ಗಂಗಾವತಿ.
ಕೃಷಿ ಇಲಾಖೆ ಅಡಿಯಲ್ಲಿ ಬರುವ ಗಂಗಾವತಿ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರೀಯೆಗೆ ಚುನಾವಣೆ ನಡೆದಿದ್ದು, 15 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಚುನಾವಣಾಧಿಕಾರಿಗಳು ಅಧಿಕೃತ ಪ್ರಕಟಣೆ ಘೋಷಣೆ ಮಾಡಿದ್ದಾರೆ. 2025–26ರಿಂದ 2026-30-ನೇ ಸಾಲಿಗೆ ಐದು ವರ್ಷದ ಅವಧಿಯಲ್ಲಿ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿಣಿ ಸಮಿತಿಗೆ 15 ಜನ ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, 15ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಘೋಷಣೆ ಮಾಡಲಾಯಿತು. ಮಲ್ಲಿಕಾರ್ಜುನ ವಿರುಪಣ್ಣ ಕ್ಯಾಡೆದ್ ಕೆಸರಹಟ್ಟಿ, ರಮೇಶ ಕುಲಕರ್ಣಿ ಮರಳಿ, ದೇವಪ್ಪ ಹೂಗಾರ ಮರಳಿ, ಮಲ್ಲೇಶಪ್ಪ ಹೊಸಳ್ಳಿಕ್ಯಾಂಪ್, ಮಸ್ಕಿಂ ಮಂಜುನಾಥ ಗಂಗಾವತಿ, ಹನುಮಂತಪ್ಪ ಉಪ್ಪಾರ ಕೆಸರಹಟ್ಟಿ, ವಾಸುದೇವ ನವಲಿ ಗಂಗಾವತಿ, ಹುಚ್ಚನಗೌಡ ಹಣವಾಳ, ಕೆ.ಲಿಂಗನಗೌಡ ಹೇರೂರು, ಕುಮಾರೆಪ್ಪ ಕನಕರೆಡ್ಡಿ ಸಿಂಗನಾಳ, ಬಿ.ದುರಗಪ್ಪ ಸಿಂಗನಾಳ, ಅಯ್ಯಣ್ಣ ಹೇಮಗುಡ್ಡ ಆಚಾರನರಸಾಪುರ, ಅಮರೇಶಪ್ಪ ಗೋನಾಳ ಹೇರೂರು, ಜೋಗದ ಹನುಮಂತಪ್ಪ ನಾಯಕ ಗಂಗಾವತಿ ಮತ್ತು ಚನ್ನಪ್ಪ ಮಳಗಿ ವಕೀಲರು ಆಯ್ಕೆಯಾಗಿದ್ದಾರೆ. ಈ ಹದಿನೈದು ಸದಸ್ಯರಲ್ಲಿ ಮುಂದಿನ ದಿನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಅಧ್ಯಕ್ಷರ ಆಯ್ಕೆಯಲ್ಲಿ ಕಸರತ್ತು ಜೋರಾಗಲಿದೆ.