ಗಂಗಾವತಿ.
ನಗರದ ಇಸ್ಲಾಂಪುರ ಮಸೀದಿ ಹಿಂದುಕಡೆ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಗೆ ಮೆರೆಗೆ ಪೊಲೀಸರು ದಾಳಿ ಮಾಡಿ ೨೫ ಕೆಜಿ ಮಾಂಸ ಮತ್ತು ಮಾಂಸ ಕತ್ತರಿಸುವ ಚೂರಿ, ತೂಕದ ಯಂತ್ರ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅ.೧೫ ರಂದು ರಾತ್ರಿ ಪಿಎಸ್‌ಐ ನಾಗರಾಜ ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ಮಾಂಸ ಮಾರಾಟ ಮಾಡುವ ಪರವಾನಿಗೆ ಹೊಂದಿರುವ ಚಾಂದ್‌ಪಾಷಾ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ದೂರಿನ ಮೆರೆಗೆ ನಗರ ಠಾಣೆ ಪಿಎಸ್‌ಐ ನಾಗರಾಜ ಅವರು ಅ.೧೫ ರಂದು ಮಂಗಳವಾರ ರಾತ್ರಿ ೮ ಗಂಟೆ ಸುಮಾರಿಗೆ ನಗರದ ಇಸ್ಲಾಂಪುರ ಮಸೀದಿ ಹಿಂದುಗಡೆ ದಾಳಿ ಮಾಡಿ ಸಂಗ್ರಹ ಸಂಗ್ರಹ ಮಾಡಿರುವುದನ್ನು ಪತ್ತೆ ಹೆಚ್ಚಿದ್ದಾರೆ. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮತ್ತು ಸುಭಾಷ ಅವರೊಂದಿಗೆ ತೆರಳಿದ ಪಿಎಸ್‌ಐ ನಾಗರಾಜ ಅವರು ಇಸ್ಲಾಂಪುರ ಮಸೀದಿ ಹಿಂದುಗಡೆಯ ಕಾಂಪ್ಲೇಕ್ಸ್‌ನ ಕೋಲ್ಡ್ ರೇಪರೇಜಟರ್‌ನಲ್ಲಿ ೨೫ ಕೆಜಿ ಮಾಂಸ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಮಾಂಸ ಪತ್ತೆಯಾಗಿದೆ. ತಕ್ಷಣ ತಾಲೂಕು ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪರಿಶೀಲನೆ ಮಾಡಿದ್ದು, ಕೋಲ್ಡ್ ಸ್ಟೋರೇಜ್‌ನಲ್ಲಿರುವ ಮಾಂಸದ ಮೇಲ್ನೋಟಕ್ಕೆ ದನದ ಮಾಂಸವೆಂದು ವೈದ್ಯರು ಅಂದಾಜಿಸಿದ್ದಾರೆ. ನಂತರ ವೈದ್ಯರ ಸಲಹೆ ಮೆರೆಗೆ ೨೫ಕೆಜಿ ಮಾಂಸ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡು ಚಾಂದ್ ಪಾಷಾ ಎಂಬ ವ್ಯಕ್ತಿಯ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ೨೦೨೦ ಮತ್ತು ಕಲಂ ೧೨(೧) ಮತ್ತು ೧೨(೨)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪತ್ತೆಯಾಗಿರುವ ಮಾಂಸವು ಗೋ ಮಾಂಸವಾಗಿದ್ದು, ನಗರದಲ್ಲಿ ಗೋ ಮಾಂಸವನ್ನು ಅವ್ಯಾಹತವಾಗಿ ಮತ್ತು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಮತ್ತೆ ಪ್ರಾರಂಭಿಸಲಾಗಿದೆ. ಈ ಕುರಿತು ಪೊಲೀಸರು ಈ ರೀತಿ ಅಕ್ರಮವಾಗಿ ಮಾಂಸ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದರೂ ನಗರದ ಕೆಲವು ಪ್ರದೇಶಗಳಲ್ಲಿ ಗೋ ಮಾಂಸ ಮಾರಾಟ ದಂಧೆ ನಡೆಯುತ್ತಿದೆ. ನಗರಸಭೆ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿವಿಧ ಹಿಂದುಪರ ಸಂಘಟನೆ ಕಾರ್ಯಕರ್ತರು ಅಗ್ರಹಿಸಿದ್ದಾರೆ.