ಕೊಪ್ಪಳ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧ್ಯಕ್ಷರಾಗಿ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಸನ್‌ಸಾಬ್ ದೋಟಿಹಾಳ್ ಅವರನ್ನು ನೇಮಕ ಮಾಡಲಾಗಿದೆ.
ಶುಕ್ರವಾರ ಸರಕಾರದ ಜಲ ಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿ ಧನಂಜಯ ಅವರು ಅಧಿಕೃತವಾಗಿ ನೇಮಕಾತಿ ಆದೇಶ ಮಾಡಿದ್ದಾರೆ. ಮಾಜಿ ಶಾಸಕರಾಗಿರುವ ಹಸನ್‌ಸಾಬ್ ದೋಟಿಹಾಳ ಅವರು ಕಳೆದ ೨೦೦೮ರಲ್ಲಿ ಅಮರೇಗೌಡ ಬಯ್ಯಾಪುರ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಎಂಟ್ರಿಯಾಗುತ್ತಿದ್ದಂತೆ ಹಸನ್‌ಸಾಬ್ ದೊಟಿಹಾಳ ಅವರು ಟಿಕೆಟ್‌ನಿಂದ ವಂಚನೆಗೊಳಗಾಗಿದ್ದರು. ಆದರೂ ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯಿಂದ ಕೆಲಸ ಮಾಡಿದ್ದರು. ಈಗ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅವರನ್ನು ಗುರುತಿಸಿ ಈ ಹುದ್ದೆ ನೀಡಿದ್ದರಿಂದ ದೊಟಿಹಾಳ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.