ಗಂಗಾವತಿ.
ಮುಖ್ಯಮಂತ್ರಿ ತೆರಳುತ್ತಿರುವ ರಸ್ತೆಯಲ್ಲಿ ಗಂಗಾವತಿ ಪೊಲೀಸರು ಜೀರೋ ಟ್ರಾಫಿಕ್ ಜಾರಿ ಮಾಡಿ ಜನರನ್ನು ಮತ್ತು ಸಾರ್ವಜನಿಕರ ವಾಹನವನ್ನು ತಡೆದು ನಿಲ್ಲಿಸಿದ್ದರು. ಆದರೆ ಈ ರಸ್ತೆಯಲ್ಲಿ ಆಗಮಿಸಿದ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಸಿಎಂ ತೆರಳುವವರೆಗೂ ಕಾಯದೇ ದಿಡೀರ್ ಪೊಲೀಸ್‌ರ ಭದ್ರತೆಯನ್ನು ಬೇಧಿಸಿ ನೋಡು ನೋಡುತ್ತಿದ್ದಂತೆ ಡಿವೈಡರ್ ಹತ್ತಿಸಿ ಸಿನಿಮೀಯ ರೀತಿಯಲ್ಲಿ ಬಲ ಬದಿಯ ಸಿಎಂ ಬರುವ ಜೀರೋ ಟ್ರಾಫಿಕ್ ರಸ್ತೆಗೆ ಸಂಚರಿಸಿರುವುದು ಆಶ್ಚರ್ಯ ಮೂಡಿಸಿದೆ. ಸಿಎಂ ತೆರಳುವವೆಗೆ ಕೆಲ ನಿಮಿಷ ಕಾಯದೇ ದಿಡೀರ್ ತೆರಳಿರುವ ವಾಹನ ಸಂಚರಿಸಿರುವ ಘಟನೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಸಕ ರೆಡ್ಡಿ ನಡೆ ಧರ್ಪವೋ ಅಥವಾ ಜನರನ್ನು ಮೆಚ್ಚಿಸುವ ಉದ್ದೇಶವೋ ಎಂಬ ಚರ್ಚೆ ನಡೆಯುತ್ತಿದೆ. ಡಿವೈಡರ್ ಹತ್ತಿಸಿ ಸಂಚಾರಿ ನಿಯಮ ಉಲ್ಲಂಘಿಸಿ ತಮ್ಮ ವಾಹನವನ್ನು ದಾಟಿಸಿಕೊಂಡು ಮುಖ್ಯಮಂತ್ರಿ ಬರುವ ವಾಹನಗಳಿಗೆ ಎದುರಾಗಿರುವ ಘಟನೆಗೆ ಜಿಲ್ಲಾ ಪೊಲೀಸ್‌ರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಗಂಗಾವತಿ ಜನರು ಕಾದು ನೋಡುತ್ತಿದ್ದಾರೆ.
ಶನಿವಾರ ರಾತ್ರಿ ನಗರದ ಕೊಪ್ಪಳ ರಸ್ತೆಯಲ್ಲಿ ಘಟನೆ ನಡೆದಿದ್ದು, ಶಾಸಕ ಜನಾರ್ಧನರೆಡ್ಡಿ ಡಿವೈರ್ ಹತ್ತಿಸಿ ಜೀರೋ ಟ್ರಾಫಿಕ್ ಉಲ್ಲಂಘಿಸಿ ಸಂಚಾರ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ರಾಯಚೂರು ಜಿಲ್ಲೆಯ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾನುವಾರ ಕತ್ತಲಾಗುತ್ತಿದ್ದಂತೆ ಬಸಾಪುರ ವಿಮಾನ್ ನಿಲ್ದಾಣಕ್ಕೆ ಗಂಗಾವತಿ ರಸ್ತೆ ಮೂಲಕ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಪೊಲೀಸರು ಮುಖ್ಯಮಂತ್ರಿ ವಾಹನ ಸಂಚರಿಸುವ ನಿಮಿತ್ಯ ನಗರದ ರಾಣಾ ಪ್ರತಾಪ್ ವೃತ್ತದಿಂದ ವಡ್ಡರಹಟ್ಟಿವರೆಗೆ ಕೆಲ ಹೊತ್ತು ರಸ್ತೆ ಸಂಚಾರ ಬಂದ್ ಮಾಡಿ ಜೀರೋ ಟ್ರಾಫೀಕ್ ಜಾರಿ ಮಾಡಿದ್ದರು. ಮುಖ್ಯಮಂತ್ರಿ ತೆರಳುವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಈ ರಸ್ತೆಗೆ ಆಗಮಿಸಿದ್ದು, ಸಾರ್ವಜನಕರ ವಾಹನದ ನಡುವೆ ಸಿಲುಕಿದ್ದರು. ಆದರೆ ಸಿಎಂ ತೆರಳುವವೆಗೂ ಕಾಯದ ರೆಡ್ಡಿ ಜೀರೋ ಟ್ರಾಫಿಕ್ ವಿಧಿಸಿದ್ದರೂ ತಮ್ಮ ವಾಹನವನ್ನು ರಸ್ತೆ ಮಧ್ಯೆ ಇರುವ ಡಿವೈಡರ್‌ನ್ನು ಅತ್ತಿಸಿಕೊಂಡು ಬಲಬದಿಯ ಸಿಎಂ ಬರುವ ರಸ್ತೆ ಮೂಲಕ ದಿಡೀರ್ ಸಂಚರಿಸಿದರು. ರೆಡ್ಡಿ ತೆರಳುತ್ತಿದ್ದಂತೆ ಅವರ ಬೆಂಬಲಿಗರ ಎರಡು ಮೂರು ವಾಹನಗಳು ರೆಡ್ಡಿ ಕಾರ್‌ನ್ನು ಹಿಂಬಾಲಿಸಿದವು. ಈ ನುಡವೆ ಕ್ಷಣಾರ್ಧದಲ್ಲಿ ಮುಖ್ಯಮಂತ್ರಿಗಳು ಇದೇ ರಸ್ತೆಗೆ ಆಗಮಿಸುತ್ತಿದ್ದಂತೆ ಮೊದಲಿಗೆ ಸಿಎಂ ಬೆಂಗಾವಲು ಶಾಸಕ ರೆಡ್ಡಿ ಕಾರ್‌ಗೆ ಎದುರಾಯಾಯಿತು. ನೋಡು ನೋಡುತ್ತಿದ್ದಂತೆ ಮುಖ್ಯಮಂತ್ರಿ ಕಾರ್ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳ ಹತ್ತಾರು ವಾಹನಗಳು ಹಿಂಬಾಲಿಸಿಕೊಂಡು ಆಗಮಿಸಿದವು. ಮುಖ್ಯಮಂತ್ರಿ ಕಾರ್‌ಗೆ ಶಾಸಕ ರೆಡ್ಡಿ ಕಾರ್ ಎದುರಾಗಿರುವ ದೃಶ್ಯವನ್ನು ಸಾರ್ವಜನಿಕರು ಕಣ್ಣಾರೆ ಕಂಡು ನಿಬ್ಬೆರಗಾದರು. ಜನರನ್ನು ನಿಯಂತ್ರಿಸಿರುವ ಪೊಲೀಸರು ಕೂಡಾ ಕ್ಷಣ ಹೊತ್ತು ಆತಂಕಕ್ಕಿಡಾದರು. ಮುಖ್ಯಮಂತ್ರಿಗಳಿಗಾಗಿ ಜೀರೋ ಟ್ರಾಫಿಕ್ ಮಾಡಿದ್ದ ರಸ್ತೆಗೆ ಶಾಸಕ ಜನಾರ್ಧನರೆಡ್ಡಿ ದಿಡೀರ್ ಎಂಟ್ರಿ ಕೊಟ್ಟಿರುವ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶಾಸಕ ರೆಡ್ಡಿ ನಡೆಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿದಂತೆ ಝೆಡ್ ಫ್ಲಸ್ ಸೇಕ್ಯೂರಿಟಿ ಹೊಂದಿರುವ ಗಣ್ಯರರು ಸಂಚರಿಸುತ್ತಿರುವ ಸಮಯದಲ್ಲಿ ನಗರ ಪ್ರದೇಶದ ಜನನೀಬಿಡ ರಸ್ತೆಯನ್ನು ಜೀರೋ ಟ್ರಾಫಿಕ್ ನಿಯಮ ಜಾರಿ ಮಾಡಿ ಕೆಲಹೊತ್ತು ಸಂಚಾರ ಸ್ಥಗಿತಗೊಳಿಸುವುದು ವಾಡಿಕೆ. ಇದು ಭಾನುವಾರ ಗಂಗಾವತಿಯಲ್ಲೂ ಸಿಎಂ ತೆರಳುತ್ತಿರುವ ಸಂದರ್ಭದಲ್ಲಿ ಪೊಲೀಸರು ಜೀರೋ ಟ್ರಾಫಿಕ್ ಜಾರಿ ಮಾಡಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಆಗಮಿಸಿದ ಶಾಸಕ ಜನಾರ್ಧನರೆಡ್ಡಿ ಸಿಎಂ ತೆರಳುವವೆಗೂ ಕಾದು ನಿಯಮ ಪಾಲನೆ ಮಾಡಬೇಕಿತ್ತು. ಆದರೆ ಶಾಸಕ ರೆಡ್ಡಿ ಸಂಚಾರ ನಿಯಮ ಉಲ್ಲಂಘಿಸಿ ಭದ್ರತೆಯಲ್ಲಿರುವ ಪೊಲೀಸರು ಮತ್ತು ಸಾರ್ವಜನಿಕರ ಎದುರಲ್ಲೇ ತಮ್ಮ ವಾಹನವನ್ನು ಡಿವೈಡರ್ ಹತ್ತಿಸಿಕೊಂಡು ಬಲಬದಿಯ ಸಿಎಂ ಎದುರಿಗೆ ಬರುವ ರಸ್ತೆಯಲ್ಲಿ ಸಂಚರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆಯೋ ಅಥವಾ ಸಿಎಂ ಸಿದ್ಧು ಮೇಲಿರುವ ಕೋಪವೋ ಎಂಬಂತೆ ಜನರಲ್ಲಿ ಬಾಸವಾಗಿತ್ತು. ಈ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬರುವ ಸಮಯದಲ್ಲಿ ಸಂಚಾರಿ ಪಿಎಸ್‌ಐ ಅವರಿಗೆ ಬೆಂಗಾಲು ವಾಹನದೊಂದಿಗೆ ದಾರಿ ಮಾಡಿಕೊಟ್ಟಿದ್ದ ಘಟನೆ ಬಾರಿ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ ಅನ್ಸಾರಿಗೆ ಬೆಂಗಾಲುವ ವಾಹನ ನೀಡಿರುವ ಪೊಲೀಸರ ನಡೆಯನ್ನು ರೆಡ್ಡಿ ಬೆಂಗಲಿಗರು ವಿರೋಧಿ ಪಿಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈಗ ಜನಾರ್ಧನರೆಡ್ಡಿ ಸಂಚಾರ ನಿಯಮ ಉಲ್ಲಂಘಿಸಿ ಜೀರೋ ಟ್ರಾಫಿಕ್ ರಸ್ತೆಯಲ್ಲಿ ಸಂಚರಿಸುವುದಕ್ಕೆ ಅನ್ಸಾರಿ ಬೆಂಬಲಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಘಟನೆಗೆ ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಬಾಕ್ಸ್:
ಘಟನೆ ಪರಿಶೀಲಿಸುತ್ತೇನೆ
ಸಿಎಂ ತೆರಳುವ ಸಂದರ್ಭದಲ್ಲಿ ಗಂಗಾವತಿ ನಗರದ ಕೊಪ್ಪಳ ರಸ್ತೆಯಲ್ಲಿ ಜೀರೋ ಟ್ರಾಫೀಕ್ ಜಾರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗಂಗಾವತಿ ಶಾಸಕರು ಆಗಮಿಸಿ ಕೆಲ ಹೊತ್ತು ರಸ್ತೆಯಲ್ಲಿ ನಿಂತಿದ್ದಾರೆ. ಅವರಿಗೂ ತುರ್ತು ಕೆಲಸ ಇದೆ ಎಂದು ಜೀರೋ ಟ್ರಾಫಿಕ್ ರಸ್ತೆ ಮೂಲಕ ತೆರಳಿದ್ದಾರೆ. ಇದು ಕಾನವೇ ಉಲ್ಲಂಘನೆಯಾಗುವುದಿಲ್ಲ. ಆದರೆ ಸಿಎಂ ಬರುವ ಮಾರ್ಗದಲ್ಲಿ ಡಿವೈಡರ್ ಅತ್ತಿಸಿಕೊಂಡು ಶಾಸಕರು ತೆರಳಿರುವುದು ಸರಿಯಲ್ಲ. ಈ ಕುರಿತು ಪರಿಶೀಲನೆ ಮಾಡಲಾಗುವುದು. ಎನಾಗಿದೆ ಎಂಬ ಕುರಿತು ವಿಚಾರಣೆ ನಡೆಸುತ್ತೇನೆ. ಜೀರೋ ಟ್ರಾಫಿಕ್ ನಿಯಮದಲ್ಲಿ ಎಲ್ಲರಿಗೂ ಒಂದೇ ನಿಯಮವಿರುತ್ತದೆ.
ಡಾ|| ರಾಮ ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ.