ಗಂಗಾವತಿ.
ಅಪಘಾತ ಪರಿಹಾರ ನೀಡುವಲ್ಲಿ ವಿಳಂಬ ಮತ್ತು ನಿರ್ಲಕ್ಷ ಮಾಡಿರುವುದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡುವಂತೆ ಗಂಗಾವತಿ ನ್ಯಾಯಾಲಯದ ಆದೇಶದಂತೆ ಬಸ್‌ನ್ನು ಜಪ್ತಿ ಮಾಡಲಾಗಿದೆ.
ಸೋಮವಾರ ಅಪಘಾತದಲ್ಲಿ ಮೃತರಾಗಿರುವ ವ್ಯಕ್ತಿಯ ಪತ್ನಿಪರವಾಗಿ ವಾದ ಮಾಡಿದ್ದ ವಕೀಲ್ ಗೋವಿಂದ ಅವರು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿ ನ್ಯಾಯಾಧೀಶ ರಮೇಶ ಗಾಣಿಗೇರ್ ಅವರ ಆದೇಶದಂತೆ ಬಸ್‌ನ್ನು ಜಪ್ತಿ ಮಾಡಿ ನ್ಯಾಯಾಲಕ್ಕೆ ತಂದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ವಕೀಲ್ ಗೋವಿಂದ ಅವರು ೨೦೧೮ ರಲ್ಲಿ ಸಿಂಧನೂರ ತಾಲೂಕಿನ ಬಾದಲವಾಡಕ್ಯಾಂಪಿನ ನವೀನಕುಮಾರ ಎಂಬ ವ್ಯಕ್ತಿಗೆ ಕಲಬುರ್ಗಿ ಎನ್‌ಇಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಬಸ್ಸಿನಿಂದ ಅಪಘಾತಕ್ಕಿಡಾಗಿ ಮೃತ ಹೊಂದಿದ್ದಾರೆ. ಈ ಕುರಿತು ಮೃತರ ಪತ್ನಿ ಸ್ವಪ್ನ ಪರಿಹಾರಕ್ಕೆ ನ್ಯಾಯಾಲಯ ಮೊರೆ ಹೋಗಿದ್ದು, ನಗರದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ರಮೇಶ ಗಾಣಿಗೇರ್ ಅವರು ಮೃತರಿಗೆ ರೂ.೩೩.೪೨ ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಆದರೆ ಎನ್‌ಇಕೆಆರ್‌ಎಸ್‌ಟಿ ಕಲಬುರ್ಗಿಯ ವ್ಯವಸ್ಥಾಪ ನಿರ್ದೇಶಕರು ಮೃತರ ಪತ್ನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಪರಿಣಾಮ ನ್ಯಾಯಾಧೀಶರು ಬಸ್ ಜಪ್ತಿ ಮಾಡುವಂತೆ ಸೆ.೨೫ ರಂದು ಆದೇಶಿಸಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಎನ್‌ಇಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಬಸ್‌ನ್ನು ಜಪ್ತಿ ಮಾಡಲಾಗಿದೆ ಎಂದು ವಕೀಲ ಗೋವಿಂದ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.