತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಜನಾದ್ರಿ ಪರ್ವತ ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದುಕೊಂಡಿದೆ. ಪ್ರತಿವ? ನಡೆಯುವ ಹನುಮಮಾಲಾ ಕಾರ್ಯಕ್ರಮಕ್ಕೆ ಸ್ವತಃ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಅತ್ಯಂತ ವೈಭವದಿಂದ ಹಿಂದೂ ಧಾರ್ಮಿಕ ಪೂಜೆ, ಪುನಸ್ಕಾರಗಳನ್ನು ನಡೆಸಿ ಶ್ರದ್ಧೆಯನ್ನು ಮೆರೆಯುತ್ತಾ ಬಂದಿದ್ದಾರೆ. ಅಂಜನಾದ್ರಿಯ ಐತಿಹಾಸಿಕತೆಯನ್ನು ಬಿಂಬಿಸುವ ಉದ್ದೇಶದಿಂದ ಶಾಸಕರು ಕಂಬಗಳಿಗೆ ಕೆಲವು ಚಿತ್ರಗಳನ್ನು ಹಾಕಿಸಿದ್ದಾರೆ. ಆದರೆ ಈ ಚಿತ್ರಗಳಿಂದ ಯಾವ ಧರ್ಮ, ಜಾತಿಯವರ ಮನಸ್ಸಿಗೂ ನೋವಾಗುವುದಿಲ್ಲ. ಹನುಮಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಸ್ವತಃ ತಾಲೂಕು ಆಡಳಿತ ಮತ್ತು ನಗರಸಭೆಯಿಂದ ನಗರವನ್ನೆಲ್ಲ ವಿದ್ಯುತ್ ದೀಪಗಳಿಂದ ಅಲಂಕರಿಸಿ ಭಕ್ತರಿಗೆ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಈಗ ಕೆಲವು ವ್ಯಕ್ತಿಗಳು ನೀಡಿರುವ ಮನವಿಯನ್ನು ಪರಿಶೀಲಿಸದೇ ಮತ್ತು ಗಂಗಾವತಿ ಜನರ, ಶಾಸಕರು, ಸರ್ವ ಪಕ್ಷದ ಮುಖಂಡರ ಅಭಿಪ್ರಾಯ, ಸಲಹೆ ಪಡೆಯದೇ ಏಕಾಏಕಿ ವಿದ್ಯುತ್ ಕಂಬಗಳನ್ನು ತೆರವು ಮಾಡುವಂತೆ ತಹಶೀಲ್ದಾರರು ಆದೇಶ ಮಾಡಿರುವುದು ನಮ್ಮಗಳ ಮನಸ್ಸಿಗೆ ತುಂಬಾ ನೋವಾಗಿದೆ ಮತ್ತು ಸಮಸ್ಥ ಹಿಂದುಗಳ ಭಾವನೆಗಳಿಗೂ ಅವಮಾನ ಮಾಡಿದಂತಾಗಿದೆ. ಹೀಗಾಗಿ ಈ ಕಂಬಗಳನ್ನು ತೆರವು ಮಾಡಲು ಮಾಡಿರುವ ಆದೇಶವನ್ನು ತಹಶೀಲ್ದಾರರು ಹಿಂದಕ್ಕೆ ಪಡೆಯಬೇಕು. ಕಂಬಗಳ ತೆರವಿನ ಆದೇಶ ಹಿಂದಕ್ಕೆ ಪಡೆಯದಿದ್ದರೆ ನಾವು ಯಾವುದೇ ರೀತಿಯ ಉಗ್ರ ಹೋರಾಟಕ್ಕೂ ಸಿದ್ದರಿದ್ದೇವೆ. ಗಂಗಾವತಿ ನಗರದಲ್ಲಿ ಇನ್ನಿತರ ಧಾರ್ಮಿಕತೆ ಧಕ್ಕೆಯಾಗುವಂತಹ ಸಂಗತಿಗಳ ವಿರುದ್ಧವು ನಾವು ಹೋರಾಟ ನಡೆಸುತ್ತೇವೆ. ಹೀಗಾಗಿ ಗಂಗಾವತಿ ಜನರ ಭಾವನೆಗೆ ತಾವು ಮನ್ನಣೆ ನೀಡಿ ಕಂಬಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡದಂತೆ ಅಧಿಕೃತ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೇವೆ. ಒಂದುವೇಳೆ ತಹಶೀಲ್ದಾರರು ತಮ್ಮ ಆದೇಶ ಹಿಂಪಡೆಯದೇ ಕಂಬಗಳ ತೆರವಿಗೆ ಮುಂದಾದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ಗಂಗಾವತಿ ನಗರ ಯುವಮೋರ್ಚಾದಿಂದ ಗಂಗಾವತಿ ಬಂದ್” ಗೆ ಕರೆ ನೀಡಲಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ವೆಂಕಟೇಶ ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯುವಮೋರ್ಚಾ ಪದಾಧಿಕಾರಿಗಳಾದ ವಿಶ್ವನಾಥ, ದುರುಗೇಶ, ಪ್ರಜ್ವಲ್, ಮಹೇಶ, ಕಾರ್ತಿಕ್, ನಾಗರಾಜ, ಶಂಕರ ಮತ್ತಿತರರು ಇದ್ದರು.