ಗಂಗಾವತಿ.
ಜೀರೋ ಟ್ರಾಫೀಕ್ ಉಲ್ಲಂಘಿಸಿ ಡಿವೈಎರ್ ಹತ್ತಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವಾಗ ಕಾನ್ವೇ ವಿರುದ್ದವಾಗಿ ವಾಹನ ಚಲಾಯಿಸಿಕೊಂಡು ಹೊದ ಪ್ರಕರಣಕ್ಕೆ ಸಂಬಂಧುಸಿದಂತೆ ಶಾಸಕ ಜನಾರ್ಧನರೆಡ್ಡಿ ಅವರ ರೆಂಜ್ ರೋವರ್ ಸೇರಿ ಇನ್ನೆರಡು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಗರ ಸಂಚಾರಿ ಠಾಣೆ ಪಿಎಸ್ ಐ ಇಸ್ಮಾಯಿಲ್ ಸಾಬ್ ಮಂಗಳವಾರ ಜಪ್ತಿ ಮಾಡಿ ಮೂರು ವಾಹನಗಳನ್ನು ಠಾಣೆಗೆ ತಂದು ತನಿಖೆ ನಡೆಸುತ್ತಿದ್ದಾರೆ. ಕಳೆದ ಅ.5 ರಂದು ಸಂಜೆ ಸಿಎಂ ಸಿದ್ದರಾಮಯ್ಯ ತೆರಳುವಾಗ ಶಾಸಕ ಜನಾರ್ಧನರೆಡ್ಡಿ ಇದ್ದ ವಾಹನ ಮತ್ತು ಅವರ ಬೆಂಬಲಿಗರ ಎರಡು ಕಾರ್ ಗಳು ಜೀರೋ ಟ್ರಾಫಿಕ್ ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಬರುವಾಗ ಎದುರಿಗೆ ಸಂಚರಿಸಿದ್ದ ಘಟನೆಗೆ ಮೂರು ವಾಹನಗಳ ಚಾಲಕರ ವಿರುದ್ದ ಭಾನುವಾರ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೆಡ್ಡಿ ಮತ್ತು ಬೆಂಬಲಿಗರ ಎರಡುವಾಹನಗಳನ್ನು ಜಪ್ತಿ ಮಾಡಿ ವಿಚಾರಣೆ ಕೈಗೊಂಡಿದ್ದಾರೆ.