ಕೊಪ್ಪಳ ತಾಲುಕಿನ ಯತ್ನಟ್ಟಿ ಗ್ರಾಮದ ತ್ರೀದಾಸೋಹ ಮಠದ ಶ್ರೀ ಬಸವಾರಾಜೇಶ್ವರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಅಂಧಕಾರ ಅಡಗಿಸುವ ಬಾಳಿನಲ್ಲಿ ಹೊಸ ಬೆಳಕು ನೀಡುವ ಕಾರ್ತಿಕೋತ್ಸವನ್ನು ಆಚರಿಸಲಾಯಿತು ಅಂದು ಮೈನಹಳ್ಳಿ ಮತ್ತು ಮೆತ್ತಗಲ್ ಗ್ರಾಮದ ಭಜನಾ ಸಂಘದವರು ರಾತ್ರಿ ಪೂರ್ತಿ ಭಜನೆ ಮಾಡುವದರ ಮೂಲಕ ತಮ್ಮ ಭಕ್ತಿ ಮೆರೆದರು.. ಮರುದಿವಸ ಬುಧವಾರ ೨೦-೧೨-೨೦೨೩ ರಂದು ಶೀ ಬಸವರಾಜೇಶ್ವರ ಸ್ವಾಮಿಗಳ ೭೩ ನೇ ಪುಣ್ಯತಿಥಿಯನ್ನು ಸ್ವಾಮಿಗಳ ಗದ್ದುಗಿಗೆ ಆಭಿಷೇಕ ಮಾಡುವದರ ಮೂಲಕ ಭಕ್ತರು ಸೇವೆ ಸಲ್ಲಿಸಿದರು ಮತ್ತು ಪರಸ್ಠಳದಿಂದ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಠೆ ಮಾಡಲಾಗಿತ್ತು.
ಹೂವಿನ ಹಡಗಲಿ ಶ್ರಿ ಗವಿಸಿದ್ದೇಶ್ವರ ಮಠದ ಡಾ .ಶ್ರಿ.ಹಿರಿಶಾಂತವೀರ ಮಾಹಾಸ್ವಾಮಿಗಳು ಸಾನಿಧ್ಯವಹಿಸಿ ಭಕ್ತರ ಕಾಮದೇನು ಶ್ರೀ ಬಸವರಾಜೇಶ್ವರ ಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿ ಧಾರ್ಮಿಕ ಕಾರ್ಯಗಳು ಸದಾ ಸಾಗುತ್ತಿರಲೆಂದು ತಿಳಿಸಿದರು.. ಸಾಹಿತಿ, ಕಲಾವಿದ ಡಾ..ಷಣ್ಮುಖಯ್ಯ ತೋಟದ. ಮಠದ ಭಕ್ತರಾದ ಮಂಜಪ್ಪ ಹೆಬ್ಬಾಳ, ಪತ್ರೆಪ್ಪ ಮೂಲಿಮನಿ, ಈರಣ್ಣ ಓಜಿನಹಳ್ಳಿ, ಈಶಪ್ಪ ಮಾಸ್ತರ ಓಜಿನಹಳ್ಳಿ ,ಸಿದ್ದಣ್ಣ, ಹಾಗು. ಯುವ ಜಾಗೃತಿ ಪತ್ತಿಕೆಯ ಸಂಪಾದಕರಾದ ಉದಯ,ಎಸ್.ತೋಟದ. ಗ್ರಾಮದ ಹಿರಿಯರು ಸುತ್ತಮುತ್ತಲಿನ ಗ್ರಾಮದ ಭಕ್ತರು ಸೇವೆಯಲ್ಲಿ ಪಾಲುಗೊಂಡಿದ್ದರು.