ಗಂಗಾವತಿ.
ಕಳೆದ ದಿನ ಮುಖ್ಯಮಂತ್ರಿ ಹೋಗುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ್ದ ಶಾಸಕ ಗಾಲಿ ಜನಾರ್ಧನರೆಡ್ಡಿ ಇದ್ದ ವಾಹನ ಜೀರೋ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಡಿವೈಡರ್ ಮೇಲೆ ಹತ್ತಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ದುಡುಕಿನಿಂದ ರಾಂಗ್ ಡ್ರೈವಿಂಗ್ ಮಾಡಿಕೊಂಡು ಕಾನ್‌ವೇಗೆ ವಿರುದ್ಧವಾಗಿ ಹೋಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಭದ್ರತೆಗೆ ನಿಯೋಜಿಸಿದ್ದ ಎಎಸ್‌ಐ ಹಮೀದ್ ಹುಸೇನ್ ನೀಡಿದ ದೂರಿನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ಸಂಜೆ ಘಟನೆ ನಡೆದಿದ್ದು, ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಸಾರ್ವಜನಿಕರ ಮಧ್ಯ ದೊಡ್ಡ ಸುದ್ದಿಯಾಗಿತ್ತು. ಮತ್ತು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಘಟನೆಯನ್ನು ಖಂಡಿಸಿ ಜನಾರ್ಧನರೆಡ್ಡಿ ಅತಿರೇಕದ ವರ್ತನೆ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ನೀಡಿದ್ದ ಹೇಳಿಕೆ ಬೆನ್ನಲ್ಲೆ ಪ್ರಕರಣ ದಾಖಲಾಗಿದೆ. ದಿನಾಂಕ 5-10-24 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾನವಿ ಯಿಂದ ವೇದಿಕೆ ಕಾರ್ಯಕ್ರಮ ಮುಗಿಸಿ ಸಿಂಧನೂರ ಮತ್ತು ಕಾರಟಗಿ ಮಾರ್ಗವಾಗಿ ಗಂಗಾವತಿ ನಗರದ ಮೂಲಕ ಕೊಪ್ಪಳ ರಸ್ತೆಯ ಜಿಂದಾಲ್ ಏರಪೋರ್ಟ ಕಡೆಗೆ ಹೋಗುತ್ತಿರುವುದರಿಂದ ಮುಖ್ಯಮಂತ್ರಿಗಳ ಕಾನ್ವೇ ಸಮಯದಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗದಂತೆ ನೋಡಿಕೊಳ್ಳುವ ಕುರಿತು ನನಗೆ ಸಿಬಿ.ಸರ್ಕಲ್ ಹತ್ತಿರ ಸಂಚಾರಿ ನಿಯಂತ್ರಣ ಕುರಿತು | ನಿಯೋಜಿಸಿಲಾಗಿತ್ತು. ಅದರಂತೆ ನಾನು ಸದರಿ ಸ್ಥಳದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊಪ್ಪಳ ಕನಕಗಿರಿ ರಸ್ತೆ ಮತ್ತು ಸಿಟಿ ಒಳಗಿನಿಂದ ಬರುವ ವಾಹನಗಳನ್ನು ಅಲ್ಲಿಯೇ ತಡೆದು ನಿಲ್ಲಿಸಿದ್ದೇನು. ಆ ಸಮಯದಲ್ಲಿ ಗಂಗಾವತಿಯ ಹಾಲಿ ಶಾಸಕ ಜನಾರ್ಧನರೆಡ್ಡಿರವರ ಕಪ್ಪು ಬಣ್ಣದ ನಂ.ಕ.ವಿ-01/ಎಮ್.ಎಕ್ಸ್-9990 ರೇಂಜ್ ರೋವರ್ ವಾಹನ ಅಲ್ಲಿ ಸ್ವಲ್ಪ ಸಮಯ ನಿಂತು ಕಾನವೇ ಬರುವ ಸರಿಯಾದ ಸಮಯಕ್ಕೆ ಅದರ ಚಾಲಕನು ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿಯ ಡಿವೈಡನ್ನು ಹತ್ತಿಸಿ ಅಪಾಯಕಾರಿ ರೀತಿಯಲ್ಲಿ ದುಡುಕಿನಿಂದ ಮತ್ತು ರಾಂಗ್ ಸೈಡನಿಂದ ಕಾನವೇಗ ವಿರುದ್ಧವಾಗಿ ಅಲ್ಲಿಂದ ಎಡಗಡೆ ಮುಖಾಂತರವಾಗಿ ಹೋಗಿರುತ್ತಾರೆ. ಸದರಿ ವಾಹನವನ್ನು ಬಿಳಿ ಬಣ್ಣದ ಪಾರ್ಚನರ್ ಕಾರ್ ನಂ. ಕೆ.ಎ.- ೦೨/೧೪೧೪ ಮತ್ತು ಮಹೇಂದ್ರ ಧಾರ್ ವಾಹನ ನಂ. ಕೆ.ಎ-31/ಎನ್-9688 ವಾಹನಗಳು ಕೂಡಾ ಹೋಗಿರುತ್ತವೆ.
ಝೀರೋ ಟ್ರಾಫಿಕ್ ಮಾಡಿರುವ ವಿಷಯ ಗೊತ್ತಿದ್ದರೂ ಸಹ ಈ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ಡಿವೈಡರ್ ಮೇಲೆ ಹತ್ತಿಸಿ ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಮತ್ತು ರಾಂಗ್ ಸೈಡನಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಸದರಿ ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ 47/2021 ಕಲಂ 281 ಬಿಎನ್‌ಎಸ್. 2023 ಮತ್ತು 184 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!