ಸಮರ್ಥವಾಣಿ ವಾರ್ತೆ
ಸಿಂಧನೂರು,ಡಿ.27: ನಗರದ ವಾರ್ಡ್ ೨೨ರಲ್ಲಿ ತೆರವಾಗಿದ್ದ ನಗರಸಭೆ ಸದಸ್ಯ ಸ್ಥಾನಕ್ಕೆ ಬುಧುವಾರ ಶೇ. ೬೭.೪೮ ರಷ್ಟು ಶಾಂತಿಯುತ ಮತದಾನ ನಡೆಯಿತು.
ನಗರಸಭೆ ಸದಸ್ಯ ಮುನಿರಪಾಷಾ ನಿಧನರಾಗಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಅಬೇದಾ ಬೇಗಂ ಕಾಂಗ್ರೆಸ್ ಪಕ್ಷದಿಂದ, ಜೆಡಿಎಸ್‌ನಿಂದ ಎಂ. ಮಹೆಬೂಬ್, ಬಿಜೆಪಿಯಿಂದ ಮಲ್ಲಿಕಾರ್ಜುನ ಕಾಟಗಲ್ ಹಾಗೂ ಎಸ್‌ಡಿಪಿಐ ನಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಅಭ್ಯರ್ಥಿಗಳಾಗಿದ್ದರು.
ಒಟ್ಟು ೧೭೦೪ ಅರ್ಹ ಮತದಾರ ರಿದ್ದು ಅದರಲ್ಲಿ ಪುರುಷರು ೮೬೨, ಮಹಿಳೆಯರು ೮೪೧ ಇತರೆ ೧ ಇದ್ದರು. ಅವರಲ್ಲಿ ೫೭೬ ಪುರುಷರು, ೫೭೪ ಮಹಿಳೆಯರು ಒಟ್ಟು ೧೧೫೦ ಮತದಾರರು ಮತ ಚಲಾಯಿಸಿದರು.
ಈ ಬಾರಿ ನಡೆದ ಉಪ ಚುನಾವಣೆ ಯಲ್ಲಿ ಮೂರು ಪ್ರಮುಖ ಪ್ಷಕದ ಅಭ್ಯರ್ಥಿಗಳು ಅನುಕುಂಪದ ಅಸ್ತ್ರವನ್ನು ಬಳಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಬೇದ ಬೇಗಂ ನಿಧನದ ಅನುಕಂಪವನ್ನೆ ಬಳಸಿ ಕೊಂಡರು. ಜೆಡಿಎಸ್ ಎಂ. ಮಹೆಬೂಬ ಕಳೆದ ಬಾರಿ ಕೇವಲ ೧೪ ಮತಗಳ ಅಂತರದಿಂದ ಸೋತಿ ರುವುದನ್ನೇ ಮತದಾರರಿಗೆ ಹೇಳಿ ಅನುಕಂಪದ ಮತ ಯಾಚಿಸಿದರು. ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಕಾಟಗಲ್ ಕಳೆದ ಬಾರಿ ಸೋತಿದ್ದು ಈ ಬಾರಿ ಅವಕಾಶ ಕೊಡಿ ಎಂದು ಮತ ಯಾಚಿಸಿದ್ದರು. ಎಸ್‌ಡಿಪಿಐ ನ ಅಭ್ಯರ್ಥಿ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಕ್ಷೇತ್ರದಲ್ಲಿ ಹೊಸಬರಾಗಿದ್ದು ಒಂದು ಬಾರಿ ಅವಕಾಶ ಕೊಡಿ ಎಂದು ಮತ ಕೇಳಿದ್ದರು.
ಎಲ್ಲ ಪಕ್ಷದ ಮುಖಂಡರು ಜಿದ್ದಾ ಜಿದ್ದಿ ಪ್ರಚಾರ ನಡೆಸಿದ್ದರು. ಮತದಾನ ಮುಗಿದ್ದು, ಈಗ ಎಲ್ಲರು ಡಿ. ೩೦ ಫಲಿಂತಾಶದವರೆಗೆ ಸೋಲು ಗೆಲು ವುವಿನ ಲೆಕ್ಕಾಚಾರದಲ್ಲಿ ಕಾಯು ವಂತಾಗಿದೆ. ಚುನಾವಣಾಧಿಕಾರಿ ಯಾಗಿ ವೀರೇಶ ಗೋನ್ವಾರ, ಸಹಾಯಕ ಅಧಿಕಾರಿ ಯಾಗಿ ರಾಮದಾಸ ಹಾಗೂ ಒಟ್ಟು ೧೦ ಜನ ಸಿಬ್ಬಂದಿ ಹಾಗೂ ೧೨ ಪೋಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!