ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ತಾಪಂ ಇಓ ಲಕ್ಷ್ಮೀದೇವಿ, ಪಿಡಿಓ ಸೇರಿ ಗ್ರಾಮ ಪಂಚಾಯತ್ ಅಧ್ಯಕ್ಷರ ಸಾಂವಿಧಾನಿಕ ಹುದ್ದೆಗೆ ಅಪಚಾರ ಮಾಡಿದ್ದಾರೆ. ಮತ್ತು ರಾಜಮನೆತನದ ರಾಣಿ ರತ್ನಾ ರಾಯಲು ಎಂಬ ಮಹಿಳೆಯನ್ನು ಗ್ರಾಪಂ ಅಧ್ಯಕ್ಷರ ಖುರ್ಚಿಯಲ್ಲಿ ಕೂಡಿಸಿಕೊಂಡು ಸಭೆ ನಡೆಸಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿಸಿದ್ದಾರೆ ಎಂದು ಎಂದು ಗ್ರಾಪಂ ಅಧ್ಯಕ್ಷೆ ಕೆ.ಮಹಾದೇವಿ ತಿಮ್ಮಪ್ಪ ಬಾಳೇಕಾಯಿ ನೇರವಾಗಿ ಆರೋಪಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ಅವರು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ್, ತಾಪಂ ಇಓ ಲಕ್ಷ್ಮೀದೇವಿ ಮತ್ತು ಪಿಡಿಓ ಅವರ ನಡೆಯನ್ನು ಖಂಡಿಸಿ ಹಾಗೂ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರೀಯಾಂಕ್ ಖರ್ಗೆ ಮತ್ತು ಆಯುಕ್ತರಿಗೆ ದೂರು ನೀಡಿದ್ದಾರೆ. ಕಳೆದ ಅ.15 ರಂದು ಆನೆಗೊಂದಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಾಮಾನ್ಯ ನಡೆಸಲಾಗುತ್ತಿತ್ತು. ಸಭೆಯ ಮಧ್ಯದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಿಶ್ರಾಂತಿಗಾಗಿ ಹೊರಗೆ ಹೋಗಿದ್ದರು. ಈ ಸಮಯದಲ್ಲಿ ಜಿಪಂ ಸಿಇಓ ಮತ್ತು ತಾಪಂ ಇಓ ಅವರು ರಾಜಮನೆತನದ ರಾಣಿ ರತ್ನಾ ರಾಯಲು ಅವರನ್ನು ಕರೆದುಕೊಂಡು ಬಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಸನದಲ್ಲಿ ಕುಳಿತುಕೊಂಡು ಸಭೆ ನಡೆಸಿದ್ದಾರೆ. ಸಾಮಾನ್ಯ ಸಭೆ ನಡೆಯುತ್ತಿರುವ ವಿಷಯ ಗೊತ್ತಿದ್ದರೂ ಸಹ ಅಧಿಕಾರಿಗಳು ಗ್ರಾಪಂ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಬರುವವರೆಗೂ ಕಾಯದೇ ಸಭೆ ನಡೆಸಿದ್ದಾರೆ. ಮತ್ತು ಅಧ್ಯಕ್ಷ ಉಪಾಧ್ಯಕ್ಷರಿಗೆ ಮಿಸಲಾಗಿದ್ದ ಆಸನದಲ್ಲಿ ಕುಳಿತುಕೊಂಡು ಸಾಂವಿಧಾನಿಕ ಹುದ್ದೆಗೆ ಅಪಚಾರ ಮಾಡಿ ಪ್ರಜಾಪ್ರಭುತ್ವದ ಆಶಯವನ್ನು ಗಾಳಿಗೆ ತೂರಿಸಿದ್ದಾರೆ. ಸಂವಿಧಾನ ಪಿಠಿಕೆಯನ್ನು ನಿರಂತರ ಓದುವ ಅಧಿಕಾರಿಗಳು ಸಾಂವಿಧಾನಿಕ ಹುದ್ದೆಯಾಗಿದ್ದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಅವಮಾನ ಮಾಡಿದ್ದಾರೆ. ಮತ್ತು ಗ್ರಾಪಂ ಸಭೆಯಲ್ಲಿ ಖಾಸಗಿ ವ್ಯಕ್ತಿಗಳನ್ನು ಕರೆದುಕೊಂಡು ಉಪಾಧ್ಯಕ್ಷರ ಆಸನದಲ್ಲಿ ಕೂಡಿಸಿಕೊಂಡು ಸಭೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ನಾನು ಮತ್ತು ಗ್ರಾಪಂ ಆಡಳಿತ ಮಂಡಳಿ ಸಂಪೂರ್ಣ ಖಂಡಿಸುತ್ತಲ್ಲದೇ ತಕ್ಷಣ ಕೊಪ್ಪಳ ಜಿಪಂ ಸಿಇಓ, ತಾಪಂ ಇಓ ಮತ್ತು ಗ್ರಾಪಂ ಪಿಡಿಓ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಅಧ್ಯಕ್ಷೆ ಮಹಾದೇವಿ ಬಾಳೆಕಾಯಿ ಮನವಿ ಮಾಡಿದ್ದಾರೆ. ಮತ್ತು ರಾಜಮನೆತನದ ಕೆಲವು ವ್ಯಕ್ತಿಗಳು ಆನೆಗುಂದಿ ಗ್ರಾಮ ಪಂಚಾಯತಿಗೆ ಜಾಗ ಬಿಟ್ಟುಕೊಟ್ಟಿರುವ ನೆಪ ಮಾಡಿಕೊಂಡು ಪಂಚಾಯತಿಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು ಮತ್ತು ಆಡಳಿತದಲ್ಲಿ ಮೂಗು ತೂರಿಸುತ್ತಾ, ಗ್ರಾಪಂ ಪಂಚಾಯತ್‌ನ ಆಡಳಿತವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಜಿಪಂ ಸಿಇಓ, ತಾಪಂ ಇಓ ಮತ್ತು ಗ್ರಾಪಂ ಪಿಡಿಓಗಳು ತೆರೆ ಮರೆಯಲ್ಲಿ ಅವರಿಗೆ ಬೆಂಬಲಿಸುತ್ತಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಇದು ಸ್ಥಳೀಯ ಆಡಳಿತದ ನಿಯಮ ಉಲ್ಲಂಘನೆಯಾಗಿದೆ ಎಂದು ಅಧ್ಯಕ್ಷೆ ಮಹಾದೇವಿ ಮತ್ತು ಅವರ ಪತಿ ಮಾಜಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಬಾಳೇಕಾಯಿ ಆರೋಪಿಸಿದ್ದು, ಆನೆಗೊಂದಿ ಗ್ರಾಮ ಪಂಚಾಯತ್‌ನಲ್ಲಿ ಖಾಸಗಿ ವ್ಯಕ್ತಿಗಳು ಮೂಗು ತೂರಿಸದಂತೆ ನಿಗಾವಹಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಬಾಕ್ಸ್:
ಸಭೆಯ ನಂತರ ಸಿಇಓ ಆಸನದಲ್ಲಿ ಕೂಳಿತಿದ್ದಾರೆ
ಆನೆಗೊಂದಿ ಗ್ರಾಮ ಪಂಚಾಯತ್‌ನಲ್ಲಿ ಸಾಮಾನ್ಯ ಸಭೆಯ ಮುಕ್ತಾಯವಾಗುತ್ತಿದ್ದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತೆರಳಿದ್ದಾರೆ. ನಂತರ ಜಿಪಂ ಸಿಇಓ ಮತ್ತು ತಾಪಂ ಇಓ ಅವರು ಪಂಚಾಯತ್‌ಗೆ ಆಗಮಿಸಿ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದಿರುವ ಸಮಯದಲ್ಲಿ ಅವರ ಆಸನದಲ್ಲಿ ಅಧಿಕಾರಿಗಳು ಕೂಳಿತು ಘನ್ಯ ತ್ಯಾಜ್ಯ ವಿಷಯದ ಕುರಿತು ಗ್ರಾಪಂ ಸಿಬ್ಬಂದಿ ಮತ್ತು ಕೆಲವು ಗ್ರಾಮದ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಘನ ತ್ಯಾಜ್ಯ ವಿಷಯದ ಸಭೆಯಾಗಿದ್ದರಿಂದ ರಾಜ ಮನೆತನದ ರಾಣಿ ರತ್ನಾ ಅವರು ಈ ಸಭೆಗೆ ಆಗಮಿಸಿದ್ದರು. ಸಾಮಾನ್ಯ ಸಭೆಯುವ ಸಮಯದಲ್ಲಿ ಅನ್ಯ ವ್ಯಕ್ತಿಗಳನ್ನು ಅಹ್ವಾನಿಸಿಲ್ಲ. ಗ್ರಾಮದ ಹಿತ ದೃಷ್ಟಿಯಿಂದ ನಡೆಯುತ್ತಿರುವ ಸಭೆಯಲ್ಲಿ ಖಾಸಗಿ ವ್ಯಕ್ತಿಗಳು ಆಗಮಿಸಿದ್ದರು ಎಂದು ಪಿಡಿಓ ಕೃಷ್ಣಾ ನಾಯಕ ಅಧ್ಯಕ್ಷೆ ಮಹಾದೇವಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.