ಕುಷ್ಟಗಿ.
ಪ್ರಧಾನಮಂತ್ರಿ ಹೊಸ ೧೫ ಅಂಶಗಳ ಕಾರ್ಯಕ್ರಮಗಳ ಅನುಷ್ಟಾನ ಸಮಿತಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ನಾಮ ನಿರ್ದೇಶನ ಮಾಡಿದ್ದು, ಕುಷ್ಟಗಿಯ ಸಾಮಾಜಿಕ ಹೊರಟಗಾರ ಮಹ್ಮದ್ ನಜೀರುದ್ಧೀನ್ ತಂದೆ ಅಬ್ದುಲ್ ರಹೀಮ್ ಮೂಲಿಮನಿ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ಆರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ನಾಗರಾಜ ಅವರು ರಾಜ್ಯ ಸರಕಾರದ ಶಿಪಾರಸ್ಸಿನಂತೆ ನೇಮಕ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ಕುಷ್ಟಗಿಯ ಮಹ್ಮದ್ ನಜೀರುದ್ಧೀನ್ ತಂದೆ ಅಬ್ದುಲ್ ರಹೀಮ್ ಮೂಲಿಮನಿ ಸೇರಿದಂತೆ ಪ್ರಶಾಂತ ತಂದೆ ಸುಬ್ಬಣ್ಣ ದೇಸಾಯಿ ಮಾದಿನೂರು, ಮೆಹಬೂಬ್‌ಪಾಷಾ ಮಾನ್ವಿ, ಮಾಜಿ ನಗರಸಭೆ ಕೊಪ್ಪಳ, ಕಾರಟಗಿ ತಾಲೂಕಿನ ಬೇವಿನಾಳ ಗ್ರಾಮದ ಸಮೀನಾಬೇಗಂ ಗಂಡ ಮೆಹಬೂಬ್‌ಪಾಷಾ, ಯರಡೋಣಾ ಗ್ರಾಮದ ಎಂ.ಮದವರಲಿ ತಂದೆ ರಾಜಾಸಾಬ್, ಸಿದ್ಧಾಪುರ ಗ್ರಾಮದ ಎಂ.ಡಿ.ಸಿರಾಜ್ ತಂದೆ ಹಿರೇದಾದಾಸಾಬ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಇದರ ಜೊತೆಯಲ್ಲೇ ಬೆಂಗಳೂರು ನಗರ, ಮೈಸೂರು, ರಾಯಚೂರು, ಮಂಡ್ಯ, ಚಾಮರಾಜನಗರ, ತುಮಕೂರು ಮತ್ತು ದಾವಣಗೇರಿ ಜಿಲ್ಲೆಯಿಂದಲೂ ಹಲವರನ್ನು ಸರಕಾರ ನಾಮ ನಿರ್ದೇಶನ ಮಾಡಿ ಆದೇಶ ಮಾಡಿದೆ. ಕುಷ್ಟಗಿಯಿಂದ ಮಹ್ಮದ್ ನಜೀರುದ್ಧೀನ್ ಅವರನ್ನು ನೇಮಕ ಮಾಡಿರುವುದು ಅವರ ಹಿತೈಷಿಗಳು ಅಭಿನಂದಿಸಿದ್ದಾರೆ.