ಗಂಗಾವತಿ.
ಅಪ್ರಾಪ್ತ ಬಾಲಕನೊರ್ವ ದ್ವೀಚಕ್ರ ವಾಹನ ಚಲಾಯಿಸಿರುವ ಪ್ರಕರಣದಲ್ಲಿ ಗಂಗಾವತಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಬೈಕ್ ಮಾಲೀಕನಿಗೆ ರೂ.25 ಸಾವಿರ ದಂಡ ವಿಧಿಸಿದೆ.
ಗುರುವಾರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಆದೇಶ ಮಾಡಿದ್ದಾರೆ. ಗಂಗಾವತಿ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಂಪಾನಗರದಲ್ಲಿ ಗಸ್ತಿನಲ್ಲಿದ್ದ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡುತ್ತಿರುವದನ್ನು ಪರಿಶೀಲಸಿ ಡಿವೈಎಸ್ ಪಿ ಮತ್ತು ನಗರ ಠಾಣೆ ಪಿಐ ಅವರ ನಿರ್ದೇಶನದಂತೆ ಮಾ.23 ರಂದು ಬೈಕ್ ಮಾಲೀಕನ ವಿರುದ್ದ ಕೆಸ್ ದಾಖಲಿಸಿ ಕ್ರಮ ಕೈಗೊಂಡಿದ್ದರು. ಈ ಪ್ರಕರಣ ಗಂಗಾವತಿ ಜೆಎಂಎಪ್ ಸಿ ಕೋರ್ಟ್ ನಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶರು ಸದರಿ ಬೈಕ್ ಮಾಲೀಕನಿಗೆ 25,000/- ದಂಡ ವಿಧಿಸಿದ್ದಾರೆ ಎಂದು ನಗರ ಠಾಣೆ ಪಿಐ ಪ್ರಕಾಶ ಮಾಳಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಿಂದ ಬೈಕ್ ಮಾಲೀಕರು ಅಪ್ರಾಪ್ತ ಬಾಲಕರಿಗೆ ವಾಹನ ಚಲಾಯಿಸಲು ಅವಕಾಶ ನೀಡದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.