ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ದೇವಸ್ಥಾನದಲ್ಲಿನ ಹುಂಡಿ ಹಣ ಎಣಿಕೆ ಮಾಡಿದ್ದು, 58 ದಿನಗಳಲ್ಲಿ ರೂ. 33,79,910 ಹಣ ಮತ್ತು ೪ ವಿದೇಶಿ ನ್ಯಾಣ್ಯಗಳು ಸಂಗ್ರಹವಾಗಿದೆ.
ಗುರುವಾರ ದೇವಸ್ಥಾನದಲ್ಲಿ ಹಣ ಎಣಿಕೆ ಮಾಡಿರುವ ಮಾಹಿತಿ ನೀಡಲಾಗಿದೆ. ಕೊಪ್ಪಳ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಕಾರ್ಯ ನಿರ್ವಾಹಣಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಆದೇಶದಂತೆ ಮತ್ತು ತಹಶೀಲ್ದಾರ ನಿರ್ದೇಶದಂತೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದೇವಸ್ಥಾನ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಣ ಎಣಿಕೆ ಮಾಡಿದ್ದಾರೆ. ಕಳೆದ ಆಗಷ್ಟ 27 ರಿಂದ ಅ.24ರವರೆಗೆ ಒಟ್ಟು 58 ದಿನಗಳ ಅವಧಿಯಲ್ಲಿ ಒಟ್ಟು ರೂ.33,79,910 ಹಣ ಮತ್ತು 2 ಯುಎಇ ದೇಶದ ಮತ್ತು ಬ್ರಿಜಿಲ್, ಯುಎಸ್‌ಎ ದೇಶದ ತಲಾ 1 ವಿದೇಶಿ ಕರೇನ್ಸಿ ಕೂಡಾ ಹುಂದಿಯಲ್ಲಿ ಕಾಣಿಕೆಯಾಗಿ ಭಕ್ತರು ಸಮರ್ಪಿಸಿರುವುದು ವಿಶೇಷವಾಗಿದೆ. ಕಳೆದ ಆಗಷ್ಟ 27 ರಂದು ಎಣಿಕೆ ಮಾಡಿದ ಸಂದರ್ಭದಲ್ಲಿ ರೂ.36,96,983ಸಂಗ್ರಹವಾಗಿತ್ತು.
ಹಣ ಎಣಿಕೆ ಸಂದರ್ಭದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರಾದ ಕೃಷ್ಣವೇಣಿ, ರವಿಕುಮಾರ್ ನಾಯಕವಾಡಿ, ಸುಹಸ್, ಕಂದಾಯ ನಿರೀಕ್ಷಕರಾದ ಹಾಲೇಶ ಗುಂಡಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ, ಅನ್ನಪೂರ್ಣ, ಆಹಾರ ನಿರೀಕ್ಷಕ ಶೇಖರಪ್ಪ, ಗಾಯತ್ರಿ, ಶ್ರೀರಾಮ ಜೋಶಿ, ಸುಧಾ, ನಾಗವೇಣಿ, ಪೂಜಾ, ರಾಜು ಭಜಂತ್ರಿ, ಮಂಜುನಾಥ ದುಮ್ಮಾಡಿ, ವೀರಯ್ಯ, ರಾಘವೇಂದ್ರ, ಸಾಣಾಪುರ ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಧರ್, ಸುನಿಲ್, ಸತೀಶ್, ಪೊಲೀಸ್ ಮಂಜುನಾಥ್ ಪ್ರವಾಸಿ ಮಿತ್ರ ಹನುಮಂತಪ್ಪ, ದೇವಸ್ಥಾನ ಸಿಬ್ಬಂದಿ ವೆಂಕಟೇಶ ಮತ್ತಿತರು ಇದ್ದರು.