ಗಂಗಾವತಿ.
ವಿದ್ಯಾರ್ಥಿನಿಯರಿಗೆ ಅಪರಿತ ಇಬ್ಬರು  ಯುವಕರು ಕಿರಕ್ ಮಾಡಿ ಏಕಾ ಏಕಿ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ಕಳೆದ ದಿನ ಬುಧವಾರ ಸಂಜೆ 6.00 ಗಂಟೆ ಸುಮಾರಿಗೆ ನಗರದ ಆನೆಗೊಂದಿ ರಸ್ತೆಯ PLD Bank ಎದುರಿಗೆ ಘಟನೆ ನಡೆದಿದೆ.     ನಗರದ PLD bank ಎದುರಿನ ರಸ್ತೆಯ ವಿಜಯನಗರ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೇಟ್ರಿಕ್ ನಂತರದ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರಿಗೆ ಇಬ್ಬರು ಅಪರಿಚಿತ ಯುವಕರು ಕಿರಕ್ ಮಾಡಿದ್ದಾರೆ. ಬಿಎಡ್ ಅಭ್ಯಾಸ ಮಾಡುವ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿನಿಯರು   ಕಾಲೇಜ್ ಮುಗಿಸಿಕೊಂಡು  ಸಂಜೆ ಹಾಸ್ಟೇಲ್ ಗೆ ವಾಪಸ್ ಬರುವಾಗ ಹತ್ತಿರದಲ್ಲೇ ಇರುವ ಪಿಎಲ್ ಡಿ ಬ್ಯಾಂಕ್ ಮುಂದಿನ ಬೇಕರಿಯಲ್ಲಿ ತಮ್ಮ ತರಗತಿಯ ಒಬ್ಬ ಗೆಳೆಯನೊಂದಿಗೆ  ಬೇಕರಿ ತಿನಿಸು ತಿನ್ನುತ್ತಾ ನಿಂತಿದ್ದಾರೆ. ಈ ಸಮಯದಲ್ಲಿ ಇಬ್ಬರು ಅಪರಿಚಿತ ಯುವಕರು ಬೈಕ್ ಮೇಲೆ ಬಂದು ವಿದ್ಯಾರ್ಥಿನಿಯರ ಜೊತೆಯಲ್ಲಿದ್ದ ಗೆಳೆಯನೊಂದಿಗೆ ತಗಾದೆ ತೆಗೆದು ಹಲ್ಲೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಮುಂದಾದ ಇಬ್ಬರು ವಿದ್ಯಾರ್ಥಿಯರಿಗೆ ಕಿರಕ್ ಮಾಡಿ ಮೈ ಕೈ ಮುಟ್ಟಿ ಹಲ್ಲೆ ಮಾಡಲು ಯತ್ನಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಹಲ್ಲೆ ಮಾಡಲು ಬಂದ ಯುವರನ್ನು ತಡೆಯಲು ಮುಂದಾಗುತ್ತಿದ್ದಂತೆ ಯುವರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಗೆ ಗಾಬರಿಗೊಂಡ ವಿದ್ಯಾರ್ಥಿನಿಯರು ಹಾಸ್ಟೆಲ್ ಗೆ ಬಂದು ನಿಲಯ ಪಾಲಕರಿಗೆ ವಿಷಯ ತಿಳಿಸಿ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಮೌಖಿಕ ದೂರನ್ನು ಆಲಿಸಿದ ಪೊಲೀಸರು ಘಟನೆ ನಡೆದ ಸ್ಥಳದಲ್ಲಿನ ಬೇಕರಿಯಲ್ಲಿರುವ ಸಿಸಿ ಕ್ಯಾಮರಾ ಫುಟೇಜ್ ನ್ನು ಪಡೆದುಕೊಂಡು ಹೊಗಿದ್ದು, ಲಿಖಿತ ದೂರು ಸ್ವಿಕರಿಸದೇ ಬಿಚಾರಣೆ ನಡೆಸುವುದಾಗಿ ವಿದ್ಯಾರ್ಥಿನಿಯರಿಗೆ ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದಾರೆ.
ವಿದ್ಯಾರ್ಥಿನಿಯರೊಂದಿಗೆ ಠಾಣೆಗೆ ಆಗಮಿಸಿದ್ದ ನಿಲಯ ಪಾಲಕಿ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹಾಸ್ಟೇಲ್ ಗೆ ವಾಪಸ್ಸಾಗಿದ್ದಾರೆ.  ಘಟನೆ ಕುರಿತು   ಹಾಸ್ಟೇಲ್  ನಿಲಯ ಪಾಲಕಿ ಸವಿತಾ ಬೊರಣ್ಣನವರ್  ಮಾಹಿತಿ ನೀಡಿದ್ದು,  ಹಲ್ಲೆಗೆ ಯತ್ನಿಸಿದ್ದ ಯುವಕರು ನಮ್ಮ ವಿದ್ಯಾರ್ಥಿನಿಯರಿಬ್ಬರಿಗೂ ಪರಿಚಯವಿಲ್ಲವಂತೆ.  ಆದರೆ ಏಕಾ ಏಕಿ ಆಗಮಿಸಿ ಕಿರಕ್ ಮಾಡಿ ಹಲ್ಲೆ ಮಾಡಲು ಮುಂದಾಗಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಸಿಸಿ ಕ್ಯಾಮರ್ ಫುಟೇಜ್  ಗಮನಿಸಿದ್ದಾರೆ. ನಾಳೆ ಬೆಳಗ್ಗೆ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಹಾಸ್ಟೆಲ್ ಗೆ ಹೊಗಿ ಎಲ್ಲಾ ವಿದ್ಯಾರ್ಥಿನಿಯರಿಗೆ ಧೈರ್ಯ ಹೇಳಿ ಈಗ  ಮನೆಗೆ ಬಂದಿದ್ದೇನೆ ಎಂದರು.
ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿನಿಯರು ತಕ್ಷಣ ಠಾಣೆಗೆ ಆಗಮಿಸಿ ಮಾಹಿತಿ ತಿಳಿಸದರೂ ಕೂಡಾ ಪೊಲೀಸರು   ದೂರು ಸ್ವೀಕರಿಸಿ ಹಲ್ಲೆಗೆ ಮುಂದಾದ ಯುವಕರನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಆಶ್ಚರ್ಯ ಮೂಡಿಸಿದೆ,  ಘಟನೆಯನ್ನು ಪೊಲೀಸರು ಗಂಭಿರವಾಗಿ ಪರಿಗಣಿಸದೇ  ನಿರ್ಲಕ್ಷ ಮಾಡಿರುವುದು ಸರಿಯಲ್ಲ ಎಂದು ಘಟನೆ ಗಮನಿಸಿದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತು ಕಿರಕ್ ಮಾಡಿರುವ ಯುವಕರನ್ನು ಪತ್ತೆ ಹಚ್ಚಿ  ಕ್ರಮ ಕೈಹೊಳ್ಳಬೇಕೆಂದು ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!