ಕೊಪ್ಪಳ: ತಾಲೂಕಿನ ಬೂದುಗುಂಪ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶ್ರೀ ಕರಿಯಮ್ಮ ದೇವಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಸ್ಥಾಪಿತವಾದ ಡಾ.ರಾಧಾಕೃಷ್ಣನ್ ಪಬ್ಲಿಕ್ ಸ್ಕೂಲ್ ಬೂದುಗುಂಪ ಶಾಲೆಯಲ್ಲಿ ಕೊಪ್ಪಳದ ಸೆಕ್ಯೂರ್ ಆಸ್ಪತ್ರೆ ಹಾಗೂ ಖುಷಿ ಫೌಂಡೇಶನ್ ಸಹಯೋಗದಲ್ಲಿ ಒಂದು ದಿನದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ತಪಾಸಣೆ ಶಿಬಿರದ ಉಪಯೋಗವನ್ನು ಎರಡು ನೂರಕ್ಕೂ ಅಧಿಕ ಜನರು ಪಡೆದುಕೊಂಡರು.
ಹಾಗೂ ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ಎಲ್ಲಾ ಮಕ್ಕಳನ್ನು ಆರೋಗ್ಯ ತಪಾಸಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಮಧುಸೂದನ್ ಡೊಳ್ಳಿನ ಅವರು ಮಾತನಾಡಿ ಇಂತಹ ಶಿಬಿರಗಳು ಸಾಕಷ್ಟು ನಡೆಯಬೇಕು ಮತ್ತು ಜನರು ಇದರ ಉಪಯೋಗಗಳನ್ನು ಪಡೆದುಕೊಳ್ಳಬೇಕು,
ಶಾಲೆಗಳು ಶಿಕ್ಷಣದ ಜೊತೆಗೆ ಸಮಾಜದ ಜನರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವದಲ್ಲದೆ ಈ ರೀತಿಯ ಉಚಿತ ಶಿಬಿರಗಳನ್ನು ನಡೆಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು,
ಉಚಿತ ಶಿಬಿರದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅವಶ್ಯ ಇರುವ ಟಾನಿಕ್ ಮೆಡಿಸನ್ ಉಚಿತವಾಗಿ ನೀಡಲಾಯಿತು,
ಪ್ರತಿ ವರ್ಷ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಮಾಡುವುದರಲ್ಲಿ ರಾಧಾಕೃಷ್ಣ ಪಬ್ಲಿಕ್ ಶಾಲೆ ಬೂದಗುಂಪ ಯಾವಾಗಲೂ ಒಂದು ಹೆಜ್ಜೆ ಮುಂದೆ ಸಾಕಷ್ಟು ಕಾರ್ಯಕ್ರಮಗಳನ್ನು ಈಗಾಗಲೇ ಈ ಶಾಲೆಯ ನೇತೃತ್ವದಲ್ಲಿ ಮಾಡಲಾಗಿದೆ ಮತ್ತು ಮುಂದೆಯೂ ಕೂಡ ಅನೇಕ ಕಾರ್ಯಕ್ರಮಗಳನ್ನು ಮಾಡುವ ಆಸಕ್ತಿ ಈ ಶಾಲೆಯ ಮುಖ್ಯಸ್ಥರಿಗೆ ಮತ್ತು ಎಲ್ಲಾ ಶಿಕ್ಷಕ ವರ್ಗಕ್ಕೂ ಹಾಗೂ ಸಿಬ್ಬಂದಿ ವರ್ಗಕ್ಕೂ ಇದೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದರಾಜ್ ಬೂದಗುಂಪ ಶ್ಲಾಘನೆ ವ್ಯಕ್ತಪಡಿಸಿದರು.