ಗಂಗಾವತಿ.
ಶಾಸಕ ಜನಾರ್ಧನರೆಡ್ಡಿ ಆದ್ಯಕ್ಷರಾಗಿರುವ ಆರಾಧನಾ ಸಮಿತಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರನ್ನು ಸರಕಾರ ಸದಸ್ಯರನ್ನಾಗಿ ನೇಮಕ ಮಾಡಿದೆ.
ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಹೇಮಂತರಾಜ ಇತ್ತೀಚಿಗೆ ಮಾಡಿರುವ ಆದೇಶದಲ್ಲಿ ಶಾಸಕ ಜನಾರ್ಧನರೆಡ್ಡಿ ಆದ್ಯಕ್ಷರಾಗಿದ್ದು ಗಂಗಾವತಿ ತಾಲೂಕಿನ ಆರಾಧನಾ ಸಮಿತಿಗೆ ಇಕ್ಬಾಲ್ ಅನ್ಸಾರಿ ಬೆಂಬಲಿಗ ಕಾಂಗ್ರೆಸ್ ಮುಖಂಡ ವಿಶ್ವನಾಥ ಮಾಲೀ ಪಾಟೀಲ್ ಕೆಸರಹಟ್ಟಿ,ಆರಾಳ ಗ್ರಾಮದ ಬಸವ, ಗಂಗಾವತಿ ನಗರದ 2ನೇ ವಾರ್ಡಿನ ಜ್ಯೋತಿಸಿಂಗ್, ರವಿ ನಾಯಕ ಅವರನ್ನು ಮತ್ತು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಭಿಯಂತರರನ್ನು ಸದಸ್ಯರನ್ನಾಗಿ ಹಾಗೂ ಗಂಗಾವತಿ ತಹಶೀಲ್ದಾರ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಹಿಡಿತ ಹೊಂದಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗಂಗಾವತಿ ಕ್ಷೇತ್ರದ ಎಲ್ಲಾ ನಾಮ ನಿರ್ದೇಶನ ಅಧಿಕಾರವನ್ನು ತಮ್ಮ ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಕಾಂಗ್ರಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ ನಾಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಹೆಚ್ ಆರ್ ಶ್ರೀನಾಥ ಅವರನ್ನು ಸಿದ್ದು ಸರಕಾರ ಸಂಪೂರ್ಣ ನಿರ್ಲಕ್ಷ ಮಾಡಿದ್ದು ಇವರ ಬೆಂಬಲಿಗ ಕಾರ್ಯಕರ್ತರನ್ನು ಕಾಂಗ್ರೆಸ್ ಹೈಕಮಾಂಡ್ ದೂರ ಇಟ್ಟಿರುವುದು ನಾಮ ನಿರ್ದೇಶನ ನೇಮಕಾತಿಯಿಂದ ಗೊತ್ತಾಗುತ್ತಿದೆ. ಇಕ್ಬಾಲ್ ಅನ್ಸಾರಿ ಗಂಗಾವತಿ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಅನ್ಸಾರಿ ಬೆಂಬಲಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರಲ್ಲದೆ, ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಇಕ್ಬಾಲ್ ಅನ್ಸಾರಿ ಮಾತೆ ಅಂತಿಮ ಎಂದು ಸಂಭ್ರಮಿಸುತ್ತಿದ್ದಾರೆ.