ಗಂಗಾವತಿ.
ರಸ್ತೆಯಲ್ಲಿ ಹೊಗುತ್ತಿರುವಾಗ ಏಕಾಕಿ ವಿದ್ಯುತ್ ಕಂಬಕ್ಕೆ ಹಾಕಿದ್ದ ತಂತಿ ಬಿದ್ದು ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ನಿವಾಸಿ ಎಸ್ ಜಿವಿಆರ್ ಶಾಲೆಯ ಶಿಕ್ಷಕಿ ಹರೀಥಾ ಶ್ರೀನಿವಾಸ ಸಾವಪ್ಪಿರುವ ಘಟನೆಗೆ ಸಂಬಂಧಿಸದಂತೆ ಜೆಸ್ಕಾಂ ಎಇಇ, ಜೆಇ, ಲೈನ್ ಮನ್ ಮತ್ತು ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ಶಿಕ್ಷಕಿ ಪತಿ ಶ್ರೀನಿವಾಸ ನೀಡಿರುವ ದೂರಿನನ್ವಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ 36 ವರ್ಷದ ಟಿ.ಹರಿಥ ಗಂಡ ಟಿ ಶ್ರೀನಿವಾಸ ವಿದ್ಯಾನಗರದ ಎಸ್.ಜಿ.ವಿ.ಆರ್ ಸ್ಕೂಲ್ ದಲ್ಲಿ ಶಿಕ್ಷಕಿಯಾಗಿದ್ದು ಎಂದಿನಂತೆ ಮಾ.3 ರಂದು ಬೆಳಿಗ್ಗೆ 8-20 ಗಂಟೆಯ ಸುಮಾರಿಗೆ ತಮ್ಮ ಮಾವನವರಾದ ಟಿ. ಪೂರ್ಣಚಂದ್ರ ರವರೊಂದಿಗೆ ಹೋಂಡಾ ಯಾಕ್ಷಿವಾ ಸ್ಕೂಟರ್ ಮೇಲೆ ಮನೆಯಿಂದ ವಿದ್ಯಾನಗರಕ್ಕೆ ಹೋಗುತ್ತಿದ್ದಾಗ ಜಂಗಮಕಲ್ಲೂಡಿ ಗ್ರಾಮದ ಕಲ್ಗುಡಿ-ಹೊಸಕೇರಿ ರಸ್ತೆಯ ಹೊಸಕೇರಿ ಕ್ರಾಸ್ ಹತ್ತಿರ ರಸ್ತೆಯ ಮೇಲ್ಬಾಗದಲ್ಲಿ ಜೆಸ್ಕಾಂ ಇಲಾಖೆಯಿಂದ ಹಾಕಿರುವ ಸಾರ್ವಜನಿಕ ವಿದ್ಯುತ್ ಕಂಬದಿಂದ ವೈಯರ್ ಏಕಾ ಏಕಿ ಕಟ್ ಆಗಿ ಸ್ಕೂಟರ್ ಮೇಲೆ ಹೋಗುತ್ತಿದ್ದ ಹರಿತಾ ಇವರ ಮೇಲೆ ಬಿದ್ದು ವಿದ್ಯುತ್ ಶಾಖ್ ಆಗಿ ಹರಿಥಾ ರವರ ಎಡಗೈಗೆ ವಿದ್ಯುತ್ ವೈಯರ್ ಅಂಟಿಕೊಂಡು ಎಡಗೈ ಅಂಗೈಗೆ ಸುಟ್ಟಂತೆ ಗಾಯಗಳಾಗಿದ್ದು, ಪೂರ್ಣಚಂದ್ರ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದಾಗ ಹರಿಥಾ ಮೃತಪಟ್ಟಿರುವುದಾಗಿ ತಿಳಿಸಿದರು. ಜಂಗಮರ ಕಲ್ಲುಡಿ ಗ್ರಾಮದ ಕಲ್ಲುಡಿ-ಹೊಸಕೇರಿ ರಸ್ತೆಯ ಮೇಲೆ ಅಡ್ಡಲಾಗಿ ಜೆಸ್ಕಾಂ ಇಲಾಖೆಯವರು ಹಾಕಿರುವ ವಿದ್ಯುತ್ ವೈಯರ್ ಗಳನ್ನು ಜೆಸ್ಕಾಂ ಇಲಾಖೆಯವರು ಕಾಲ ಕಾಲಕ್ಕೆ ಚೆಕ್ ಮಾಡಿ ಸರಿಯಾಗಿ ನಿರ್ವಹಣೆ ಮಾಡದೇ ತೀವ್ರ ನಿರ್ಲಕ್ಷ್ಯತೆ ವಹಿಸಿದ್ದರಿಂದ ಘಟನೆಗೆ ಪ್ರಮುಖ ಕಾರಣವಾಗಿದೆ. ತನ್ನ ಪತ್ನಿ ಹರಿಥಾ ಸಾವಿಗೆ ಜಂಗಮರ ಕಲ್ಲೂಡಿ ಗ್ರಾಮಕ್ಕೆ ಸಂಬಂದಿಸಿದ ಜೆಸ್ಕಾಂ ಲೈನ್ ಮನ್, ಜ್ಯೂನಿಯರ್ ಇಂಜಿನಿಯರ, ಎ.ಇ.ಇ ಜೆಸ್ಕಾಂ ಮತ್ತು ಸಂಬಂದಪಟ್ಟ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಲು ಕೊರಿರುವ ಪ್ರಯುಕ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
