ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿಯಲ್ಲಿ ಎ.12 ರಂದು ಹನುಮ ಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಯಿಂದ ಸಹಸ್ರಾರು ಶಂಖ್ಯೆಯಲ್ಲಿ ಹನುಮಮಾಲಾಧಾರಿಗಳು ಇರುಮುಡಿಯೊಂದಿಗೆ ಮತ್ತು ಸಾವಿರಾರು ಭಕ್ತರು ಬರಲಿದ್ದಾರೆ. ಆದರೆ ದೇವಸ್ಥಾನ ನಿರ್ವಹಣೆ ಜವಬ್ದಾರಿವಹಿಸಿಕೊಂಡಿರುವ ಅಧಿಕಾರಿಗಳು, ತಹಶಿಲ್ದಾರರು ಮತ್ತು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷವಹಿಸಿದೆ ಎಂದು ಖಂಡಿಸಿರುವ ಕರವೇ ಜಿಲ್ಲಾಧ್ಯಕ್ಷ ಪಂಪಣ ನಾಯಕ ಭಕ್ತರಿಗೆ ಸ್ನಾನಗಟ್ಟ, ಕುಡಿಯುವ ನೀರು, ಪ್ರಸಾದ, ವಸತಿ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲ ಸೌಲಭ್ಯ ತಕ್ಷಣ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ನೀಡಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಜನಾದ್ರಿಯಲ್ಲಿ ಪ್ರತಿವರ್ಷ ಹನುಮದ್ ವ್ರತ ಮತ್ತು ಹನುಮ ಜಯಂತಿ ಸಂದರ್ಭದಲ್ಲಿ ರಾಜ್ಯಾದಾದ್ಯಂತ ಭಕ್ತರು ಮಾಲೆ ಧರಿಸಿ ವಿಸರ್ಜನೆಗೆ ಅಂಜನಾದ್ರುಗೆ ಬರುತ್ತಾರೆ. ಡುಸೆಂಬರ್ ನಲ್ಲಿ ನಡೆದ ಮಾಲೆ ವಿಸರ್ಜನೆಗೆ ಒಂದು ವಾರಗಳ ಮುಂಚೆ ಸಿದ್ದತೆ ಕೈಗೊಳ್ಳುತ್ತಾರೆ. ಆದರೆ ನಾಳೆ ಎ.12 ರಂದು ನಡೆಯಲಿರುವ ಮಾಲೆ ವಿಸರ್ಜನೆಗೆ ಜಿಲ್ಲಾಡಳಿತ, ದೇವಸ್ಥಾನ ಸಿಇಓ ಮತ್ತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸಿದ್ದತೆ ಕೈಗೊಂಡಿಲ್ಲ. ಅಂಜನಾದ್ರಿ ರಸ್ತೆ ಹದೆಗಟ್ಟಿದ್ದು, ಭಕ್ತರು ದೇವಸ್ಥಾನಕ್ಕೆ ಬರಲು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮುತುವರ್ಜಿವಹಿಸಿ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಮಾಲಾಧಾರಿಗಳ ಅನುಕೂಲಕ್ಕೆ ಪಾರ್ಕಿಂಗ್, ನೀರಿನ ಸೌಲಭ್ಯ, ಅಲಂಕಾರ, ತೀರ್ಥ ಪ್ರಸಾದ, ವಸತಿ ಸೌಲಭ್ಯ, ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಾಲಾಧಾರಿಗಳಿಗೆ ಎಲ್ಲಾ ರೀತಿಯ ಮೂಲ ಸೌಕರ್ಯ ಇದಗಿಸಿ ಕೊಡಬೇಕು. ಮತ್ತು ಸೂಕ್ತ ಬಂದೊಬಸ್ತ್ ಏರ್ಪಡಿಸಬೇಕು ಎಂದು ಪಂಪಣ್ಣ ನಾಯಕ ಸೇರಿದಂತೆ ಭಕ್ತರು ಒತ್ತಾಯಿಸಿದ್ದಾರೆ.
ಬಾಕ್ಸ್
ನಿರ್ಲಕ್ಷಕ್ಕೆ ಹಿಂಜಾವೇ ಆಕ್ರೋಶ
ನಾಳೆ ಅಂಜನಾದ್ರಿಯಲ್ಲಿ ನಡೆಯುವ ಹನುಮಮಾಲೆ ವಿಸರ್ಜನೆಗೆ ಬರುವ ಸಹಸ್ರಾರು ಭಕ್ತರಿಗೆ ಸ್ನಾನಗಟ್ಟ, ಕುಡಿಯುವ ನೀರು, ಪ್ರಸಾದ, ಮಾಲೆ ವಿಸರ್ಜನೆಗೆ ಯಾವುದೇ ರೀತಿ ವ್ಯವಸ್ಥೆ ಕೈಗೊಂಡಿಲ್ಲ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಅಯ್ಯನಗೌಡ ಸೇರಿದಂತೆ ಮಾಲಾಧಾರುಗಳು ಜಿಲ್ಲಾಡಳಿತ ಮತ್ತು ದೇವಸ್ಥಾನದ ಸಿಇಓ ಪ್ರಕಾಶರಾವ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಜನಾದ್ರಿಗೆ ವರ್ಷದಲ್ಲಿ ಎರಡು ಬಾರಿ ಮಾಲೆ ವಿಸರ್ಜನೆ ನಡೆಯತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ನಾಳೆ ಎ
12 ರಂದು ನಡೆಯುವ ಮಾಲೆ ವಿಸರ್ಜನೆಗೆ ಭಕ್ತರು ಆಗಮಿಸುತ್ತಾರೆ. ಆದರೆ ಇದುವರೆಗೂ ಅಂಜನಾದ್ರಿಯಲ್ಲಿ ಯಾವುದೇ ಸೌಲಭ್ಯ ಒದಗಿಸಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಒಂದು ಬಾರಿಯಾದರೂ ಅಂಜನಾದ್ರಿಗೆ ಬಂದು ವ್ಯವಸ್ಥೆ ಸೌಲಭ್ಯವನ್ನು ಪರಿಶೀಲಿಸದೆ ನಿರ್ಲಕ್ಷವಹಿಸಿದ್ದಾರೆ. ಈಗಲಾದರೂ ತಕ್ಷಣ ಅಂಜನಾದ್ರಿಗೆ ಭೇಟಿ ನೀಡಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಅಗ್ರಹಿಸಿದ್ದಾರೆ.
